HomeKarnataka11 ಹಿಂದುಳಿದ ಜಿಲ್ಲೆಗಳಿಗೆ ‘ಉದ್ಯೋಗ ನಿಧಿ’: ಸಚಿವ ವಿಜಯಾನಂದ ಕಾಶಪ್ಪನವರ್ ಅವರ ದಿಟ್ಟ ಕ್ರಮ

11 ಹಿಂದುಳಿದ ಜಿಲ್ಲೆಗಳಿಗೆ ‘ಉದ್ಯೋಗ ನಿಧಿ’: ಸಚಿವ ವಿಜಯಾನಂದ ಕಾಶಪ್ಪನವರ್ ಅವರ ದಿಟ್ಟ ಕ್ರಮ

ಯೋಜನೆಯ ಪರಿಚಯ

ಯೋಜನೆಯ ಮುಖ್ಯಾಂಶಗಳು

ಆರ್ಥಿಕವಾಗಿ ಹಿಂದುಳಿದ 11 ಜಿಲ್ಲೆಗಳಲ್ಲಿ ಕೈಗಾರಿಕಾ ಚಟುವಟಿಕೆಗಳ ಉತ್ತೇಜನ

ಸ್ಥಳೀಯ ಯುವಕರಿಗೆ ಸುಸ್ಥಿರ ಉದ್ಯೋಗಾವಕಾಶ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸದಾಗಿ ನೇಮಕಗೊಳ್ಳುವ ಉದ್ಯೋಗದಾತರಿಗೆ ಗರಿಷ್ಠ 24 ತಿಂಗಳ ಅವಧಿಗೆ ಮಾಸಿಕ ರೂ. 2,500 ಉದ್ಯೋಗ ಪ್ರೋತ್ಸಾಹಧನ

ಯಾದಗಿರಿ, ಬೀದರ್, ರಾಯಚೂರು, ಕಲಬುರಗಿ, ಕೊಪ್ಪಳ, ವಿಜಯನಗರ, ಬೆಳಗಾವಿ, ಗದಗ, ಹಾವೇರಿ, ವಿಜಯಪುರ ಮತ್ತು ಬಾಗಲಕೋಟೆ.

ಉದ್ಯಮ್ ಪೋರ್ಟಲ್ನಲ್ಲಿ ನೋಂದಾಯಿತವಾದ ಎಂ.ಎಸ್.ಎಂ.ಇ. (MSME) ವಲಯದ ಉತ್ಪಾದನಾ ಮತ್ತು ಸೇವಾ ಘಟಕಗಳು.

ಬೆಂಗಳೂರು-ರಾಜ್ಯದ ಪ್ರಾದೇಶಿಕ ಅಸಮಾನತೆ ಕಡಿಮೆ ಮಾಡಿ, ಕೈಗಾರಿಕಾ ಹೂಡಿಕೆಯನ್ನು ಹಿಂದುಳಿದ ಜಿಲ್ಲೆಗಳತ್ತ ಸೆಳೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ‘ಉದ್ಯೋಗ ನಿಧಿ’ ಯೋಜನೆಗೆ ಚಾಲನೆ ನೀಡಿದೆ.

ಪ್ರೊ. ಎಂ. ಗೋವಿಂದ ರಾವ್ ಸಮಿತಿಯ ವರದಿ ಮತ್ತು ಶಿಫಾರಸುಗಳನ್ನು ಆಧರಿಸಿರುವ ಈ ಯೋಜನೆ, ಉದ್ಯೋಗ ಸೃಷ್ಟಿಯನ್ನು ನೇರವಾಗಿ ಪ್ರೋತ್ಸಾಹಿಸುವ ಮೂಲಕ ಕೈಗಾರಿಕಾ ಬೆಳವಣಿಗೆಗೆ ಹೊಸ ವೇಗ ನೀಡುವ ಪ್ರಯತ್ನವಾಗಿದೆ.

ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ವಲಯ ಸಚಿವ ವಿಜಯಾನಂದ ಕಾಶಪ್ಪನವರ್ ಅವರ ನೇತೃತ್ವದಲ್ಲಿ ಕೈಗೊಂಡಿರುವ ಈ ಕ್ರಮವು ಉತ್ತರ ಕರ್ನಾಟಕ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕಾ ಚಟುವಟಿಕೆ ಹೆಚ್ಚಿಸುವ ದೃಷ್ಟಿಯಿಂದ ಮಹತ್ವ ಪಡೆದಿದೆ.

ಉದ್ಯೋಗ ಸೃಷ್ಟಿಗೆ ನೊಂದು

ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ

ಯೋಜನೆಯಡಿ ರಾಜ್ಯದ 11 ಕಡಿಮೆ ಅಭಿವೃದ್ಧಿ ಹೊಂದಿದ ಜಿಲ್ಲೆಗಳಲ್ಲಿ ಹೊಸದಾಗಿ ಉದ್ಯೋಗ ಸೃಷ್ಟಿಸುವ ಅರ್ಹ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಪ್ರತಿ ಅರ್ಹ ಹೊಸ ಉದ್ಯೋಗಿಗೆ ತಿಂಗಳಿಗೆ ₹2,500ರ ಉದ್ಯೋಗ ಪ್ರೋತ್ಸಾಹಧನ ನೀಡಲಾಗುತ್ತದೆ. ಗರಿಷ್ಠ 24 ತಿಂಗಳವರೆಗೆ ಈ ನೆರವು ದೊರೆಯಲಿದೆ.

ಎರಡು ವರ್ಷಗಳಲ್ಲಿ 1 ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು. ಅಂದರೆ, ಕೈಗಾರಿಕೆಗೆ ನೀಡುವ ಪ್ರೋತ್ಸಾಹವನ್ನು ಕೇವಲ ಹೂಡಿಕೆ ಆಧಾರಿತವಾಗಿರದೆ, ವಾಸ್ತವವಾಗಿ ಸೃಷ್ಟಿಯಾಗುವ ಮತ್ತು ಮುಂದುವರಿಯುವ ಉದ್ಯೋಗಕ್ಕೆ ಜೋಡಿಸಲಾಗಿದೆ.

ಇದು ಸರ್ಕಾರದ ವೆಚ್ಚವನ್ನು ಫಲಿತಾಂಶದೊಂದಿಗೆ ಸಂಪರ್ಕಿಸುವ ಮಾದರಿಯಾಗಿದ್ದು, ಸಾರ್ವಜನಿಕ ಹಣದ ಪರಿಣಾಮಕಾರಿತ್ವ ಮತ್ತು ಉತ್ತರದಾಯಿತ್ವ ಹೆಚ್ಚಿಸುವ ಉದ್ದೇಶ ಹೊಂದಿದೆ.

ಪ್ರಧಾನ 11 ಜಿಲ್ಲೆಗಳು

11 ಜಿಲ್ಲೆಗಳಿಗೆ ವಿಶೇಷ ಆದ್ಯತೆ

‘ಉದ್ಯೋಗ ನಿಧಿ’ ಯೋಜನೆ ಯಾದಗಿರಿ, ಬೀದರ್, ರಾಯಚೂರು, ಕಲಬುರಗಿ, ಕೊಪ್ಪಳ, ವಿಜಯನಗರ, ಬೆಳಗಾವಿ, ಗದಗ, ಹಾವೇರಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಅನ್ವಯಿಸಲಿದೆ.

ಈ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪನೆ ಹಾಗೂ ವಿಸ್ತರಣೆಗೆ ಉತ್ತೇಜನ ನೀಡುವುದರ ಜೊತೆಗೆ, ಸ್ಥಳೀಯ ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುವಂತೆ ಮಾಡುವ ಪ್ರಯತ್ನ ಇದಾಗಿದೆ. ಉದ್ಯೋಗಕ್ಕಾಗಿ ಯುವಕರು ಬೆಂಗಳೂರು, ಮೈಸೂರು ಸೇರಿದಂತೆ ಅಭಿವೃದ್ಧಿ ಹೊಂದಿದ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆಯನ್ನು ಕಡಿಮೆ ಮಾಡುವ ಸಾಧ್ಯತೆಯೂ ಈ ಯೋಜನೆಯಲ್ಲಿದೆ.

ಸ್ಥಳೀಯ ಯುವಕರಿಗೆ ಆದ್ಯತೆ

ಯೋಜನೆಯ ಪ್ರಮುಖ ಅಂಶವೆಂದರೆ ಅಧಿಸೂಚಿತ 11 ಜಿಲ್ಲೆಗಳ ಪೈಕಿ ಯಾವುದಾದರೂ ಜಿಲ್ಲೆಯ ಸ್ಥಳೀಯ ಯುವಕರನ್ನೇ ಅರ್ಹ ಉದ್ಯೋಗಿಗಳಾಗಿ ಪರಿಗಣಿಸುವುದು. ಉದ್ಯೋಗಿಯ ವಯಸ್ಸು 18ರಿಂದ 45 ವರ್ಷಗಳೊಳಗಿರಬೇಕು.

ಸ್ಥಳೀಯತೆಯನ್ನು ದೃಢೀಕರಿಸಲು ವಾಸಸ್ಥಳದ ಪ್ರಮಾಣಪತ್ರ, ಆಧಾರ್ ಅಥವಾ ಚುನಾವಣಾ ಗುರುತಿನ ಚೀಟಿಯಂತಹ ದಾಖಲೆಗಳನ್ನು ಸಲ್ಲಿಸಬೇಕು. ಹೀಗಾಗಿ ಸರ್ಕಾರದ ಪ್ರೋತ್ಸಾಹಧನ ನಿಜವಾದ ಸ್ಥಳೀಯ ಉದ್ಯೋಗ ಸೃಷ್ಟಿಗೆ ಬಳಕೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ಹೊಸ ಉದ್ಯೋಗಕ್ಕೆ ಮಾತ್ರ ಸೌಲಭ್ಯ

ಹೊಸ ಉದ್ಯೋಗಕ್ಕೆ ಮಾತ್ರ ಸೌಲಭ್ಯ

ಯೋಜನೆ ಜಾರಿಗೆ ಬಂದ ನಂತರ ಅಸ್ತಿತ್ವದಲ್ಲಿರುವ ಉದ್ಯಮಗಳು ಸೃಷ್ಟಿಸುವ ಹೊಸ ಅಥವಾ ಹೆಚ್ಚುವರಿ ಉದ್ಯೋಗಗಳಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುತ್ತದೆ. ಈಗಾಗಲೇ ಇರುವ ಉದ್ಯೋಗಿಗಳನ್ನು ತೋರಿಸಿ ಸರ್ಕಾರದ ನೆರವು ಪಡೆಯುವುದಕ್ಕೆ ಅವಕಾಶವಿಲ್ಲ.

ಅಲ್ಲದೆ, ಉದ್ಯೋಗಿಗೆ ನೀಡುವ ವೇತನವು ಸಂಬಂಧಿತ ವಲಯಕ್ಕೆ ನಿಗದಿಪಡಿಸಿರುವ ಕನಿಷ್ಠ ವೇತನಕ್ಕಿಂತ ಹೆಚ್ಚಿರಬೇಕು ಎಂಬ ಷರತ್ತು ವಿಧಿಸಲಾಗಿದೆ. EPF, ESI, ವೇತನ ಪಾವತಿ, ಹಾಜರಾತಿ ಮತ್ತು ಬ್ಯಾಂಕ್ ಮೂಲಕ ವೇತನ ಜಮೆಯಾಗಿರುವ ದಾಖಲೆಗಳನ್ನೂ ಪರಿಶೀಲಿಸಲಾಗುತ್ತದೆ.

ಇದರಿಂದ ಕಾಗದದ ಮೇಲಿನ ಉದ್ಯೋಗ ಸೃಷ್ಟಿ ತೋರಿಸಿ ಪ್ರೋತ್ಸಾಹಧನ ಪಡೆಯುವ ಸಾಧ್ಯತೆಯನ್ನು ತಡೆಯುವ ಪ್ರಯತ್ನ ಮಾಡಲಾಗಿದೆ.

DBT ಮುಖಾಂತರ ಪಾವತಿ

DBT ಮೂಲಕ ಪಾವತಿ

ಯೋಜನೆಯ ಅನುಷ್ಠಾನದಲ್ಲಿ ತಂತ್ರಜ್ಞಾನಕ್ಕೂ ವಿಶೇಷ ಒತ್ತು ನೀಡಲಾಗಿದೆ. ಉದ್ಯೋಗದಾತರು ಉದ್ಯೋಗಿಗಳ ವಿವರ, ಹಾಜರಾತಿ, ವೇತನ ಪಾವತಿ, EPF ಮತ್ತು ESI ಕುರಿತ ಮಾಹಿತಿಯನ್ನು ಪೋರ್ಟಲ್ನಲ್ಲಿ ದಾಖಲಿಸಬೇಕು.

ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಮಾಹಿತಿಯನ್ನು ಪರಿಶೀಲಿಸಿ ಅರ್ಹ ಉದ್ಯೋಗಿಗಳ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ DBT ಮೂಲಕ ಉದ್ಯೋಗದಾತರ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗುತ್ತದೆ.

SNA/K2 ವ್ಯವಸ್ಥೆ ಮತ್ತು ಸ್ವಯಂಚಾಲಿತ ಪರಿಶೀಲನೆಯ ಬಳಕೆಯಿಂದ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.

ವಂಚನೆಯನ್ನು ತಡೆಯಲು ಕ್ರಮಗಳು

ವಂಚನೆಗೆ ಕಡಿವಾಣ

ಯೋಜನೆಯ ಮತ್ತೊಂದು ಗಮನಾರ್ಹ ಅಂಶವೆಂದರೆ, ಸುಳ್ಳು ದಾಖಲೆ ಸಲ್ಲಿಸಿರುವುದು ಪತ್ತೆಯಾದರೆ ಅಥವಾ ಪ್ರೋತ್ಸಾಹಧನ ಪಡೆದ ಮೂರು ತಿಂಗಳೊಳಗೆ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿದರೆ, ಈಗಾಗಲೇ ಪಾವತಿಸಿದ ಪ್ರೋತ್ಸಾಹಧನವನ್ನು ಬಡ್ಡಿಯೊಂದಿಗೆ ವಸೂಲಿ ಮಾಡುವ ಅಧಿಕಾರ ಸರ್ಕಾರಕ್ಕೆ ಇರಲಿದೆ.

ಇದು ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ಕೇವಲ ಅಲ್ಪಾವಧಿಯ ನೇಮಕಾತಿ ಮಾಡಿ ಸರ್ಕಾರಿ ನೆರವು ಪಡೆಯುವ ಪ್ರವೃತ್ತಿಗೆ ಕಡಿವಾಣ ಹಾಕುವ ಪ್ರಮುಖ ಸುರಕ್ಷತಾ ಕ್ರಮವಾಗಿದೆ.

ಶೇ.10ರಷ್ಟು ಘಟಕಗಳಿಗೆ ಭೌತಿಕ ತಪಾಸಣೆ

ಮೂರನೇ ಕಂತಿನ ಪ್ರೋತ್ಸಾಹಧನ ಬಿಡುಗಡೆಗೂ ಮುನ್ನ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 10% ಫಲಾನುಭವಿ ಘಟಕಗಳ ಭೌತಿಕ ತಪಾಸಣೆ ನಡೆಸಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಮೂಲಕ ನಡೆಯುವ ಈ ಪರಿಶೀಲನೆ, ದಾಖಲೆಗಳಲ್ಲಿ ತೋರಿಸಿರುವ ಉದ್ಯೋಗ ಮತ್ತು ವಾಸ್ತವ ಉದ್ಯೋಗದ ನಡುವಿನ ವ್ಯತ್ಯಾಸವನ್ನು ಪತ್ತೆಹಚ್ಚಲು ನೆರವಾಗಲಿದೆ.

ಜಿಲ್ಲಾ ಮಟ್ಟದ ಜವಾಬ್ದಾರಿ

ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಅನುಷ್ಠಾನ ಸಮಿತಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕಾರ್ಮಿಕ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಜವಳಿ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಲೀಡ್ ಬ್ಯಾಂಕ್ ಹಾಗೂ ಕೈಗಾರಿಕಾ ಸಂಘಗಳ ಪ್ರತಿನಿಧಿಗಳಿಗೆ ಸ್ಥಾನ ನೀಡಲಾಗಿದೆ.

ಈ ಬಹು-ಇಲಾಖಾ ವ್ಯವಸ್ಥೆ ಯೋಜನೆಯನ್ನು ಕೇವಲ ಕೈಗಾರಿಕಾ ಇಲಾಖೆಯ ಕಾರ್ಯಕ್ರಮವಾಗಿ ಸೀಮಿತಗೊಳಿಸದೆ, ಉದ್ಯೋಗ–ಕೌಶಲ್ಯ–ಕೈಗಾರಿಕೆ–ಹಣಕಾಸು ವ್ಯವಸ್ಥೆಗಳನ್ನು ಪರಸ್ಪರ ಜೋಡಿಸುವ ಪ್ರಯತ್ನವಾಗಿದೆ.

ರಾಜ್ಯ ಮಟ್ಟದಲ್ಲಿಯೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ ರಚಿಸಲಾಗಿದೆ. ನಿರ್ದೇಶಕರು (MSME) ಯೋಜನೆಯ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅಂತಿಮ ಮಾತುಗಳು

ಸಚಿವ ವಿಜಯಾನಂದ ಕಾಶಪ್ಪನವರ್ ಅವರ ಈ ಕ್ರಮವು, ‘ಹೂಡಿಕೆ ಬಂದರೆ ಉದ್ಯೋಗ ಬರಬೇಕು; ಉದ್ಯೋಗ ಬಂದರೆ ಮಾತ್ರ ಸರ್ಕಾರದ ಪ್ರೋತ್ಸಾಹ ಸಿಗಬೇಕು’ ಎಂಬ ಫಲಿತಾಂಶಾಧಾರಿತ ಕೈಗಾರಿಕಾ ನೀತಿಯ ಹೆಜ್ಜೆ ಇದಾಗಿದೆ.

ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಯ ಕೊರತೆ, ಕೈಗಾರಿಕಾ ಅವಕಾಶಗಳ ಸೀಮಿತತೆ ಮತ್ತು ಯುವಕರ ನಗರ ವಲಸೆ ಇತ್ಯಾದಿ ಸಮಸ್ಯೆಗಳಿಗೆ ಒಂದೇ ಸಮಯದಲ್ಲಿ ಸ್ಪಂದಿಸುವ ಪ್ರಯತ್ನ ಇದಾಗಿದೆ.

₹2,500 ಮಾಸಿಕ ಪ್ರೋತ್ಸಾಹಧನವು ಉದ್ಯೋಗದಾತರ ಸಂಪೂರ್ಣ ವೇತನ ವೆಚ್ಚವನ್ನು ಭರಿಸುವ ಯೋಜನೆಯಲ್ಲ. ಆದರೆ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂದರ್ಭದಲ್ಲಿ ಉದ್ಯಮದ ಮೇಲಿನ ಆರಂಭಿಕ ವೆಚ್ಚದ ಒಂದು ಭಾಗವನ್ನು ಸರ್ಕಾರ ಹಂಚಿಕೊಳ್ಳುವ ಮೂಲಕ ‘ನೇಮಕಾತಿ ಮಾಡಲು ಉದ್ಯಮಿಗೆ ಆರ್ಥಿಕ ಪ್ರೇರಣೆ’ ಒದಗಿಸುತ್ತದೆ.

ಎರಡು ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ದೊಡ್ಡದಾಗಿದೆ. ಆದ್ದರಿಂದ ಜಿಲ್ಲಾವಾರು ಗುರಿ ನಿಗದಿ, ಕೈಗಾರಿಕೆಗಳ ಸಕ್ರಿಯ ನೋಂದಣಿ, ಪಾವತಿಗಳ ವಿಳಂಬ ತಪ್ಪಿಸುವುದು ಮತ್ತು ನಕಲಿ ಉದ್ಯೋಗ ಸೃಷ್ಟಿಗೆ ಅವಕಾಶ ನೀಡದಿರುವುದು ಅತ್ಯಂತ ಮುಖ್ಯವಾಗಲಿದೆ.

ವಲಸೆ ತಡೆಗಟ್ಟುವಿಕೆ:

ಪಾರದರ್ಶಕತೆ: “ಉದ್ಯೋಗ ನಿಧಿ ಪೋರ್ಟಲ್” ಮತ್ತು ಡಿಬಿಟಿ (DBT) ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವ ವ್ಯವಸ್ಥೆಯು ಭ್ರಷ್ಟಾವಕಾಶಕ್ಕೆ ಅವಕಾಶವಿಲ್ಲದಂತೆ ಪಾರದರ್ಶಕತೆಯನ್ನು ಕಾಪಾಡುತ್ತದೆ.

ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಗಳ ಯುವಕರು ಉದ್ಯೋಗ ಅರಸಿ ಮಹಾನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಸ್ಥಳೀಯ ಮಟ್ಟದಲ್ಲೇ ಉದ್ಯೋಗ ಸೃಷ್ಟಿಗೆ ಇದು ಬಲ ತುಂಬಲಿದೆ.

‘ಉದ್ಯೋಗ ನಿಧಿ’ ಯೋಜನೆಯ ಮೂಲಕ ರಾಜ್ಯ ಸರ್ಕಾರ ಹಿಂದುಳಿದ ಜಿಲ್ಲೆಗಳ ಕೈಗಾರಿಕಾ ಅಭಿವೃದ್ಧಿಯನ್ನು ಉದ್ಯೋಗ ಸೃಷ್ಟಿಯೊಂದಿಗೆ ನೇರವಾಗಿ ಜೋಡಿಸುವ ಹೊಸ ಮಾದರಿಯನ್ನು ಮುಂದಿಟ್ಟಿದೆ. ಸ್ಥಳೀಯ ಯುವಕರಿಗೆ ಆದ್ಯತೆ, ಹೊಸ ಉದ್ಯೋಗಕ್ಕೆ ಮಾತ್ರ ಪ್ರೋತ್ಸಾಹ, EPF–ESI ಹಾಗೂ ಬ್ಯಾಂಕ್ ಪಾವತಿ ಆಧಾರಿತ ಪರಿಶೀಲನೆ, DBT, ಭೌತಿಕ ತಪಾಸಣೆ ಮತ್ತು ಅಕ್ರಮ ಕಂಡುಬಂದರೆ ಹಣ ವಸೂಲಿ ಮಾಡುವ ನಿಯಮಗಳು ಯೋಜನೆಗೆ ಹೊಣೆಗಾರಿಕೆಯ ಚೌಕಟ್ಟು ಒದಗಿಸಿವೆ.

ಬಾಕ್ಸ್

ದೇಶದಲ್ಲೇ ನುಡಿದಂತೆ ನಡೆದ ಯಾವುದಾದರೂ ಸರ್ಕಾರವಿದ್ದರೆ ಅದು ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರ. ಯುವಕರಿಗೆ ಉದ್ಯೋಗ ನೀಡಿ ಸ್ವಾವಲಂಬನೆ ಮಾಡಬೇಕೆಂಬುದು ನಮ್ಮ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ಅದರಂತೆ ಹಿಂದುಳಿದ 11 ಜಿಲ್ಲೆಗಳಲ್ಲಿ ಉದ್ಯೋಗ ನಿಧಿ ಜಾರಿ ಮಾಡಿರುವುದು ಒಂದು ದಿಟ್ಟ ಹೆಜ್ಜೆಯಾಗಿದೆ.

-ವಿಜಯಾನಂದ ಕಾಶಪ್ಪನವರ್.

ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ಯಮಗಳು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular