HomeAutoರಸ್ತೆಗಿಳಿದಿದೆ ಮಾರುತಿ ಗ್ರ್ಯಾಂಡ್ ವಿಟಾರಾ CNG, ಬೆಲೆ 12.58 ಲಕ್ಷದಿಂದ ಪ್ರಾರಂಭ

ರಸ್ತೆಗಿಳಿದಿದೆ ಮಾರುತಿ ಗ್ರ್ಯಾಂಡ್ ವಿಟಾರಾ CNG, ಬೆಲೆ 12.58 ಲಕ್ಷದಿಂದ ಪ್ರಾರಂಭ

ಮಾರುತಿ ಸುಜುಕಿ ಕಂಪನಿಯ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಎಸ್‌ಯುವಿ ಎನಿಸಿಕೊಂಡಿರೋ ಗ್ರ್ಯಾಂಡ್ ವಿಟಾರಾದ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿ ಆರಂಭಿಕ ಬೆಲೆ 12.85 ಲಕ್ಷ ರೂಪಾಯಿ. ಕೇವಲ ಎರಡು ರೂಪಾಂತರಗಳಲ್ಲಿ ಇದು ಲಭ್ಯವಿದೆ – ಡೆಲ್ಟಾ (MT) ಮತ್ತು ಝೀಟಾ (MT). ಈ ಎರಡೂ ರೂಪಾಂತರಗಳು ಜನ್ ಕೆ-ಸರಣಿ 1.5-ಲೀಟರ್, ಡ್ಯುಯಲ್ ಜೆಟ್, ಡ್ಯುಯಲ್ VVT ಎಂಜಿನ್‌ನಿಂದ ಚಾಲಿತವಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಎಂಜಿನ್ ಘಟಕದಲ್ಲಿ CNG ಕಿಟ್ ಅನ್ನು ನೀಡಲಾಗಿದೆ. CNGಯಲ್ಲಿ ಇದು 64.6kW@5500rpm ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. CNG ಮೋಡ್‌ನಲ್ಲಿ ಗರಿಷ್ಠ 121.5 Nm @ 4200rpm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಸಿಎನ್‌ಜಿಯನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ. ಕೆ-ಸೀರೀಸ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಸಹ 6-ಸ್ಪೀಡ್ ಎಎಮ್‌ಟಿಯೊಂದಿಗೆ ಲಭ್ಯವಿದೆ. ಗ್ರಾಂಡ್ ವಿಟಾರಾ ಸಿಎನ್‌ಜಿ 26.6 ಕಿಮೀ ಮೈಲೇಜ್ ನೀಡಬಲ್ಲದು. ಸಿಎನ್‌ಜಿ ರೂಪಾಂತರದಲ್ಲಿ 6 ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ.

ಇದು 6 ಏರ್‌ಬ್ಯಾಗ್ ರೂಪಾಂತರಗಳಲ್ಲಿ ಬರುತ್ತಿರುವ ದೇಶದ ಏಕೈಕ ಪ್ರೀಮಿಯಂ CNG SUV ಎನಿಸಿಕೊಂಡಿದೆ. ಸ್ಮಾರ್ಟ್‌ಪ್ಲೇ ಪ್ರೊ + ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್‌ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಇನ್-ಬಿಲ್ಟ್ ನೆಕ್ಸ್ಟ್-ಜೆ ನ್ ಸುಜುಕಿ ಕನೆಕ್ಟ್‌ನಂತಹ ಅನೇಕ ಫೀಚರ್‌ಗಳು ಈ ಕಾರಿನಲ್ಲಿವೆ.  ಗ್ರ್ಯಾಂಡ್ ವಿಟಾರಾ, 2022ರ ಸೆಪ್ಟೆಂಬರ್‌ನಲ್ಲಿ ಲಾಂಚ್‌ ಆಗಿತ್ತು. ಆಗಿನಿಂದ್ಲೇ ಗ್ರಾಹಕರಿಂದ ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. S-CNG ಆಯ್ಕೆಯು ಗ್ರ್ಯಾಂಡ್ ವಿಟಾರಾದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮಾರುತಿ ಸದ್ಯ 14 CNG ಮಾದರಿಗಳನ್ನು ಹೊಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular