alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತಮ ಗಳಿಕೆಯ ಮೂಲವಾಗ್ತಿದೆ ಯೋಗ

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ ಬಹಳ ಒಳ್ಳೆಯದು. ಬಹಳ ಜನರಿಗೆ ಯೋಗ ಹಣ ಸಂಪಾದಿಸುವ ಒಳ್ಳೆ ಮಾರ್ಗವಾಗಿದೆ. ಯೋಗ ಶಿಬಿರಗಳು ವಿಶ್ವದಾದ್ಯಂತ ವ್ಯಾಪಿಸಿವೆ.

ಆರೋಗ್ಯ ಹಾಗೂ ಫಿಟ್ನೆಸ್ ಕ್ಷೇತ್ರದಲ್ಲಿ ಯೋಗಕ್ಕೆ ಮಹತ್ವ ಹೆಚ್ಚಾಗುತ್ತಲೇ ಇದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯತ್ನದಿಂದ ವಿಶ್ವಸಂಸ್ಥೆ ಜೂನ್ 21 ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿದೆ. ಇದಾದ ಮೇಲೆ ಯೋಗಕ್ಕೆ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅನೇಕರು ಯೋಗವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಯೋಗ ಕೇಂದ್ರದ ನಿರ್ದೇಶಕರೊಬ್ಬರ ಪ್ರಕಾರ ಅಂತರಾಷ್ಟ್ರೀಯ ಯೋಗ ದಿವಸದ ಹಿನ್ನೆಲೆಯಲ್ಲಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಯೋಗ ಕೇಂದ್ರದ ವ್ಯವಹಾರ ಶೇಕಡಾ 30-40ರಷ್ಟು ಏರಿಕೆಯಾಗುತ್ತದೆಯಂತೆ. ಯೋಗ ದಿವಸ ಘೋಷಣೆಯಾದ ಮೇಲೆ ಯೋಗದ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಅಗತ್ಯವಿಲ್ಲ. ಜನರೇ ಯೋಗವನ್ನು ಅರಸಿ ಬರ್ತಿದ್ದಾರೆ. ಪ್ರತಿ ವರ್ಷ ಯೋಗ ಕಲಿಯುವವರ ಸಂಖ್ಯೆ ಹೆಚ್ಚಾಗ್ತಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಅಂದಾಜಿನ ಪ್ರಕಾರ ವಿಶ್ವದಲ್ಲಿ ಯೋಗ ಉದ್ಯಮ 80 ಅರಬ್ ಡಾಲರ್ ತಲುಪಿದೆಯಂತೆ. ಭಾರತದಲ್ಲಿ ಈ ಉದ್ಯಮ 85 ಸಾವಿರ ಕೋಟಿ ರೂ. ತಲುಪಿದೆಯಂತೆ. ಅಮೆರಿಕಾ ಒಂದರಲ್ಲಿಯೇ 2020 ರ ವೇಳೆಗೆ ಯೋಗ ಉದ್ಯಮ 11.5 ಅರಬ್ ಡಾಲರ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಅಮೆರಿಕಾದಲ್ಲಿ 2015 ರಲ್ಲಿ 3.7 ಕೋಟಿ ಮಂದಿ ಯೋಗದೊಂದಿಗೆ ಸಂಬಂಧ ಹೊಂದಿದ್ದರು. 2020 ರ ವೇಳೆಗೆ ಈ ಸಂಖ್ಯೆ 5.5 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...