HomeLatest Newsವಾಹನ ಸವಾರರಿಗೆ ಗುಡ್ ನ್ಯೂಸ್: ಇನ್ನು ಪೆಟ್ರೋಲ್ ಬಂಕ್ ನಲ್ಲೇ ಕಾರ್ ರಿಪೇರಿ: ಇಂಡಿಯನ್ ಆಯಿಲ್-...

ವಾಹನ ಸವಾರರಿಗೆ ಗುಡ್ ನ್ಯೂಸ್: ಇನ್ನು ಪೆಟ್ರೋಲ್ ಬಂಕ್ ನಲ್ಲೇ ಕಾರ್ ರಿಪೇರಿ: ಇಂಡಿಯನ್ ಆಯಿಲ್- ಮಾರುತಿ ಸುಜುಕಿ ಇಂಡಿಯಾ ಒಪ್ಪಂದ

ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್(IOCL) ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳ ರಿಪೇರಿ ಸೇವಾ ಘಟಕ ಆರಂಭಿಸಲು ಮಾರುತಿ ಸುಜುಕಿ ಇಂಡಿಯಾ ಕಂಪನಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದರಿಂದಾಗಿ ದೇಶಾದ್ಯಂತ ಇಂಡಿಯನ್ ಪೆಟ್ರೋಲ್ ಬಂಕ್ ಗಳಲ್ಲಿ ಸೇವಾ ಕೇಂದ್ರಗಳು ಆರಂಭವಾಗಲಿವೆ. ಈ ಸೇವಾ ಕೇಂದ್ರಗಳ ಮೂಲಕ ಗ್ರಾಹಕರು ತಮ್ಮ ಮಾರುತಿ ಸುಜುಕಿ ಕಾರ್ ನ ಕಾರ್ಯನಿರ್ವಹಣೆ, ಸಣ್ಣಪುಟ್ಟ ರಿಪೇರಿ ಮಾಡಿಸಿಕೊಳ್ಳಬಹುದಾಗಿದೆ. ಕಾರ್ ದುರಸ್ತಿ ಕೆಲಸಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ಮಾರುತಿ ಸುಜುಕಿ ಕಂಪನಿ ದೇಶಾದ್ಯಂತ 2882 ನಗರಗಳಲ್ಲಿ 5780ಕ್ಕೂ ಹೆಚ್ಚು ಸೇವಾ ಕೇಂದ್ರ ಹೊಂದಿದೆ. ಹೊಸ ಒಪ್ಪಂದದಿಂದ ಕಂಪನಿಯ ಸೇವಾ ಜಾಲ ಮತ್ತಷ್ಟು ವಿಸ್ತರಣೆ ಆಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರುತಿ ಸುಜುಕಿ ಇಂಡಿಯಾ ಜೊತೆ ಪಾಲುದಾರಿಕೆಯ ಮೂಲಕ ವಿಶ್ವ ದರ್ಜೆಯ ವಾಹನ ರಿಪೇರಿ ಸೇವೆಗಳನ್ನು ಇಂಧನ ಮಾರಾಟದ ಜೊತೆಗೆ ಮಾಡಲಾಗುವುದು ಎಂದು ಇಂಡಿಯನ್ ಆಯಿಲ್ ಮಾರುಕಟ್ಟೆ ವಿಭಾಗದ ನಿರ್ದೇಶಕ ಸೌಮಿತ್ರ ವಾಸ್ತವ್ ತಿಳಿಸಿದ್ದಾರೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಜೊತೆಗಿನ ಹೊಸ ಸಹಯೋಗದ ಮೂಲಕ ಮಾರುತಿ ಸುಜುಕಿ ತನ್ನ ಮಾರಾಟದ ನಂತರದ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ, ಇದು ದೇಶಾದ್ಯಂತ ಇಂಧನ ಕೇಂದ್ರಗಳಲ್ಲಿ ನೇರವಾಗಿ ವಾಹನ ಸೇವೆಯನ್ನು ಸಕ್ರಿಯಗೊಳಿಸುತ್ತದೆ. ಎರಡು ಕಂಪನಿಗಳು ಆಯ್ದ ಇಂಡಿಯನ್ ಆಯಿಲ್ ಔಟ್‌ಲೆಟ್‌ಗಳಲ್ಲಿ ಮಾರುತಿ ಸುಜುಕಿ ಸೇವಾ ಕೇಂದ್ರಗಳನ್ನು ಸ್ಥಾಪಿಸುತ್ತವೆ. ಗ್ರಾಹಕರು ಈ ಕೇಂದ್ರಗಳಲ್ಲಿ ದಿನನಿತ್ಯದ ನಿರ್ವಹಣೆ, ಸಣ್ಣ ರಿಪೇರಿ ಮತ್ತು ಪ್ರಮುಖ ಸೇವೆಗಳನ್ನು ಸಹ ಪಡೆಯಬಹುದು.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧಿಕಾರಿ(ಸೇವೆ) ರಾಮ್ ಸುರೇಶ್ ಅಕೆಲ್ಲಾ, ನಮ್ಮ ಗ್ರಾಹಕರಿಗೆ ಕಾರ್ ಸೇವೆಯನ್ನು ಸಾಧ್ಯವಾದಷ್ಟು ಸುಲಭ ಮತ್ತು ಅನುಕೂಲಕರವಾಗಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular