alex Certify ಮನೆಯಲ್ಲೇ ಕುಳಿತು ಈ ಕೆಲಸ ಮಾಡಿದ್ರೆ ದಿನಕ್ಕೆ ಸಿಗುತ್ತೆ 3 ಸಾವಿರಕ್ಕೂ ಅಧಿಕ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು ಈ ಕೆಲಸ ಮಾಡಿದ್ರೆ ದಿನಕ್ಕೆ ಸಿಗುತ್ತೆ 3 ಸಾವಿರಕ್ಕೂ ಅಧಿಕ ಹಣ

ಫುಲ್ ಟೈಂ ಹಾಗೂ ವ್ಯಾಪಾರದ ನಡುವೆ ಇರುವ ಇನ್ನೊಂದು ಕೆಲಸ ಫ್ರೀ ಲಾನ್ಸರ್. ಅಂದ್ರೆ ಸ್ವತಂತ್ರವಾಗಿ ಕೆಲಸ ಮಾಡುವುದು. ಈ ಫ್ರೀ ಲಾನ್ಸರ್ ಕೆಲಸದಲ್ಲಿ ಕೈತುಂಬ ಹಣ ಸಿಗುವುದಿಲ್ಲ ಹಾಗೆ ಕೆಲಸ ಖಾಯಂ ಅಲ್ಲ ಎನ್ನುವ ಭಾವನೆ ಇತ್ತು. ಈಗ ಈ ಕಲ್ಪನೆ ಬದಲಾಗಿದೆ. ಫ್ರೀಲಾನ್ಸರ್ ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅಧ್ಯಯನವೊಂದರ ಪ್ರಕಾರ ವೃತ್ತಿಪರ ಫ್ರೀಲಾನ್ಸರ್ ದಿನಕ್ಕೆ 40 ಸಾವಿರ ರೂಪಾಯಿ ಗಳಿಸ್ತಾರಂತೆ.

ವರದಿಯೊಂದರ ಪ್ರಕಾರ, ಮೊದಲ ಬಾರಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುವ ವ್ಯಕ್ತಿ ದಿನಕ್ಕೆ 800 ರೂ. ಗಳಿಸುವ ಸಾಮರ್ಥ್ಯ ಹೊಂದಿರುತ್ತಾನೆ. 0-5 ವರ್ಷ ಅನುಭವವುಳ್ಳ ಫ್ರೀಲಾನ್ಸರ್ ದಿನಕ್ಕೆ 2 ಸಾವಿರದಷ್ಟು ಗಳಿಸ್ತಾನೆ. ಅನುಭವ ಹೆಚ್ಚಾದಂತೆ ಗಳಿಕೆ ಕೂಡ ಹೆಚ್ಚಾಗುತ್ತದೆ. ಐದರಿಂದ ಹತ್ತು ವರ್ಷ ಅನುಭವವಿರುವ ವ್ಯಕ್ತಿ ದಿನಕ್ಕೆ 5 ಸಾವಿರ ಗಳಿಸ್ತಾನೆ.

ಮ್ಯಾನೇಜ್ ಮೆಂಟ್, ಮಾರ್ಕೆಟಿಂಗ್, ಐಟಿ ಕ್ಷೇತ್ರದಲ್ಲಿ ಐದು ವರ್ಷಕ್ಕಿಂತ ಹೆಚ್ಚು ಅನುಭವವಿದ್ದರೆ ನೀವೂ ಪ್ರತಿದಿನ ಆಪಾರ ಹಣ ಗಳಿಸಬಹುದು. 20 ವರ್ಷಕ್ಕಿಂತ ಹೆಚ್ಚು ಅನುಭವ ನಿಮಗಿದ್ದರೆ ನೀವು 10 ಸಾವಿರ ರೂಪಾಯಿಯನ್ನು ದಿನಕ್ಕೆ ಸಂಪಾದಿಸಬಹುದಾಗಿದೆ. ಐಟಿ ಸೇವೆ, ವೃತ್ತಿಪರ ಸೇವೆ ಹಾಗೂ ಇ-ಕಾಮರ್ಸ್ ಹಾಗೂ ಚಿಲ್ಲರೆ ಉದ್ಯಮದಲ್ಲಿ ಫ್ರೀಲಾನ್ಸರ್ಗೆ ಹೆಚ್ಚಿನ ಬೇಡಿಕೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...