HomeLatest Newsಶಾಲಾ ಪಡಿತರ ಸರಬರಾಜು ಟೆಂಡರ್‌ ನಲ್ಲಿ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿಲ್ಲ: ಸ್ಪಷ್ಟೀಕರಣ

ಶಾಲಾ ಪಡಿತರ ಸರಬರಾಜು ಟೆಂಡರ್‌ ನಲ್ಲಿ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿಲ್ಲ: ಸ್ಪಷ್ಟೀಕರಣ

ಶಾಲೆಗಳಿಗೆ ಪಡಿತರ ಸರಬರಾಜು ಟೆಂಡರ್‌ನಲ್ಲಿ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿರುವುದಿಲ್ಲವೆಂದು ಕೊಪ್ಪಳ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಂಕಿತ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಕೆಲವು ಮಾಧ್ಯಮಗಳಲ್ಲಿ ಬಿಸಿಊಟದಲ್ಲಿ ಹುಳುಗಳ ಕುರಿತು ಕೊಪ್ಪಳ ಜಿಲ್ಲೆಯ ಆಹಾರ ಸುರಕ್ಷತೆ ಇಲಾಖೆ ಕಾರಣರಾಗಿದ್ದಾರೆ ಮತ್ತು ಶಾಲೆಗಳಿಗೆ ಸರಬರಾಜು ಆಗುವ ಪಡಿತರದ ಟೆಂಡರ್ ನಲ್ಲಿ ಕೊಪ್ಪಳ ಜಿಲ್ಲೆಯ ಆಹಾರ ಸುರಕ್ಷತೆ ಇಲಾಖೆ ಭಾಗವಹಿಸಿ ಗುತ್ತಿಗೆದಾರರೊಂದಿಗೆ ಸಂಪರ್ಕ ಬೆಳೆಸಿ ಕಳಪೆ ಪಡಿತರ ವಿತರಣೆಗೆ ಕಾರಣರಾಗಿರುತ್ತಾರೆ ಎಂದು ವರದಿಯಾಗಿರುತ್ತದೆ. ಆದರೆ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಗೋದಾಮು ಸರ್ಕಾರಿ ಸಂಸ್ಥೆಯಾಗಿದ್ದು, ಪಡಿತರ ಆಹಾರ ಸಾಮಾಗ್ರಿಗಳ ಸರಬರಾಜು ಮತ್ತು ಟೆಂಡರ್ ಅನ್ನು ರಾಜ್ಯಮಟ್ಟದಿಂದ ಮತ್ತು ಕೇಂದ್ರದಿAದ ಆಗಿರುತ್ತದೆ. ಈ ಟೆಂಡರ್‌ನಲ್ಲಿ ಆಹಾರ ಸುರಕ್ಷತೆ ಇಲಾಖೆಯ ಕೊಪ್ಪಳ ಜಿಲ್ಲೆಯ ಅಂಕಿತ ಅಧಿಕಾರಿಗಳು ಭಾಗವಹಿಸಿರುವುದಿಲ್ಲ.

ಸರ್ಕಾರಿ ಶಾಲೆಗಳಿಗೆ ಆಹಾರ ಮಾದರಿಯನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಗೋದಾಮಿನಿಂದ ಪೂರೈಗೆ ಆಗುತ್ತಿದ್ದು, ಸರ್ಕಾರಿ ಶಾಲೆಗಳಿಗೆ ವಿತರಣೆ ಆಗುತ್ತಿರುವ ಆಹಾರ ಮಾದರಿಗಳನ್ನು ಕಾಲಕಾಲಕ್ಕೆ ರಾಜ್ಯದ ಮಾರ್ಗಸೂಚಿಯಂತೆ ಹೊಸ ಸ್ಟಾಕ್ ಬಂದಾಗ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ ಮತ್ತು ಶಾಲೆಗಳಲ್ಲಿಯೂ ಕೂಡ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಂಕಿತ ಅಧಿಕಾರಿಗಳಾದ ಡಾ. ಅಲಕನಂದ ಮಳಗಿ ಮತ್ತು ಸಿಬ್ಬಂಧಿಯವರು ಶಾಲೆಗಳಿಗೆ ಸರಬರಾಜು ಆಗುವ ಆಹಾರ ಪದಾರ್ಥಗಳ ಟೆಂಡರ್ ಮಾಡಿದ್ದು, ಗುತ್ತಿಗೆದಾರರೊಂದಿಗೆ ಕೈಜೋಡಿಸಿದ್ದಾರೆ ಎಂದು ವರದಿಯಾಗಿರುವುದು ಆಧಾರರಹಿತ ಅಪಾದನೆ ಸತ್ಯಕ್ಕೆ ದೂರವಾಗಿದ್ದು, ನೈತಿಕತೆಯನ್ನು ಕುಗ್ಗಿಸುವಂತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಗೋದಾಮಿನಿಂದ ಆಹಾರ ಮಾದರಿಗಳನ್ನು ಸಂಗ್ರಹಿಸಿರುವ ವಿವರ ಈ ರೀತಿಯಾಗಿದ್ದು, 2023-24ನೇ ಸಾಲಿನಲ್ಲಿ 3 ಆಹಾರ ಮಾದರಿಗಳನ್ನು, 2024-25ನೇ ಸಾಲಿನಲ್ಲಿ 37 ಆಹಾರ ಮಾದರಿಗಳನ್ನು ಮತ್ತು 2025-26 ನೇ ಸಾಲಿನಲ್ಲಿ 17 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗಳಲ್ಲಿ ಆಹಾರ ಮಾದರಿಗಳನ್ನು ಸಂಗ್ರಹಿಸಿರುವ ವಿವರ ಈ ರೀತಿಯಾಗಿದ್ದು, 2023-24ನೇ ಸಾಲಿನಲ್ಲಿ 20 ಆಹಾರ ಮಾದರಿಗಳನ್ನು, 2024-25 ನೇ ಸಾಲಿನಲ್ಲಿ 35 ಆಹಾರ ಮಾದರಿಗಳನ್ನು ಮತ್ತು 2025-26 ನೇ ಸಾಲಿನಲ್ಲಿ 46 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಈ ಮೂಲಕ ಸ್ಪಷ್ಟೀಕರಿಸಿದೆ ಎಂದು ಕೊಪ್ಪಳ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಂಕಿತ ಅಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular