alex Certify ʼಆತ್ಮಹತ್ಯೆʼ ಪ್ರಕರಣಗಳ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆತ್ಮಹತ್ಯೆʼ ಪ್ರಕರಣಗಳ ಕುರಿತು ಆಘಾತಕಾರಿ ಮಾಹಿತಿ ಬಹಿರಂಗ

ಸೆಪ್ಟೆಂಬರ್‌ 10 ರ ಇಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೀಗ ಕೊರೊನಾ ವಕ್ಕರಿಸಿರುವ ಪರಿಣಾಮ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿರುವ ಕೆಲವರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದರೆ ಎಲ್ಲವನ್ನೂ ಎದುರಿಸಬಲ್ಲೆ ಎಂಬ ಆತ್ಮವಿಶ್ವಾನ ಬೆಳೆಸಿಕೊಂಡರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಮನಗಾಣಬೇಕಿದೆ. ಕ್ಷುಲ್ಲಕ ಕಾರಣಗಳಿಗೆ ಅಮೂಲ್ಯ ಜೀವವನ್ನು ಕಳೆದುಕೊಳ್ಳಬಾರದು. ವಿಶ್ವ ಆತ್ಮಹತ್ಯೆ ತಡೆ ದಿನದ‌ ಸಂದರ್ಭಲ್ಲಿ ಈ ವಿಶೇಷ ಲೇಖನ.

ಜಗತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ 10 ಮಹಿಳೆಯರಲ್ಲಿ ನಾಲ್ವರು ಭಾರತೀಯರಾಗಿರುತ್ತಾರೆ ಎಂಬ ಆತಂಕಕಾರಿ ಅಂಶ ಈ ಹಿಂದೆ ಸಮೀಕ್ಷೆಯಲ್ಲಿ ಬಯಲಾಗಿತ್ತು. ಅಲ್ಲದೇ ಇವರಲ್ಲಿ ಬಹುತೇಕರು 40 ವರ್ಷಕ್ಕಿಂತ ಕಡಿಮೆಯವರು ಎಂದು ಹೇಳಲಾಗಿದೆ.

2016ರಲ್ಲಿ ಭಾರತ ಜಗತ್ತಿನ ಶೇ. 17.8 (130 ಕೋಟಿ) ಜನಸಂಖ್ಯೆ ಹೊಂದಿದ್ದು, ಜಗತ್ತಿನಲ್ಲಿ ಸಂಭವಿಸುತ್ತಿರುವ ಮಹಿಳೆಯರ ಆತ್ಮಹತ್ಯೆಯಲ್ಲಿ ಶೇ. 36.6 ಪಾಲು ಭಾರತದ್ದಿದೆ. ಅಂದರೆ ವಿಶ್ವಾದ್ಯಂತ ಅತ್ಮಹತ್ಯೆ ಮಾಡಿಕೊಂಡಿರುವ 2,57,624 ಮಹಿಳೆಯರ ಪೈಕಿ 94,380 ಮಂದಿ ಭಾರತೀಯರು.

ಅಲ್ಲದೇ 1990ರಲ್ಲಿ ಭಾರತದ ಜನಸಂಖ್ಯೆ ಜಗತ್ತಿನ ಜನಸಂಖ್ಯೆಯ ಶೇ. 16.4 ಹಾಗೂ ಮಹಿಳೆಯರ ಆತ್ಮಹತ್ಯೆ ಪ್ರಮಾಣ ಶೇ. 25.3 ರಷ್ಟಿತ್ತು ಎಂದು ಹೇಳಲಾಗಿತ್ತು. ಮಾತ್ರವಲ್ಲ ಜಗತ್ತಿಗೆ ಹೋಲಿಸಿದರೆ ಭಾರತದಲ್ಲಿನ ಮಹಿಳೆಯರ ಆತ್ಮಹತ್ಯೆ ಪ್ರಮಾಣ 1990ರಲ್ಲಿ ಶೇ.25.3ರಷ್ಟಿದ್ದಿದ್ದು 2016ರಲ್ಲಿ ಶೇ.36.6 ಏರಿತ್ತು ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...