ಬೆಂಗಳೂರು : ಕನಕದಾಸರು ದಾಸಶ್ರೇಷ್ಠರು ಮಾತ್ರವಲ್ಲ, ಅಪೂರ್ವ ಸಮಾಜ ಸುಧಾರಕರಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕನಕ ಜಯಂತಿ ಅಂಗವಾಗಿ ಶಾಸಕರ ಭವನದ ಆವರಣದಲ್ಲಿರುವ ದಾಸಶ್ರೇಷ್ಠ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ಮಾತನಾಡಿದರು.
ಸಮಸಮಾಜದ ಕನಸು ಬಿತ್ತದ ಕನಕದಾಸ ಜೀವನ – ಬೋಧನೆಗಳು ಮನುಕುಲದ ಹಾದಿಗೆ ಬೆಳಕಾಗಲಿ ಎಂದು ಆಶಿಸುತ್ತೇನೆ.ಜಾತಿ-ಕುಲ ಸೃಷ್ಟಿಸಿರುವ ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆ ಬಗ್ಗೆ ಕೀರ್ತನೆ-ಕಾವ್ಯಗಳ ಮೂಲಕ ಜನಜಾಗೃತಿಗೊಳಿಸಿದ್ದ ಕನಕ ದಾಸರು ದಾಸಶ್ರೇಷ್ಠರು ಮಾತ್ರವಲ್ಲ, ಒಬ್ಬ ಅಪೂರ್ವ ಸಮಾಜ ಸುಧಾರಕರಾಗಿದ್ದರು. ಜಾತಿ-ಧರ್ಮದ ದುರ್ಬಳಕೆಯಿಂದಾಗಿ ಇತಿಹಾಸದ ಚಕ್ರ ಹಿಂದಕ್ಕೆ ಚಲಿಸುತ್ತಿದೆಯೇನೋ ಎನ್ನುವ ಆತಂಕ ಕಾಡುತ್ತಿರುವ ಇಂದಿನ ದಿನಗಳಲ್ಲಿ ಕನಕದಾಸರ ಚಿಂತನೆ ನಮ್ಮ ದಾರಿಯ ಬೆಳಕಾಗಬೇಕು. ಕವಿ, ದಾರ್ಶನಿಕ, ಮಹಾನ್ ಮಾನವತಾವಾದಿ ಕನಕದಾಸರಿಗೆ ನನ್ನ ಭಕ್ತಿ ಪೂರ್ವಕ ನಮನಗಳು ಎಂದು ಹೇಳಿದ್ದಾರೆ.
ಕನಕ ಜಯಂತಿ ಅಂಗವಾಗಿ ಶಾಸಕರ ಭವನದ ಆವರಣದಲ್ಲಿರುವ ದಾಸಶ್ರೇಷ್ಠ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದೆ.
ಸಮಸಮಾಜದ ಕನಸು ಬಿತ್ತದ ಕನಕದಾಸ ಜೀವನ – ಬೋಧನೆಗಳು ಮನುಕುಲದ ಹಾದಿಗೆ ಬೆಳಕಾಗಲಿ ಎಂದು ಆಶಿಸುತ್ತೇನೆ. pic.twitter.com/1R4vDavC0B
— Siddaramaiah (@siddaramaiah) November 18, 2024