HomeUncategorizedBIG NEWS : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ : ಶಿಕ್ಷಣ...

BIG NEWS : ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶಾಲಾನುದಾನ ಬಿಡುಗಡೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು : ಅನುಮೋದಿತ ಶಾಲೆಗಳನ್ನು ಹೊರತುಪಡಿಸಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೇಕಡಾ 60 ರಷ್ಟು ಶಾಲಾನುದಾನವನ್ನು ಈಗಾಗಲೇ 3 ಹಂತದಲ್ಲಿ ಉಲ್ಲೇಖ (2) ಮತ್ತು (3) ರಂತೆ ಶಾಲಾನುದಾನ ಬಿಡುಗಡೆ ಮಾಡಲಾಗಿದೆ.

ಮುಂದುವರೆದು ಸದರಿ ಪಿಎಬಿ ಅನುಮೋದಿತ ಶಾಲಾನುದಾನದಲ್ಲಿ ಪಿ.ಎಂ ಶ್ರೀ ಯೋಜನೆಯಡಿ ಅನುಮೋದಿತ (4 ಹಂತದ) ಶಾಲೆಗಳನ್ನು ಹಾಗೂ 2024-25ನೇ ಸಾಲಿನಲ್ಲಿ ZERO ENROLMENT ಹೊಂದಿರುವ ಶಾಲೆಗಳನ್ನು ಹೊರತುಪಡಿಸಿ 41392 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನಾಲ್ಕನೇ ಕಂತಿನ ಶೇಕಡಾ 40 ರಷ್ಟು ಶಾಲಾನುದಾನವನ್ನು ರೂ. 44,95,50,000/- ಗಳನ್ನು (ನಲವತ್ನಾಲ್ಕು ಕೋಟೆ ತೊಂಬತ್ತೈದು ಲಕ್ಷದ ಐವತ್ತು ಸಾವಿರ ಮಾತ್ರ) 35 ಜಿಲ್ಲೆಗಳಿಗೆ NON SNA – CSS Portal component code F.01.18 ರಡಿ ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ಅನುಬಂಧ-1 ರಂತೆ ಬಿಡುಗಡೆ ಮಾಡಲಾಗಿದೆ.

ಸದರಿ ಮೊತ್ತವನ್ನು ಜಿಲ್ಲಾ ಹಂತದಿಂದ ಆಯಾ ಬ್ಲಾಕ್ಗಳಿಗೆ (ಅನುಬಂಧ-2 ರಂತೆ) ಹಾಗೂ ಬ್ಲಾಕ್ಗಳಿಂದ ಆಯಾ ಶಾಲೆಗಳಿಗೆ ಬಿಡುಗಡೆಗೊಳಿಸಲು ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular