alex Certify ʼಪರಿಸರʼ ನಾಶ ತಡೆಯಲು ಮರಗಳ ಜೊತೆ ಮದುವೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪರಿಸರʼ ನಾಶ ತಡೆಯಲು ಮರಗಳ ಜೊತೆ ಮದುವೆ…!

ಜೂನ್‌ 5 ರ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾನವನ ದುರಾಸೆಗೆ ಪರಿಸರ ದಿನೇ ದಿನೇ ಹಾಳಾಗುತ್ತಿರುವ ಮಧ್ಯೆ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದೆ.

ಪರಿಸರ ನಾಶ ತಡೆಯಲು ಹತ್ತಾರು ಯೋಜನೆಗಳು ಜಾರಿಯಲ್ಲಿವೆ. ಆದ್ರೆ ಯಾವುದೂ ಯಶಸ್ವಿಯಾಗ್ತಿಲ್ಲ. ಹಾಗಾಗಿ ಮೆಕ್ಸಿಕೋದಲ್ಲಿ ಮಹಿಳೆಯರು ಮರಗಳನ್ನೇ ಮದುವೆಯಾಗುತ್ತಾರೆ. ಈ ಮೂಲಕ ಪರಿಸರ ರಕ್ಷಣೆ ಮಾಡೋದು ಅವರ ಉದ್ದೇಶ.

ಓಕ್ಸಾಕ ನಗರದಲ್ಲಿ ಅರಣ್ಯ ಸಂಪೂರ್ಣ ನಾಶವಾಗಿ ಹೋಗ್ತಾ ಇತ್ತು. ದರೋಡೆಕೋರರ ಗುಂಪು ಮರಗಳನ್ನು ಕಡಿದು, ಕಾಡನ್ನು ಬರಿದು ಮಾಡ್ತಿತ್ತು. ಹಾಗಾಗಿ ಮರಗಳ ರಕ್ಷಣೆಗಾಗಿ ಬೇದನಿ ಎಂಬ ಸಂಘಟನೆ ‘ಮ್ಯಾರಿ ಎ ಟ್ರೀ’ ಎಂಬ ಹೊಸ ಆಚರಣೆಯನ್ನು ಪರಿಚಯಿಸಿತ್ತು.

ನಂತರ ಇದು ಸಾಂಪ್ರದಾಯಿಕ ಮದುವೆಯ ರೂಪ ಪಡೆದುಕೊಂಡಿದೆ. ಮಹಿಳೆಯರು ಹಾಗೂ ಪುರುಷರು ಮರಗಳನ್ನು ಮದುವೆಯಾಗುವ ಮೂಲಕ ಪರಿಸರ ರಕ್ಷಣೆ ಮಾಡ್ತಿದ್ದಾರೆ. ಈ ಮದುವೆಗೆ ಕಾನೂನಿನ ಮಾನ್ಯತೆಯಿಲ್ಲ. ಆದ್ರೆ ಇದರ ಹಿಂದೆ ನಿಸರ್ಗದ ಬಗ್ಗೆ ಕಾಳಜಿ ಇರೋದ್ರಿಂದ ವಿರೋಧ ಸಹ ವ್ಯಕ್ತವಾಗಿಲ್ಲ.

A group of environmental activists hold a traditional ceremony during an event called "Marry a Tree" in the community of San Jacinto Amilpas, Oaxaca state, Mexico on Feb. 25. It began as a ritual by the organization Bedani to give thanks to Mother Earth and later gave way to a symbolic wedding based on Inca customs where women and men "marry" trees in a rite led by Peruvian actor and environmentalist Richard Torres.#Goodnight

Posted by Hi there, I am a looser. on Tuesday, February 27, 2018

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...