ನವದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್(IOCL) ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳ ರಿಪೇರಿ ಸೇವಾ ಘಟಕ ಆರಂಭಿಸಲು ಮಾರುತಿ ಸುಜುಕಿ ಇಂಡಿಯಾ ಕಂಪನಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇದರಿಂದಾಗಿ ದೇಶಾದ್ಯಂತ ಇಂಡಿಯನ್ ಪೆಟ್ರೋಲ್ ಬಂಕ್ ಗಳಲ್ಲಿ ಸೇವಾ ಕೇಂದ್ರಗಳು ಆರಂಭವಾಗಲಿವೆ. ಈ ಸೇವಾ ಕೇಂದ್ರಗಳ ಮೂಲಕ ಗ್ರಾಹಕರು ತಮ್ಮ ಮಾರುತಿ ಸುಜುಕಿ ಕಾರ್ ನ ಕಾರ್ಯನಿರ್ವಹಣೆ, ಸಣ್ಣಪುಟ್ಟ ರಿಪೇರಿ ಮಾಡಿಸಿಕೊಳ್ಳಬಹುದಾಗಿದೆ. ಕಾರ್ ದುರಸ್ತಿ ಕೆಲಸಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ಮಾರುತಿ ಸುಜುಕಿ ಕಂಪನಿ ದೇಶಾದ್ಯಂತ 2882 ನಗರಗಳಲ್ಲಿ 5780ಕ್ಕೂ ಹೆಚ್ಚು ಸೇವಾ ಕೇಂದ್ರ ಹೊಂದಿದೆ. ಹೊಸ ಒಪ್ಪಂದದಿಂದ ಕಂಪನಿಯ ಸೇವಾ ಜಾಲ ಮತ್ತಷ್ಟು ವಿಸ್ತರಣೆ ಆಗಲಿದೆ.
ಮಾರುತಿ ಸುಜುಕಿ ಇಂಡಿಯಾ ಜೊತೆ ಪಾಲುದಾರಿಕೆಯ ಮೂಲಕ ವಿಶ್ವ ದರ್ಜೆಯ ವಾಹನ ರಿಪೇರಿ ಸೇವೆಗಳನ್ನು ಇಂಧನ ಮಾರಾಟದ ಜೊತೆಗೆ ಮಾಡಲಾಗುವುದು ಎಂದು ಇಂಡಿಯನ್ ಆಯಿಲ್ ಮಾರುಕಟ್ಟೆ ವಿಭಾಗದ ನಿರ್ದೇಶಕ ಸೌಮಿತ್ರ ವಾಸ್ತವ್ ತಿಳಿಸಿದ್ದಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಜೊತೆಗಿನ ಹೊಸ ಸಹಯೋಗದ ಮೂಲಕ ಮಾರುತಿ ಸುಜುಕಿ ತನ್ನ ಮಾರಾಟದ ನಂತರದ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ, ಇದು ದೇಶಾದ್ಯಂತ ಇಂಧನ ಕೇಂದ್ರಗಳಲ್ಲಿ ನೇರವಾಗಿ ವಾಹನ ಸೇವೆಯನ್ನು ಸಕ್ರಿಯಗೊಳಿಸುತ್ತದೆ. ಎರಡು ಕಂಪನಿಗಳು ಆಯ್ದ ಇಂಡಿಯನ್ ಆಯಿಲ್ ಔಟ್ಲೆಟ್ಗಳಲ್ಲಿ ಮಾರುತಿ ಸುಜುಕಿ ಸೇವಾ ಕೇಂದ್ರಗಳನ್ನು ಸ್ಥಾಪಿಸುತ್ತವೆ. ಗ್ರಾಹಕರು ಈ ಕೇಂದ್ರಗಳಲ್ಲಿ ದಿನನಿತ್ಯದ ನಿರ್ವಹಣೆ, ಸಣ್ಣ ರಿಪೇರಿ ಮತ್ತು ಪ್ರಮುಖ ಸೇವೆಗಳನ್ನು ಸಹ ಪಡೆಯಬಹುದು.
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧಿಕಾರಿ(ಸೇವೆ) ರಾಮ್ ಸುರೇಶ್ ಅಕೆಲ್ಲಾ, ನಮ್ಮ ಗ್ರಾಹಕರಿಗೆ ಕಾರ್ ಸೇವೆಯನ್ನು ಸಾಧ್ಯವಾದಷ್ಟು ಸುಲಭ ಮತ್ತು ಅನುಕೂಲಕರವಾಗಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.

