ಬೆಂಗಳೂರು: ಕೆಪಿಎಸ್ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿಯಿಂದ ಬಂಧನಕ್ಕೀಡಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗೆ ಜಾರಿ ನಿರ್ದೇಶನಾಲಯ-ಇಡಿ ಸಂಕಷ್ಟ ಎದುರಾಗಿದೆ.
ಸಿಬಿಐ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಕೋರ್ಟ್ ಜ್ಞಾನೇಂದ್ರ ಕುಮಾರ್ ಅವರನ್ನು ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಇಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಕೇಳಿದ್ದರು. ಇದೀಗ ಕೋರ್ಟ್ ಜ್ಞಾನೇಂದ್ರ ಕುಮಾರ್ ಅವರನ್ನು 8 ದಿನ ಇಡಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.
ಕೋರ್ಟ್ನಲ್ಲಿ ಆರೋಪಿ ಜ್ಞಾನೇಂದ್ರ ಪರ ವಕೀಲರು, ಜ್ಞಾಅನೇಂದ್ರ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದೆ. ಪಿಸಿಯೋಥೆರಪಿ ಅವಶ್ಯಕತೆ ಇದೆ. ವಿಚಾರಣೆ ಹೆಸರಲ್ಲಿ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ವಾದಿಸಿದರು.
ಈ ವೇಳೆ ಇಡಿ ಪರ ವಾದ ಮಂಡಿಸಿದ ವಕೀಲರು, 2026ರ ಜನವರಿ 9 ರಂದು ಪರೀಕ್ಷೆ ನಡೆದಿದೆ. ಪರೀಕ್ಷೆಗೂ 6 ತಿಂಗಳು ಮೊದಲಿನಿಂದಲೂ ಹಣ ಸಂಗ್ರಹಿಸಲಾಗಿದೆ. ಬಸವರಾಜ್ ಕನ್ನಾಳೆ ಜೊತೆಗೆ ಚಿನ್ನಾಭರಣ ಖರೀದಿಗೆ ಹಣದ ವ್ಯವಹಾರ ಪ್ರಸ್ತಾಪವಾಗಿತ್ತು. ಜ್ಞಾನೇಂದ್ರ ಸೋದರ ಸಂಬಂಧಿ ಬ್ಯಾಂಕ್ ಅಕೌಂಟ್ ಮೂಲಕ ಹಣ ವರ್ಗಾವಣೆ ಆಗಿದೆ. ಅಪಾರ ಪ್ರಮಾಣದ ಅಕ್ರಮ ಹಣಕಾಸು ವರ್ಗಾವಣೆಯಾಗಿರುವ ಬಗ್ಗೆ ಕೋರ್ಟ್ ಗಮನ ಸೆಳೆದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿ ಜ್ಞಾನೇಂದ್ರ ಕುಮಾರ್ ರನ್ನು 8 ದಿನ ಇಡಿ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ. ಸೆ.26 ರಿಂದ ಅ.3ರ ವರೆಗೆ ಕಸ್ಟಡಿಗೆ ನೀಡಲಾಗಿದೆ. ಅ.3ರ ಮಧ್ಯಾಹ್ನ 3 ಗಂಟೆಗೆ ಮತ್ತೆ ಕೋರ್ಟ್ ಗೆ ಹಾಜರುಪಡಿಸಲು ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.
ಹಣದ ಮಳೆ ಸುರಿಸಿ, ಕೆಜಿಗಟ್ಟಲೇ ಚಿನ್ನಾಭರಣ ಧರಿಸಿ ವಿಡಿಯೋ ಹರಿಬಿಟ್ಟ ದಂಪತಿ: ಯೂಟ್ಯೂಬರ್ ಮನೆಗೆ ನುಗ್ಗಿ ದರೋಡೆ ಮಾಡಿ ಎಸ್ಕೇಪ್ ಆದ ಕಳ್ಳರು
ಚೆನ್ನೈ: ಕೆಲ ದಿನಗಳ ಹಿಂದೆ ಉತ್ತರ ಭಾರತ ಮೂಲದ ಯೂಟ್ಯೂಬರ್ ಮಹಿಳೆಯೊಬ್ಬರು ತಮ್ಮ ಬಳಿ ಇದ್ದ ಚಿನ್ನಾಭರಣಗಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬಳಿಕ ಮನೆಯಲ್ಲಿದ್ದ ಹಣ, ಚಿನ್ನಾಭರಣಗಳ ಕಳ್ಳತನ ನಡೆದು ಅಪಾರ ಪ್ರಮಣದ ಚಿನ್ನಾಭರಣ, ನಗದು ಹಣ ಕಳೆದುಕೊಂಡು ಕಣ್ಣೀರಿಟ್ಟ ಘಟನೆ ಬೆಳಕಿಗೆ ಬಂದಿತ್ತು. ಇದೀಗ ಇಂತದ್ದೇ ಘಟನೆ ತಮಿಳುನಾಡಿನಲ್ಲಿ ಖ್ಯಾತ ಯೂಟ್ಯೂಬರ್ ದಂಪತಿ ಮನೆಯಲ್ಲಿಯೂ ನಡೆದಿದೆ.
ಯೂಟ್ಯೂಬ್ ವಿಡಿಯೋಗಾಗಿ ಖ್ಯಾಅತ ಯೂಟ್ಯೂಬರ್ ವಿನೋತ್ ಹಾಗೂ ಪತ್ನಿ ಮಧುಮಿತಾ ಮನೆಯಲ್ಲಿದ್ದ ರಾಶಿ ರಾಶಿ ಹಣ, ಚಿನ್ನಾಭರಣಗಳನ್ನು ಪ್ರದರ್ಶಿಸಿ ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಸಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದಾದ ಕೆಲವೇ ದಿನಗಳಲ್ಲಿ ಯೂಟ್ಯೂಬರ್ ವಿನೋತ್ ಅವರ ಮನೆಗೆ ನುಗ್ಗಿದ ದರೋಡೆಕೋರರು ಹಣ, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.
ತಮಿಳುನಾಡಿನ ನಾಗರ್ಕೋಯಿಲ್ ಬಳಿಯ ತುಕೋನಂನ ವಿಐಪಿ ಗಾರ್ಡನ್ನಲ್ಲಿ ವಾಸವಾಗಿರುವ ಯೂಟ್ಯೂಬರ್ ವಿನೋತ್ ಕುಮಾರ್ ಅವರ ಮನೆಯಲ್ಲಿ ಭಾರಿ ಕಳ್ಳತನ ನಡೆದಿದೆ. ಮನೆಯಲ್ಲಿದ್ದ 944 ಗ್ರಾಂ ಚಿನ್ನ ಮತ್ತು ನಗದನ್ನು ಕಳ್ಳರು ದೋಚಿದ್ದಾರೆ. ಇತ್ತೀಚೆಗೆ, ದಂಪತಿ ತಮ್ಮ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ವಿಡಿಯೋದಲ್ಲಿ ಯೂಟ್ಯೂಬರ್ ವಿನೋತ್ ಪತ್ನಿ ಮಧುಮಿತಾ ತನ್ನ ಮಗಳ ಮೇಲೆ ಹಣವನ್ನು ಸುರಿಯುತ್ತಿರುವ ಹಾಅಗೂ ತಾನು ಕೆಜಿ ಗಟ್ಟಲೆ ಚಿಭಾರಣಗಳನ್ನು ಧರಿಸಿ ಫೋಸು ನೀಡಿದ್ದ ವಿಡಿಯೋಗಳು ಇವೆ. ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಯೂಟ್ಯೂಬರ್ ಮನೆಯಲ್ಲಿದ್ದ ಹಣದ ರಾಶಿ ಹಾಗೂ ಚಿನ್ನಾಭರಣಗಳನ್ನು ಕಂಡು ನೆಟ್ಟಿಗರು ದಂಗಾಗಿದ್ದರು.
ಈಗ ಮನೆಯಲ್ಲಿ ಯೂಟ್ಯೂಬರ್ ವಿನೋತ್ ಕುಮಾರ್, ಪತ್ನಿ ಮಧುಮಿತಾ ವಾಸವಾಗಿದ್ದ ವೇಳೆಯೇ ರಾತ್ರಿ ಅಪರಿಚಿತರು ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗೆ ನುಗ್ಗಿದ್ದು, ಹಣ ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಸಾಮಾಜಿಕ ಜಾಲತಣಗಳಲ್ಲಿ ಹಣ ಹಾಗೂ ಚಿನ್ನಾಭರಣಗಳ ವಿಡಿಯೋ ಹರಿಬಿಟ್ಟ ಬಳಿಕ ಈ ಘಟನೆ ನಡೆದಿದೆ. ಕನ್ಯಾಅಕುಮಾರಿ ಮೂಲದ ವಿನೋತ್ ಕುಮಾರ್ ಹಾಗೂ ಮಧುಮಿತಾ ದಂಪತಿ ಜನಪ್ರಿಯ ಯೂಟ್ಯೂಬರ್ ಗಳಾಗಿದ್ದಾರೆ. ಘಟನೆ ಸಂಅಬ್ಂಧ ರಾಜಕ್ಕಮಂಗಲಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳು ಮತ್ತು ದಂಪತಿಯ ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನು ಪರಿಶೀಲಿಸುತ್ತಿದ್ದಾರೆ.

