ಮೀನು ಎಂದ ಕೂಡಲೇ ಅನೇಕ ಬಗೆಯ ಖಾದ್ಯಗಳು ನೆನಪಿಗೆ ಬರುತ್ತವೆ. ಅವುಗಳಲ್ಲಿ ವಿಶೇಷವಾದ ಪೊಂಫ್ರೆಟ್ ಫಿಶ್, ಆಲೂ ಕರಿ ಮಾಡುವ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
2 ಆಲೂಗಡ್ಡೆ, 1 ಮಧ್ಯಮ ಗಾತ್ರದ ಪೊಂಫ್ರೆಟ್ ಫಿಶ್, 1 ಈರುಳ್ಳಿ. 1 ಸ್ಪೂನ್ ಧನಿಯಾ ಪುಡಿ, 4 ಹಸಿ ಮೆಣಸಿನ ಕಾಯಿ, 2 ಟೀ ಸ್ಪೂನ್ ಹುಣಸೆಹಣ್ಣು, 1 ಸ್ಪೂನ್ ಮೆಣಸಿನಕಾಯಿ ಪುಡಿ, 1 ಸ್ಪೂನ್ ಜೀರಿಗೆ, ¼ ಕಪ್ ಕೊಬ್ಬರಿ ತುರಿ, 2 ಟೊಮ್ಯಾಟೊ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ:
ಮೀನನ್ನು ಸ್ವಚ್ಛಗೊಳಿಸಿ ತುಂಡರಿಸಿಕೊಳ್ಳಿರಿ. ಆಲೂಗಡ್ಡೆಯನ್ನು ಕತ್ತರಿಸಿ, ಹಸಿಮೆಣಸಿನಕಾಯಿ ಸೀಳಿಕೊಂಡು, ಈರುಳ್ಳಿ, ಟೊಮ್ಯಾಟೊ ಹೆಚ್ಚಿಕೊಳ್ಳಿರಿ. ಕೊಬ್ಬರಿ ತುರಿಯನ್ನು ರುಬ್ಬಿಕೊಳ್ಳಿ.
4 ಸ್ಪೂನ್ ಎಣ್ಣೆ ಕಾಯಿಸಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಕೆಂಪಾಗುವವರೆಗೆ ಹುರಿದುಕೊಳ್ಳಿ. ಬಳಿಕ ಹಸಿಮೆಣಸಿನ ಕಾಯಿ ಹಾಕಿ ಹುರಿದು, ಜೀರಿಗೆ ಪುಡಿ, ಧನಿಯಾ ಪುಡಿ, ಮೆಣಸಿನ ಕಾಯಿ ಪುಡಿ ಹಾಕಿ ಕಲೆಸಿರಿ.
ಆಲೂಗಡ್ಡೆ ಹಾಕಿ ಕೆಲ ನಿಮಿಷದ ನಂತರ ಟೊಮ್ಯಾಟೊ ಸೇರಿಸಿ ಹುರಿದುಕೊಳ್ಳಿ. 2 ಕಪ್ ನೀರು ಹಾಕಿ ಆಲೂಗಡ್ಡೆ ಅರ್ಧದಷ್ಟು ಬೆಂದ ಬಳಿಕ ಅದಕ್ಕೆ ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ ಕಲೆಸಿರಿ.
ಎಲ್ಲಾ ಬೆಂದ ಬಳಿಕ ಕೆಳಗೆ ಇಳಿಸಿ ಸಣ್ಣಗೆ ಹೆಚ್ಚಿದ ಕೊತಂಬರಿ ಸೊಪ್ಪು ಹಾಕಿ, ತಟ್ಟೆಗೆ ಬಡಿಸಿ ರುಚಿ ನೋಡಿ.