HomeLifestyle'ಜೀರ್ಣಶಕ್ತಿ' ಹೆಚ್ಚಿಸುವ ಸಿಂಪಲ್ ಸೂಪ್

‘ಜೀರ್ಣಶಕ್ತಿ’ ಹೆಚ್ಚಿಸುವ ಸಿಂಪಲ್ ಸೂಪ್

ತರಕಾರಿ ಸೇವಿಸುವುದರಿಂದ ಎಷ್ಟೆಲ್ಲಾ ಅನುಕೂಲವಾಗುತ್ತದೆ ಎಂಬುದು ತಿಳಿದೇ ಇದೆ. ತರಕಾರಿ ಸೂಪ್ ಅನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಶಕ್ತಿ ಪ್ರಮಾಣ ಹೆಚ್ಚಾಗುತ್ತದೆ. ಇಂತಹ ತರಕಾರಿ ಸಿಂಪಲ್ ಸೂಪ್ ತಯಾರಿಸುವ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತರಕಾರಿ ಬೇಯಿಸಿದ ನೀರು -2 ಲೋಟ, ಉಪ್ಪು -ಅರ್ಧ ಚಮಚ, ಕಾಳು ಮೆಣಸು -1 ಚಮಚ, ಸಾಸಿವೆ, ಜೀರಿಗೆ –ಅರ್ಧ ಚಮಚ, ಎಣ್ಣೆ -4 ಚಮಚ, ಕೊತಂಬರಿ ಸೊಪ್ಪು.

ತಯಾರಿಸುವ ವಿಧಾನ:

ತರಕಾರಿ ಬೇಯಿಸಿದ ನೀರನ್ನು ಸ್ಟೀಲ್ ಪಾತ್ರೆಯಲ್ಲಿ ಹಾಕಿ, ಅದಕ್ಕೆ ಕಾಳು ಮೆಣಸಿನ ಪುಡಿ, ಉಪ್ಪು ಹಾಕಬೇಕು. ಸಾಸಿವೆ, ಜೀರಿಗೆಯನ್ನು ಒಗ್ಗರಣೆ ಮಾಡಿ ಹಾಕಿರಿ.

ನಂತರ ಕೊತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಾಕಬೇಕು. ಲೋಟಕ್ಕೆ ಹಾಕಿಕೊಂಡು ಊಟ ಅಥವಾ ತಿಂಡಿ ತಿನ್ನುವ ಮೊದಲು ಕುಡಿಯಿರಿ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular