HomeAstroಈ ರಾಶಿಯ ಕೃಷಿ ಕ್ಷೇತ್ರದವರಿಗೆ ಇಂದು ಕಾದಿದೆ ಲಾಭ

ಈ ರಾಶಿಯ ಕೃಷಿ ಕ್ಷೇತ್ರದವರಿಗೆ ಇಂದು ಕಾದಿದೆ ಲಾಭ

 

ಮೇಷ : ಗೃಹದೋಷ ಎದುರಾಗುವ ಸಾಧ್ಯತೆ ಇದೆ. ಕುಟುಂಬಸ್ಥರ ಜೊತೆ ಕೂತು ಮನೆಯಲ್ಲೊಂದು ಶುಭ ಕಾರ್ಯ ನಡೆಸುವ ಬಗ್ಗೆ ಯೋಚನೆ ಮಾಡಿ. ಅವಿವಾಹಿತರಿಗೆ ಮದುವೆ ಸಂಬಂಧ ಕೂಡಿ ಬರಲಿದೆ. ಕಚೇರಿಯಲ್ಲಿ ನೀವು ಶ್ರದ್ಧೆಯಿಂದ ಮಾಡಿದ ಕೆಲಸ ಫಲ ನೀಡಲಿದೆ. ನರಸಿಂಹನನ್ನ ಆರಾಧಿಸಿ.

ವೃಷಭ : ವೈವಾಹಿಕ ಸಂಬಂಧದ ಬಗ್ಗೆ ಆಸಕ್ತಿ ಮೂಡಲಿದೆ. ಕಚೇರಿಯಲ್ಲಿ ಹೊಸ ಕೆಲಸಗಳನ್ನ ಕಲಿಯಲಿದ್ದೀರಿ. ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ತಾಳ್ಮೆಯಿಂದ ವ್ಯವಹರಿಸಿದಷ್ಟೂ ಉದ್ಯಮದಲ್ಲಿ ಲಾಭವಿದೆ. ದಿನಸಿ ವ್ಯಾಪಾರಿಗಳಿಗೆ ಇದು ಶುಭ ದಿನ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಿಥುನ : ಗಣ್ಯವ್ಯಕ್ತಿಯನ್ನ ಭೇಟಿಯಾಗಲಿದ್ದೀರಿ. ಯಾವುದೇ ವಿಚಾರದ ಬಗ್ಗೆಯೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳೋದನ್ನ ರೂಢಿ ಮಾಡಿಕೊಳ್ಳಿ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿ ಇರಲಿದೆ. ಮನೆಗೆ ಅನಿರೀಕ್ಷಿತ ಅತಿಥಿ ಭೇಟಿ ನೀಡಲೂಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕಟಕ : ನಿರುದ್ಯೋಗಿಗಳಿಗೆ ಶುಭ ಸುದ್ದಿ ಕಾದಿದೆ. ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗಲಿದೆ. ಉದ್ಯಮಿಗಳಿಗೆ, ವೈದ್ಯ ವೃತ್ತಿಯವರಿಗೆ ಲಾಭವಿದೆ. ಹಿರಿಯರ ಜೊತೆ ವಾದ ಮಾಡುವಂತಹ ಸಂದರ್ಭ ಎದುರಾಗಬಹುದು. ತಾಳ್ಮೆಯನ್ನ ಕಾಯ್ದುಕೊಳ್ಳಿ. ಕುಲದೇವತೆಯನ್ನ ಆರಾಧಿಸಿ.

ಸಿಂಹ : ಆದಾಯಕ್ಕಿಂತ ಖರ್ಚು ಹೆಚ್ಚಾಗದಂತೆ ನೋಡಿಕೊಳ್ಳಿ. ಕುಟುಂಬಸ್ಥರೊಂದಿಗೆ ಶಾಂತಿಯಿಂದ ವರ್ತಿಸಿ. ಸಂಗಾತಿ ನೀಡುವ ಸಲಹೆಗಳನ್ನ ಪೂರ್ತಿ ಕೇಳಿಸಿಕೊಳ್ಳಿ. ಮಕ್ಕಳ ಖರ್ಚು ವೆಚ್ಚಗಳನ್ನ ಸರಿದೂಗಿಸೋದು ಕೊಂಚ ಕಷ್ಟ ಎನಿಸಬಹುದು. ಯಾರು ಏನೇ ಟೀಕಿಸಿದರೂ ಆಕ್ರೋಶಕ್ಕೆ ಒಳಗಾಗಬೇಡಿ.

