alex Certify ಈ ದೇಶದ ಜನರಿಗಿಲ್ಲವಂತೆ ಸೆಕ್ಸ್ ನಲ್ಲಿ ಆಸಕ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಶದ ಜನರಿಗಿಲ್ಲವಂತೆ ಸೆಕ್ಸ್ ನಲ್ಲಿ ಆಸಕ್ತಿ…!

ವಿಶ್ವದ ಕೆಲ ದೇಶಗಳಿಗೆ ಕಾಮುಕ ದೇಶ ಎಂಬ ಬಿರುದು ಸಿಕ್ಕಿದೆ. ಆದ್ರೆ ಈ ದೇಶದ ಜನರು ಸೆಕ್ಸ್ ಎಂದ್ರೆ ದೂರ ಓಡ್ತಾರೆ. ಅವರಿಗೆ ಸೆಕ್ಸ್ ಮೇಲೆ ಸ್ವಲ್ಪವೂ ಆಸಕ್ತಿಯಿಲ್ಲ. ಯಸ್ ನಾವು ಹೇಳ್ತಿರುವ ದೇಶ ಜಪಾನ್. ಈ ಹಿಂದೆ ನಡೆದ ಸಮೀಕ್ಷೆಯೊಂದು ಈ ವಿಷಯವನ್ನು ಬಹಿರಂಗಪಡಿಸಿತ್ತು.

ಈ ಸಮೀಕ್ಷೆ ಪ್ರಕಾರ ಜಪಾನ್ ಯುವಕರಿಗೆ ಲೈಂಗಿಕ ಆಸಕ್ತಿಯಿಲ್ಲವಂತೆ. 18 ರಿಂದ 34 ವರ್ಷ ವಯಸ್ಸಿನ ಶೇಕಡಾ 43 ರಷ್ಟು ಜಪಾನಿಗಳು ಶಾರೀರಿಕ ಸಂಬಂಧ ಬೆಳೆಸುವುದಿಲ್ಲವಂತೆ. ವಯಸ್ಸು 34 ಆದ್ರೂ ಅವರಿನ್ನೂ ವರ್ಜಿನ್ ಎಂದು ಸಮೀಕ್ಷೆ ಹೇಳಿತ್ತು. ಶೇಕಡಾ 64 ರಷ್ಟು ಮಂದಿ ತಾವು ಯಾವುದೇ ಸಂಬಂಧದಲ್ಲಿಲ್ಲ ಎಂದಿದ್ದರು. ಇದು ಜಪಾನ್ ಜನಸಂಖ್ಯೆ ಮೇಲೆ ಪರಿಣಾಮ ಬೀರುತ್ತಿದೆ.

ಪ್ರೀತಿ, ಪ್ರೇಮ, ಲೈಂಗಿಕತೆ ಬಗ್ಗೆ ಜಪಾನ್ ಜನರಿಗೆ ಆಸಕ್ತಿಯಿಲ್ಲವಂತೆ. ಲೈಂಗಿಕ ಕ್ರಿಯೆ ಬಗ್ಗೆ ಅವರು ಹೆಚ್ಚು ಯೋಚನೆ ಕೂಡ ಮಾಡೋದಿಲ್ಲವಂತೆ. ಮಹಿಳೆ ಹಾಗೂ ಪುರುಷರಿಬ್ಬರು ಪ್ರೀತಿಯಲ್ಲಿ ಬೀಳಲು ಇಷ್ಟಪಡೋದಿಲ್ಲವಂತೆ.

ಸಂಬಂಧ, ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಜಪಾನ್ ಪುರುಷರಿಗಿಂತ ಮಹಿಳೆಯರು ಆರ್ಥಿಕವಾಗಿ ಸದೃಡರಾಗಿದ್ದಾರೆ.  ಪುರುಷರಲ್ಲಿ ಆತ್ಮವಿಶ್ವಾಸ ಕಡಿಮೆ ಇದೆ. ಮಕ್ಕಳಾದ್ಮೇಲೆ ಕೆಲಸ ಬಿಡಲು ಇಚ್ಛಿಸದ ಮಹಿಳೆಯರು ಸಂಬಂಧದಿಂದಲೇ ದೂರ ಸರಿಯುತ್ತಿದ್ದಾರೆ.

ಜಪಾನ್ ಜನರು celibacy ಸಿಂಡ್ರೋಮಾದಿಂದ ಬಳಲುತ್ತಿದ್ದಾರೆ. 2012ರಲ್ಲಿ ಜಪಾನ್ ಜನಸಂಖ್ಯೆ 127 ಮಿಲಿಯನ್ ಇತ್ತು. 2060ರ ವೇಳೆಗೆ ಅಲ್ಲಿನ ಜನಸಂಖ್ಯೆ 27 ಮಿಲಿಯನ್ ಗೆ ಬಂದು ತಲುಪಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...