ಪಾಲಕ್ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ಪಾಲಕ್ ಬಳಸಿ ಮಾಡುವ ಒಂದೆರಡು ಡಿಶ್ ಹೆಸರು ಮಾತ್ರ ನೆನಪಾಗುತ್ತೆ. ಪಾಲಕ್ ಪನ್ನೀರ್, ಕಾರ್ನ್ ಪಾಲಕ್ ಹೀಗೆ. ಆದ್ರೆ ಪಾಲಕ್ ಹಾಗೂ ಗೋಬಿ ಸೇರಿಸಿ ಹೊಸ ತಿಂಡಿ ಮಾಡಬಹುದು.
ಪಾಲಕ್ ಗೋಬಿ ಮಾಡಲು ಬೇಕಾಗುವ ಪದಾರ್ಥ:
ಒಂದು ಬೌಲ್ ಪಾಲಕ್ , 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1/2 ಚಮಚ ಗರಂ ಮಸಾಲಾ, 1/2 ಚಮಚ ಕೆಂಪು ಮೆಣಸಿನ ಪುಡಿ. 4-5 ಗೋಡಂಬಿ, 2 ಚಮಚ ಕ್ರೀಂ, 1 ಬೌಲ್ ಕರಿದ ಗೋಬಿ, ½ ಬೌಲ್ ಕರಿದ ಈರುಳ್ಳಿ, ಉಪ್ಪು ರುಚಿಗೆ ತಕ್ಕಷ್ಟು. ಎಣ್ಣೆ ಸ್ವಲ್ಪ.
ಪಾಲಕ್ ಗೋಬಿ ಮಾಡುವ ವಿಧಾನ:
ಮೊದಲು ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕತ್ತರಿಸಿರುವ ಪಾಲಕ್, ಗರಂ ಮಸಾಲೆ ಪುಡಿ, ಮೆಣಸಿನ ಪುಡಿ ಹಾಗೂ ಗೋಡಂಬಿಯನ್ನು ಹಾಕಿ ಫ್ರೈ ಮಾಡಿ. ನಂತ್ರ ಕ್ರೀಂ ಹಾಗೂ ಅರ್ಧ ಫ್ರೈ ಆಗಿರುವ ಗೋಬಿ, ಈರುಳ್ಳಿ ಹಾಕಿ 2 ನಿಮಿಷ ಪ್ರೈ ಮಾಡಿ. ಬಿಸಿ ಬಿಸಿಯಿರುವಾಗಲೆ ಸರ್ವ್ ಮಾಡಿ.