ಕನ್ಯಾ : ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಮಾತನ್ನ ನೆನಪಿನಲ್ಲಿಡಿ. ಪ್ರೇಮ ಜೀವನದಲ್ಲಿ ಏರಿಳಿತ ಕಂಡು ಬರಬಹುದು. ಆದಾಯಕ್ಕಿಂತ ಖರ್ಚು ಜಾಸ್ತಿ ಆಗೋದ್ರಿಂದ ಕೊಂಚ ಎಚ್ಚರ ಅಗತ್ಯ. ಅನಿರೀಕ್ಷಿತವಾಗಿ ಹೊಸ ಜವಾಬ್ದಾರಿಯೊಂದು ಹೆಗಲೇರಲಿದೆ. ಜವಳಿ ಉದ್ಯಮಿಗಳಿಗೆ ಲಾಭವಿದೆ.

ತುಲಾ : ಸಾಂಸಾರಿಕ ಜೀವನದಲ್ಲಿ ಕೊಂಚ ಕಿರಿಕಿರಿ ಕಂಡುಬರಲಿದೆ. ಕಚೇರಿ ವಿಚಾರದಲ್ಲಿ ನೀವು ತೆಗೆದುಕೊಂಡ ನಿರ್ಧಾರಗಳು ನಿಮ್ಮನ್ನ ಸರಿದಾರಿಗೆ ಕರೆದುಕೊಂಡು ಹೋಗಲಿದೆ. ಸ್ನೇಹಿತರ ಜೊತೆ ವಾದ ಬೇಡ. ಕರಕುಶಲ ಕಾರ್ಮಿಕರಿಗೆ ಉನ್ನತಿ ಇದೆ.

ವೃಶ್ಚಿಕ : ನಿಮ್ಮ ನಿರ್ಧಾರಗಳಿಗೆ ಮಹತ್ವ ನೀಡಿ. ಬೆಳ್ಳಗಿರೋದೆಲ್ಲಾ ಹಾಲಲ್ಲ ಎಂಬ ಮಾತನ್ನ ನೆನಪಿನಲ್ಲಿಡಿ. ಕಚೇರಿಯಲ್ಲಿ ಹಿತಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮ ಒಳಿತಿಗಾಗಿ ಕುಟುಂಬಸ್ಥರು ನೀಡುವ ಸಲಹೆಗಳನ್ನ ಆಲಿಸಿ. ಹೂಡಿಕೆ ಮಾಡುವವರಿಗೆ ಇದು ಸುದಿನವಾಗಿದೆ.

ಧನು : ದೊಡ್ಡ ಸಾಧನೆ ಮಾಡಬೇಕು ಎಂದುಕೊಂಡಿದ್ದ ವಿದ್ಯಾರ್ಥಿಗಳ ಆಸೆ ಈಡೇರಲಿದೆ. ಅನಿರೀಕ್ಷಿತವಾಗಿ ಹೊಸ ಜವಾಬ್ದಾರಿಯನ್ನ ಹೊರಬೇಕಾದ ಸಂದರ್ಭ ಎದುರಾಗಬಹುದು. ಬೇರೆಯವರು ನೀಡಿದ ಸಲಹೆಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಸಂತಾನ ಭಾಗ್ಯವಿದೆ.

ಮಕರ : ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಆಸ್ತಿವ್ಯಾಜ್ಯ ಇಂದು ರೋಚಕ ತಿರುವು ಪಡೆಯಲಿದೆ. ಕೃಷಿ ಕ್ಷೇತ್ರದವರಿಗೆ ಲಾಭ ಕಾದಿದೆ. ಸಂಗಾತಿ ಜೊತೆ ಕಿರಿಕಿರಿ ಉಂಟಾಗಬಹುದು. ದೂರ ಪ್ರಯಾಣದ ವೇಳೆ ಜನರಿಂದ ಎಚ್ಚರಿಕೆಯಿಂದಿರಿ. ಗಣೇಶ ಸ್ತ್ರೋತ್ರ ಪಠಿಸಿ.

ಕುಂಭ: ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಲಾಭ ಕಾದಿದೆ. ಬಹುದಿನಗಳಿಂದ ಕೊಂಡುಕೊಳ್ಳಬೇಕು ಎಂದುಕೊಂಡಿದ್ದ ವಸ್ತು ಇಂದು ನಿಮ್ಮದಾಗಲಿದೆ. ಉದ್ಯೋಗದಲ್ಲಿ ಯಾವುದೇ ಅಡಚಣೆ ಇಲ್ಲ. ವಿದ್ಯಾರ್ಥಿಗಳಿಗೆ ಇಂದು ಯಾವುದೇ ಲಾಭವಿಲ್ಲ. ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು.

ಮೀನ : ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವವರು ಕಾಗದ ಪತ್ರಗಳಿಗೆ ಸಹಿ ಹಾಕುವ ಮುನ್ನ ಎಚ್ಚರದಿಂದಿರಿ. ಮಾರಾಟದ ಕ್ಷೇತ್ರದಲ್ಲಿ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಮನೆಯ ಕಿರಿಯ ಸದಸ್ಯರಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ.

For Latest News Updates, Join Our Whatsapp Community🚩
RELATED ARTICLES

Most Popular