HomeLatest Newsರೋಗಗಳಿಗೆ ಕಾರಣವಾಗುತ್ತೆ ಸ್ವಚ್ಛವಿಲ್ಲದ ಒಳ ಉಡುಪು

ರೋಗಗಳಿಗೆ ಕಾರಣವಾಗುತ್ತೆ ಸ್ವಚ್ಛವಿಲ್ಲದ ಒಳ ಉಡುಪು

ಒಳ ಉಡುಪುಗಳಿಂದಲೇ ಹಲವಾರು ರೋಗಗಳು ಅಂಟಿಕೊಳ್ಳುತ್ತವೆ. ಹಾಗಾಗಿ ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು.

ನಿತ್ಯ ಬಳಸುವ ಒಳ ಉಡುಪುಗಳನ್ನು ಯಾವುದೇ ಕಾರಣಕ್ಕೂ ಒಗೆಯದೆ ಎರಡನೇ ದಿನಕ್ಕೆ ಬಳಸದಿರಿ. ಇದರಿಂದ ಸೋಂಕು ಹರಡುವ ಸಾಧ್ಯತೆ ಅಧಿಕ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲಾ ಬಟ್ಟೆಗಳೊಂದಿಗೆ ಅಥವಾ ಮನೆಯ ಇತರರ ಉಡುಪುಗಳೊಂದಿಗೆ ಇದನ್ನೂ ಸೇರಿಸಿ ವಾಶಿಂಗ್ ಮೆಷಿನ್ ನಲ್ಲಿ ಒಗೆಯದಿರಿ. ಸ್ನಾನ ಮಾಡುವಾಗಲೇ ತೊಳೆದು ಹಾಕಿ. ಬಳಿಕ ಬಿಸಿ ನೀರಿನಲ್ಲಿ ಮುಳುಗಿಸಿ ತೆಗೆಯುವುದು ಮತ್ತೂ ಒಳ್ಳೆಯದು.

ಕಂಫರ್ಟ್ ಬಳಸುವುದರಿಂದ ಕೆಲವರಿಗೆ ಅಲರ್ಜಿಯಂಥ ಸಮಸ್ಯೆಗಳು ಕಂಡು ಬಂದಾವು. ಹೀಗಾಗಿ ಒಣಗಿಸುವ ಮೊದಲು ಬೆಚ್ಚಗಿನ ನೀರಿನಲ್ಲಿ ಒಮ್ಮೆ ಮುಳುಗಿಸಿ ತೆಗೆದರೆ ಸಾಕು. ಉತ್ತಮ ಗಾಳಿಯಾಡುವ ಪ್ರದೇಶದಲ್ಲೇ ಒಣಗಿಸಿ. ಸೂರ್ಯನ ಬಿಸಿಲು ನೇರವಾಗಿ ಬಿದ್ದರೆ ಮತ್ತೂ ಒಳ್ಳೆಯದು.

ತೊಳೆಯದ ಒಂದೇ ಒಳ ವಸ್ತ್ರವನ್ನು ಹಲವು ದಿನಗಳ ಕಾಲ ಬಳಸುವುದರಿಂದ ಹೆಚ್ಚು ಕೀಟಾಣುಗಳು ಉತ್ಪತ್ತಿಯಾಗಿ ನಿಮ್ಮನ್ನು ಹೊಸ ಕಾಯಿಲೆಗಳು ಕಾಡಲು ಆರಂಭಿಸಬಹುದು.

For Latest News Updates, Join Our Whatsapp Community🚩
RELATED ARTICLES

Most Popular