HomeLifestyleಮನೆಯಲ್ಲೇ ತಯಾರಿಸಿ ಆರೋಗ್ಯಕರ ಡ್ರೈ ಫ್ರೂಟ್ಸ್ ಲಾಡು

ಮನೆಯಲ್ಲೇ ತಯಾರಿಸಿ ಆರೋಗ್ಯಕರ ಡ್ರೈ ಫ್ರೂಟ್ಸ್ ಲಾಡು

ಬೇಕಾಗುವ ಪದಾರ್ಥಗಳು : ಗೋಡಂಬಿ- 1 ಕಪ್, ಬಾದಾಮಿ- 1 ಕಪ್, ಒಣದ್ರಾಕ್ಷಿ- 1 ಕಪ್, ಒಣಕೊಬ್ಬರಿ ತುರಿ- 1/2 ಕಪ್, ಏಲಕ್ಕಿ ಪುಡಿ- 1 ಚಮಚ, ಹಸಿ ಖರ್ಜುರ- ಒಂದೂವರೆ ಕಪ್, ಗಸಗಸೆ 1/4 ಕಪ್.

ಮಾಡುವ ವಿಧಾನ : ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಖರ್ಜೂರ ಇವೆಲ್ಲವನ್ನೂ 1 ಚಮಚ ತುಪ್ಪದೊಂದಿಗೆ ಬೇರೆ ಬೇರೆಯಾಗಿ ಸಣ್ಣ ಉರಿಯಲ್ಲಿ ಹುರಿದು ಇಟ್ಟುಕೊಳ್ಳಬೇಕು. ಗಸಗಸೆ ಮತ್ತು ಒಣಕೊಬ್ಬರಿಯನ್ನು ಹುರಿಯಬೇಕು.

ಹುರಿದಿಟ್ಟುಕೊಂಡಿರುವ ಸಾಮಗ್ರಿಗಳು ಆರಿದ ಮೇಲೆ ಬೇರೆ ಬೇರೆಯಾಗಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಎಲ್ಲವನ್ನೂ ಬೆರೆಸಿಕೊಂಡು ಅದರ ಜೊತೆಗೆ ಏಲಕ್ಕಿ ಪುಡಿ ಮತ್ತು 1 ಚಮಚ ತುಪ್ಪವನ್ನು ಬೆರೆಸಿ ಉಂಡೆಗಳನ್ನಾಗಿ ಕಟ್ಟಿದರೆ, ಡ್ರೈ ಫ್ರೂಟ್ಸ್ ಲಾಡು ರೆಡಿಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವು ಬೆಲ್ಲ ಅಥವ ಸಕ್ಕರೆ ಉಪಯೋಗಿಸದೆ ತಯಾರಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಮತ್ತು ಮಕ್ಕಳು ಕೂಡಾ ಇಷ್ಟಪಟ್ಟು ತಿನ್ನುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular