ಗಾಜಿಯಾಬಾದ್ : ಗಾಜಿಯಾಬಾದ್ ಮತ್ತು ಮೀರತ್ ನಡುವೆ ಚಲಿಸುತ್ತಿದ್ದ ನಮೋ ಭಾರತ್ ರೈಲಿನ ಪ್ರೀಮಿಯಂ ಕೋಚ್‌ನಲ್ಲಿ ಯುವ ಜೋಡಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು, ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ಜೋಡಿಗಳ ವಿರುದ್ಧ ಗಾಜಿಯಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಅಪರಿಚಿತ ದಂಪತಿಗಳ ವಿರುದ್ಧ ಮತ್ತು ಡಿಸೆಂಬರ್ 3 ರಂದು ಸೇವೆಯಿಂದ ವಜಾಗೊಳಿಸಲಾದ ರೈಲು ನಿರ್ವಾಹಕ ರಿಷಭ್ (ಒಂದೇ ಹೆಸರು) ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಲೈವ್ ಸಿಸಿಟಿವಿ ಫೀಡ್‌ನಿಂದ ಕೃತ್ಯವನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡಿದ ರೈಲು ನಿರ್ವಾಹಕನ ವಿರುದ್ಧ ಕೂಡ ಎಫ್ ಐ ಆರ್ ದಾಖಲಾಗಿದೆ.
ಬಿಎನ್‌ಎಸ್ ಸೆಕ್ಷನ್ 296 (ಅಶ್ಲೀಲ ಕೃತ್ಯಗಳನ್ನು ನಡೆಸಿದ್ದಕ್ಕಾಗಿ), 77 (ವಾಯ್ಯೂರಿಸಂ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ತನಿಖೆಯ ನಂತರ, NCRTC RRTS (ನಮೋ ಭಾರತ್) ರೈಲು ನಿರ್ವಾಹಕ ರಿಷಭ್ ಅವರನ್ನು ಅಮಾನತುಗೊಳಿಸಿದೆ ಮತ್ತು ವಿರುದ್ಧ FIR ದಾಖಲಿಸಿದೆ.
ದೆಹಲಿ-ಮೀರತ್ ವಿಭಾಗದಲ್ಲಿ ನಮೋ ಭಾರತ್ ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ವಹಿಸಿಕೊಂಡಿರುವ ಡಿಬಿ-ಆರ್‌ಆರ್‌ಟಿಎಸ್‌ನ ಭದ್ರತಾ ಮುಖ್ಯಸ್ಥ ದುಶ್ಯಂತ್ ಕುಮಾರ್ ಅವರ ದೂರಿನ ಮೇರೆಗೆ, ನವೆಂಬರ್ 24 ರಂದು ಸಂಜೆ 4 ಗಂಟೆ ಸುಮಾರಿಗೆ ದುಹೈನಿಂದ ಮುರಾದ್‌ನಗರಕ್ಕೆ ತೆರಳುತ್ತಿದ್ದ ನಮೋ ಭಾರತ್ ರೈಲಿನ ಪ್ರೀಮಿಯಂ ಕೋಚ್‌ನಲ್ಲಿ ಲೈಂಗಿಕ ಕ್ರಿಯೆಗಳ ಘಟನೆ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

