HomeUncategorizedಉಂಡ ಮನೆಗೆ ಕನ್ನ ಹಾಕಿದ ಖದೀಮ: ವೈದ್ಯನ ಮನೆಯ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ ಕೇರ್ ಟೇಕರ್...

ಉಂಡ ಮನೆಗೆ ಕನ್ನ ಹಾಕಿದ ಖದೀಮ: ವೈದ್ಯನ ಮನೆಯ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ ಕೇರ್ ಟೇಕರ್ ಸೇರಿ ಇಬ್ಬರು ಅರೆಸ್ಟ್

ಬೆಳಗಾವಿ: ವೈದ್ಯರೊಬ್ಬರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಕೇರ್ ಟೇಕರ್‌ ಸೇರಿ ಇಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಕಾಗವಾಡ ಮೂಲದ ರಾಹುಲ್ ಸತೀಶ್ ಕಾಂಬಳೆ (27) ಎಂಬ ಕೇರ್ ಟೇಕರ್ ಹಾಗೂ ಕದ್ದ ಚಿನ್ನ ಮಾರಾಟ ಮಾಡಲು ಸಹಾಯ ಮಾಡಿದ ಕಾಗವಾಡದ ಬಾಬಾಸಾಹೇಬ್ ಕಟಗೇರಿ ಬಂಧಿತ ಆರೋಪಿಗಳು.

ಬೆಳಗಾವಿ ಕ್ಯಾಂಪ್ ಠಾಣಾ ವ್ಯಾಪ್ತಿಯ ನಿವಾಸಿ ಡಾ. ವಿಶ್ವನಾಥ್ ಧಡೇದ ಅವರ ಮನೆಯಲ್ಲಿ ಮೇ 11ರಂದು ಕಳ್ಳತನ ನಡೆದಿತ್ತು. ಡಾ.ವಿಶ್ವನಾಥ್ ಅವರ ಪತ್ನಿ ಅನ್ನಪೂರ್ಣಾ ಧಡೇದ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಕ್ರೈಂ ನಿರಂಜನ್‌ರಾಜೆ ಅರಸ್, ಖಡೇ ಬಝಾರ್ ಎಸಿಪಿ ಶೇಖರಪ್ಪ ಮತ್ತು ಕ್ಯಾಂಪ್ ಪಿಐ ಆನಂದ್ ನೇತೃತ್ವದ ವಿಶೇಷ ತಂಡ ಕಾರ್ಯಾಅಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯಲ್ಲಿದ್ದ ಕಪಾಟಿನ ಬೀಗವನ್ನೂ ಒಡೆಯದೇ ಚಾಣಾಕ್ಷ್ಯತನದಿಂದ ಚಿನ್ನಾಭರಣಗಳನ್ನು ಖದೀಮರು ದೋಚಿದ್ದರು. 930 ಗ್ರಾಂ ಚಿನ್ನಾಭರಣ ಕಳುವು ಮಾಡಿದ್ದ ಆರೋಪಿಗಳನ್ನು ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಗವಾಡದ ಬಾಬಾಸಾಹೇಬ್ ಕಟಗೇರಿ ಎಂಬಾತನ ಮೂಲಕ ಚಿನ್ನ ಮಾರಾಟ ಮಾಡಲು ಯತ್ನಿಸಿದ್ದು, 52.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನ ಹಾಗೂ ಖಾಸಗಿ ಫೈನಾನ್ಸ್ ನಲ್ಲಿ ಅಡಮಾನವಿಟ್ಟು 22.8 ಲಕ್ಷ ರೂ. ಸಾಲ ಪಡೆದಿದ್ದ ಚಿನ್ನ ಸೇರಿದಂತೆ ಒಟ್ಟು 73.3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಚಿನ್ನದ ವಶಕ್ಕಾಗಿ ತನಿಖೆ ಮುಂದುವರೆಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular