ಬೆಂಗಳೂರು : ಇನ್ಮುಂದೆ ಯಾರಾದರೂ ಮೋಜಿಗಾಗಿ ಮೆಟ್ರೋ ಇಟಿಎಸ್ ಬಟನ್ ಒತ್ತಿದರೆ 5000 ದಂಡ ಬೀಳಲಿದೆ.
ಇತ್ತೀಚೆಗೆ ಯುವಕನೋರ್ವ ಮೆಟ್ರೋ ರೈಲಿನಲ್ಲಿ ಮೋಜಿಗಾಗಿ ಮೆಟ್ರೋ ಇಟಿಎಸ್ ಬಟನ್ ಒತ್ತಿದ್ದು, ಅಧಿಕಾರಿಗಳು ಬರೋಬ್ಬರಿ 5000 ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಹೌದು. ತಮಾಷೆಗಾಗಿ ಮೆಟ್ರೋ ಇಟಿಎಸ್ ಬಟನ್ ಒತ್ತಿದರೆ ದಂಡ ವಿಧಿಸಲಾಗುತ್ತದೆ. ಮೆಟ್ರೋ ಹಳಿಯಲ್ಲಿ ಯಾರಾದರೂ ಆಕಸ್ಮಿಕವಾಗಿ ಜಾರಿ ಬಿದ್ದಾಗ ಅಥವಾ ಜಿಗಿದಾಗ ಮಾತ್ರ ನಿಲ್ದಾಣದಲ್ಲಿರುವ ಇಟಿಎಸ್ ಬಟನ್ ಅನ್ನು ಬಳಸಲಾಗುತ್ತದೆ. ಬಟನ್ ಒತ್ತಿದ ಕೂಡಲೇ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸುವ ವ್ಯವಸ್ಥೆ ಇದಾಗಿದೆ. ಯಾರೂ ಕೂಡ ಅನಗತ್ಯವಾಗಿ ಒಟಿಎಸ್ ಬಟನ್ ಒತ್ತಬಾರದು. ನಿಮ್ಮ ಮೋಜಿಗಾಗಿ ಸಂಚಾರಕ್ಕೆ ತೊಡಕು ಉಂಟು ಮಾಡುವುದು ಕಾನೂನುಬಾಹಿರ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.