
ಬೆಂಗಳೂರು: ಏಪ್ರಿಲ್ 1ರ ಇಂದಿನಿಂದ ಹಾಲು, ಮೊಸರಿನ ದರ ಹೆಚ್ಚಳವಾಗಿದ್ದು, ಇದರಿಂದ ಹೋಟೆಲ್ ಗಳಲ್ಲಿ ಕಾಫಿ, ಚಹಾ ಸೇರಿ ಹಾಲಿನ ಖಾದ್ಯ ಸಿಹಿ ತಿನಿಸುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಒಂದು ಟೀ, ಕಾಫಿ ದರ 15 ರಿಂದ 20 ರೂ ವರೆಗೆ ಇದ್ದು, ಇದನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ಹೋಟೆಲ್ ಮಾಲೀಕರ ಸಂಘಗಳು ಬೆಲೆ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ನಂದಿನಿ ಹಾಲಿನ ದರ ಲೀಟರ್ ಗೆ 4 ರೂಪಾಯಿ ಹೆಚ್ಚಳವಾಗಿದ್ದು, ಅದಕ್ಕೆ ಅನುಗುಣವಾಗಿ ಟೀ, ಕಾಫಿ ದರದಲ್ಲಿ ಶೇಕಡ 10 ರಿಂದ 15 ರಷ್ಟು ಹೆಚ್ಚಳವಾಗಲಿದೆ.
ಅಲ್ಲದೇ, ತರಕಾರಿ, ಎಣ್ಣೆ, ದಿನಸಿ ದರ ಕಳೆದು ಒಂದು ವರ್ಷದ ಅವಧಿಯಲ್ಲಿ ಶೇಕಡ 30ರಷ್ಟು ಏರಿಕೆಯಾಗಿದೆ. ವೇತನ ಹೆಚ್ಚಳ, ವಸ್ತುಗಳ ಬೆಲೆ ಏರಿಕೆ, ಕಾರ್ಮಿಕರ ಕೊರತೆ ನಷ್ಟ ಸರಿದೂಗಿಸಲು ದರ ಏರಿಕೆ ಅನಿವಾರ್ಯವಾಗಿದೆ. ಹೋಟೆಲ್ ಗಳಲ್ಲಿ ಬೆಣ್ಣೆ, ತುಪ್ಪ, ಪನ್ನೀರ್, ಹಾಲು ಬಳಸುವ ಎಲ್ಲ ತಿನಿಸುಗಳ ಬೆಲೆ ಗ್ರಾಹಕರ ಮೇಲೆ ವರ್ಗಾವಣೆಯಾಗಲಿದೆ. ಜ್ಯೂಸ್, ಐಸ್ ಕ್ರೀಮ್ ಮಳಿಗೆಗಳಲ್ಲೂ ದರ ಹೆಚ್ಚಳವಾಗುವ ಸಾಧ್ಯತೆ ಇದೆ.