HomeLifestyleಮನೆಯಲ್ಲೇ ಮಾಡಿ ಕೊಡಿ ಮಕ್ಕಳಿಗೆ ಇಷ್ಟವಾಗುವ ಕ್ರೀಮ್ ಬಿಸ್ಕತ್

ಮನೆಯಲ್ಲೇ ಮಾಡಿ ಕೊಡಿ ಮಕ್ಕಳಿಗೆ ಇಷ್ಟವಾಗುವ ಕ್ರೀಮ್ ಬಿಸ್ಕತ್

ಬೇಕಾಗುವ ಪದಾರ್ಥಗಳು :

ಮೂರು ಚಟಾಕು ಮೈದಾ ಹಿಟ್ಟು, 4 ಚಟಾಕು ಸಕ್ಕರೆ, ನಾಲ್ಕು ಚಮಚ ಬೆಣ್ಣೆ, 2 ಕಪ್ ಕಸ್ಟರ್ಡ್ ಪೌಡರ್, ವೆನಿಲಾ ಎಸೆನ್ಸ್ ಹಾಗೂ 1 ಮೊಟ್ಟೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಯಾರಿಸುವ ವಿಧಾನ :

ಕ್ರೀಮ್ ತಯಾರು ಮಾಡಿಕೊಳ್ಳಲು ಬೆಣ್ಣೆಯನ್ನು ಸ್ವಲ್ಪ ಬೀಸಿದ ಸಕ್ಕರೆಯೊಂದಿಗೆ ಚಿನ್ನಾಗಿ ಉಜ್ಜಿ. ಮಿಶ್ರಣಕ್ಕೆ ಸ್ವಲ್ಪ ಎಸೆನ್ಸ್ ಹಾಕಿ. ಕ್ರೀಮ್ ಸಿದ್ಧವಾಗುತ್ತದೆ.

ಈ ಮಿಶ್ರಣವನ್ನು ಮೈದಾ ಹಾಗೂ ಕಸ್ಟರ್ಡ್ ಪೌಡರಿನ ಮಿಶ್ರಣಕ್ಕೆ ಬೆರೆಸಿ. ಮೊಟ್ಟೆಯೊಳಗಿನ ತಿರುಳನ್ನು ಹಾಕಿ ಚೆನ್ನಾಗಿ ಬೆರೆಸಿದರೆ ಮುದ್ದೆಯಂತಾಗುತ್ತದೆ.

ಒಂದು ಮಣೆಯ ಮೇಲೆ ಈ ಮುದ್ದೆಯನ್ನು ಒತ್ತಿ ಒಂದು ನಿರ್ದಿಷ್ಟ ಉದ್ದ ಮತ್ತು ದಪ್ಪ ಗಾತ್ರಕ್ಕೆ ಕುಯ್ದು ಓವನ್ ನಲ್ಲಿ ಬೇಯಿಸಿ. ಆರಿದ ಮೇಲೆ ಎರಡು ಬಿಸ್ಕತ್ ಗಳ ಮಧ್ಯೆ ಕ್ರೀಮ್ ಸವರಿ ಮುಚ್ಚಿ. ಕ್ರೀಮ್ ಬಿಸ್ಕತ್ ತಯಾರಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular