HomeLifestyleರುಚಿ ರುಚಿಯಾದ ʼಟೊಮೆಟೋʼ ಇಡ್ಲಿ

ರುಚಿ ರುಚಿಯಾದ ʼಟೊಮೆಟೋʼ ಇಡ್ಲಿ

ಟೊಮೆಟೋ ಇಲ್ಲ ಅಂದರೆ ಹುಳಿ, ಸಾಂಬಾರು, ಪಲ್ಯ ರುಚಿಸುವುದೇ ಇಲ್ಲ. ಈ ಎಲ್ಲಾ ಅಡುಗೆ ಜೊತೆಗೆ ಟೊಮೆಟೊದಿಂದ ರುಚಿಯಾದ ಇಡ್ಲಿಯನ್ನೂ ತಯಾರಿಸಬಹುದು. ಇಲ್ಲಿದೆ ಬಾಯಿ ರುಚಿ ಹೆಚ್ಚಿಸುವ ಟೊಮೆಟೋ ಇಡ್ಲಿ ಮಾಡುವ ವಿಧಾನ.

ಬೇಕಾಗುವ ಸಾಮಾಗ್ರಿಗಳು

ಟೊಮೆಟೋ 6
ಉದ್ದಿನ ಬೇಳೆ 1 ಗ್ಲಾಸ್
ಇಡ್ಲಿ ರವೆ 2 ಗ್ಲಾಸ್
ಉಪ್ಪುರುಚಿಗೆ ತಕ್ಕಷ್ಟು
ಎಣ್ಣೆ 2 ಚಮಚ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ

ಉದ್ದಿನ ಬೇಳೆ ಮತ್ತು ಇಡ್ಲಿ ರವೆಯನ್ನು ಪ್ರತ್ಯೇಕವಾಗಿ ನೀರು ಹಾಕಿ ಮೂರು ಗಂಟೆಗಳ ಕಾಲ ನೆನೆ ಹಾಕಬೇಕು. ಬಳಿಕ ಉದ್ದಿನ ಬೇಳೆಯನ್ನು ನಯವಾಗಿ ಹಿಟ್ಟು ಮಾಡಿಕೊಳ್ಳಬೇಕು. ಇದಕ್ಕೆ ಇಡ್ಲಿ ರವೆ ಮತ್ತು ಉಪ್ಪನ್ನು ಸೇರಿಸಿ ಪಾತ್ರೆಯಲ್ಲಿ ಮುಚ್ಚಿಡಿ.

ರಾತ್ರಿ ವೇಳೆ ಹೀಗೆ ತಯಾರಿಸಿದ ಹಿಟ್ಟಿಗೆ ಬೆಳಗ್ಗೆ ಟೊಮೆಟೋವನ್ನು ರುಬ್ಬಿ ರಸ ತೆಗೆದುಕೊಂಡು ಹಿಟ್ಟಿನ ಜೊತೆ ಸೇರಿಸಬೇಕು. ಹಿಟ್ಟು ತೀರಾ ತೆಳ್ಳಗಾಗದಂತೆ ಎಚ್ಚರವಿರಲಿ. ಈಗ ಇಡ್ಲಿ ಪ್ಲೇಟ್‌ಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಅದರ ಮೇಲೆ ಹಿಟ್ಟನ್ನು ಹಾಕಿ ಆವಿಯಲ್ಲಿ ಬೇಯಿಸಿ.
ತಯಾರಾದ ಇಡ್ಲಿಯನ್ನು ಕೊಬ್ಬರಿ ಚಟ್ನಿಯೊಂದಿಗೆ ಸವಿದರೆ ರುಚಿ ರುಚಿಯಾಗಿರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular