HomeUncategorizedಮೂರೂವರೆ ಲಕ್ಷ ಸಬ್‌ಸ್ಕ್ರೈಬರ್ಸ್ ಇರುವ ಈ ಯುಟ್ಯೂಬರ್ ಕಂಟೆಂಟ್ ನೋಡಿದರೆ ನಿಮಗೆ ಕೋಪ ಬರದೇ ಇರದು;...

ಮೂರೂವರೆ ಲಕ್ಷ ಸಬ್‌ಸ್ಕ್ರೈಬರ್ಸ್ ಇರುವ ಈ ಯುಟ್ಯೂಬರ್ ಕಂಟೆಂಟ್ ನೋಡಿದರೆ ನಿಮಗೆ ಕೋಪ ಬರದೇ ಇರದು; ವಿಡಿಯೊ

ಕೊರೊನಾ ಬಳಿಕ ಸಾಮಾಜಿಕ ಜಾಲತಾಣದ ಗೀಳು ವಿಪರೀತವಾಗಿಬಿಟ್ಟಿದೆ. ಕೈಗೆ ಒಂದೊಳ್ಲೆ ಮೊಬೈಲ್ ಸಿಕ್ಕವರೆಲ್ಲ ವ್ಲಾಗ್ ಶುರುವಿಟ್ಟುಕೊಂಡಿದ್ದಾರೆ. ಬೆಳಗ್ಗೆ ಎದ್ದಾಗಿನಿಂದ ಕಾಲೇಜಿಗೆ ಹೋಗಿ ಬರುವ ದಿನಚರಿಯನ್ನು ಡೈಲಿ ವ್ಲಾಗ್ ಎಂದು ಸಾಮಾನ್ಯ ಜನರ ಸಮಯ ಹಾಳು ಮಾಡುವ ಮಟ್ಟಕ್ಕೆ ಬಂದು ತಲುಪಿದ್ದಾರೆ.

ಇನ್ನು ಯಾವ ವಿಷಯದ ಮೇಲೆ ವಿಡಿಯೊ ಮಾಡಬೇಕು ಎಂಬ ಪರಿಜ್ಞಾನವಿಲ್ಲದ ಕಂಟೆಂಟ್ ಕ್ರಿಯೇಟರ್‌ಗಳ ಸಂಖ್ಯೆಯೇ ಹೆಚ್ಚಿದ್ದು, ಕಂಟೆಂಟ್ ಕ್ರಿಯೇಟರ್ ಎಂದರೆ ರಸ್ತೆಗೊಬ್ಬ ಸಿಗ್ತಾನೆ ಬಿಡು ಗುರು ಎಂಬಂತಾಗಿದೆ.

ಇದರ ನಡುವೆ ಶ್ರಮವಹಿಸಿ ಒಳ್ಳೆಯ ವಿಡಿಯೊಗಳನ್ನು ಮಾಡುವ ನಿಜವಾದ ವ್ಲಾಗರ್ಸ್ ಹೆಚ್ಚು ಖ್ಯಾತಿ ಪಡೆದುಕೊಳ್ಳುತ್ತಿಲ್ಲ ಎಂಬುದು ಸಹ ಅಷ್ಟೇ ಸತ್ಯ. ಹೀಗೆ ಕಂಟೆಂಟ್ ಕ್ರಿಯೇಟಿಂಗ್ ವೃತ್ತಿಗೆ ಕಪ್ಪು ಚುಕ್ಕೆ ತರುವಂತಹ ಯುಟ್ಯೂಬರ್ ಒಬ್ಬ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದು, ಆತನ ಕಂಟೆಂಟ್ ಕಂಡರೆ ನಿಮಗೂ ಒಮ್ಮೆ ಕೋಪ ಬರಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಅಮನ್ ಜಂಪರ್’ (@amanjumper09) ಎಂಬ ಯುಟ್ಯೂಬ್ ಚಾನೆಲ್‌ ನಡೆಸುತ್ತಿರುವ ಈತನ ಕಂಟೆಂಟ್ ಸಾರ್ವಜನಿಕ ಸ್ಥಳಗಲ್ಲಿ ಜಂಪಿಂಗ್ ಮಾಡುವುದು. ಹೆಸರಿಗೆ ತಾನೊಬ್ಬ ಸಾಹಸಿ ಯುಟ್ಯೂಬರ್ ಎಂದು ಬಿಂಬಿಸಿಕೊಳ್ಳುವ ಈತ ಮಾಡುವ ಕೆಲಸ ನಾಯಿಗಳ ಮೇಲೆ ಜಂಪ್ ಮಾಡಿ ಅವುಗಳಿಗೆ ಹಾನಿ ಮಾಡುವುದು.

ವಿಡಿಯೊ ಕ್ಯಾಪ್ಷನ್‌ನಲ್ಲಿ ನಾಯಿಗಳ ಜತೆ ಸ್ನೇಹ ಮಾಡುತ್ತೇನೆ ಎಂದು ನಾಮಕಾವಸ್ತೆಗೆ ಬರೆದುಕೊಳ್ಳುವ ಈತ ಹಲವಾರು ನಾಯಿಗಳಿಗೆ ಜಂಪ್ ಮಾಡಿ ಹಾನಿ ಮಾಡಿರುವುದನ್ನು ವಿಡಿಯೊಗಳಲ್ಲಿ ಕಾಣಬಹುದಾಗಿದೆ.

ಸದ್ಯ ಈ ವಿಡಿಯೊಗಳನ್ನು ಕೆಲ ಶ್ವಾನ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಇನ್ನೂ ಕೆಲವರು ಹಿಂಸಾತ್ಮಕ ವಿಡಿಯೊಗಳು ಎಂದು ಚಾನೆಲ್ ಅನ್ನು ರಿಪೋರ್ಟ್ ಮಾಡಿ ಎಂದು ಬರೆದುಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular