HomeCrimeನಿಗೂಢವಾಗಿ ನಾಪತ್ತೆಯಾದ ಯುವಕ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ತ್ರಿಕೋನ ಪ್ರೇಮದ ಕೊಲೆ ರಹಸ್ಯ

ನಿಗೂಢವಾಗಿ ನಾಪತ್ತೆಯಾದ ಯುವಕ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ತ್ರಿಕೋನ ಪ್ರೇಮದ ಕೊಲೆ ರಹಸ್ಯ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕನ ಕೊಲೆ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ವಿಕಾಸ ದಳವಾಯಿ(18) ತ್ರಿಕೋನ ಪ್ರೇಮ ಪ್ರಕರಣಕ್ಕೆ ಬಲಿಯಾದ ಯುವಕ. ಯುವತಿಯ ಇನ್ನೊಬ್ಬ ಪ್ರೇಮಿ ಕೃಷ್ಣ ಮತ್ತು ಆಕೆಯ ಸಹೋದರ ರಾಜು ಸೇರಿ ವಿಕಾಸ್ ನನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಮೇ 20ರಂದು ರಾತ್ರಿ ಗಿರಿಸಾಗರ ಗ್ರಾಮದಲ್ಲಿ ಓಂಕಾರೇಶ್ವರ ದೇವಿ ಜಾತ್ರೆಯ ಪ್ರಯುಕ್ತ ನಾಟಕ ಆಯೋಜಿಸಲಾಗಿತ್ತು. ರಾತ್ರಿ 10 ಗಂಟೆಗೆ ನಾಟಕ ನೋಡಿ ಬರುವುದಾಗಿ ವಿಕಾಸ್ ದಳವಾಯಿ ಮನೆಯಿಂದ ಹೊರಗೆ ಹೋಗಿದ್ದ. ಆದರೆ ತಡರಾತ್ರಿಯಾದರೂ ಆತ ಮನೆಗೆ ವಾಪಸ್ ಆಗಿರಲಿಲ್ಲ. ಹುಡುಕಾಟ ನಡೆಸಿದ ಕುಟುಂಬದವರು ಬೀಳಗಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರು ತನಿಖೆ ಕೈಗೊಂಡಾಗ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪಿಗಳಾದ ಕೃಷ್ಣ ಮತ್ತು ರಾಜು ಸೇರಿ ವಿಕಾಸ್ ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಗೋಣಿಚೀಲದಲ್ಲಿ ಹಾಕಿ ಅದರಲ್ಲಿ ಭಾರವಾದ ಕಲ್ಲುಗಳನ್ನು ತುಂಬಿ ಬೀಳಗಿ ತಾಲೂಕಿನ ಅನಗವಾಡಿ ಸಮೀಪ ಘಟಪ್ರಭಾ ನದಿಗೆ ಎಸೆದು ಪರಾರಿಯಾಗಿದ್ದಾರೆ. ನದಿಯಿಂದ ವಿಕಾಸ್ ಶವ ಹೊರ ತೆಗೆಯಲಾಗಿದೆ.

ಕೊಲೆಯಾದ ವಿಕಾಸ್ ಮತ್ತು ಆರೋಪಿ ಕೃಷ್ಣ ಒಬ್ಬಳನ್ನೇ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆಕೆ ತನಗೆ ಮಾತ್ರ ಸಿಗಬೇಕೆಂದು ಸಂಚು ರೂಪಿಸಿದ ಕೃಷ್ಣ ಯುವತಿಯ ಸಹೋದರ ರಾಜು ಬಳಿ ನಿನ್ನ ತಂಗಿಯನ್ನು ವಿಕಾಸ್ ಪ್ರೀತಿಸುತ್ತಿದ್ದಾನೆ. ಇದರಿಂದ ಊರಲ್ಲಿ ನಿನಗೆ ಅವಮಾನವಾಗುವುದಿಲ್ಲವೇ ಎಂದು ಕೊಲೆಗೆ ಪ್ರೇರೇಪಿಸಿದ್ದಾನೆ. ಕೃಷ್ಣನ ಮಾತಿಗೆ ಒಗೊಟ್ಟ ಸಹೋದರ ರಾಜು ವಿಕಾಸ್ ಕೊಲೆಗೆ ಸಹಕರಿಸಿದ್ದಾನೆ.

ಬೀಳಗಿ ಠಾಣೆ ಪೊಲೀಸರು ಅನುಮಾನದ ಮೇಲೆ ರಾಜು ಸಹೋದರ ರವಿ ಎಂಬುವನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ವಿಕಾಸ್ ಕೊಲೆ ರಹಸ್ಯ ಬಯಲಿಗೆ ಬಂದಿದೆ. ಆರೋಪಿಗಳಾದ ಕೃಷ್ಣ ಮತ್ತು ರಾಜು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular