alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಮೊಟ್ಟೆಯನ್ನು ಬಾಯಲ್ಲಿಟ್ಟುಕೊಂಡು ರಕ್ಷಿಸುತ್ತೆ ಈ ಮೀನು

 

ಪ್ರಾಣಿಗಳಲ್ಲೇ ಆಗಿರಬಹುದು ಅಥವಾ ಮನುಷ್ಯರಲ್ಲೇ ಆಗಿರಬಹುದು ಮಗುವಿನ ಆರೈಕೆ, ಲಾಲನೆ ಪಾಲನೆಯಲ್ಲಿ ಮುಖ್ಯ ಪಾತ್ರ ಹೆಣ್ಣಿನದೇ ಆಗಿರುತ್ತದೆ. ಆದರೆ ಈ ಜಲಚರದ ವಿಷಯದಲ್ಲಿ ಹಾಗಲ್ಲ. ಇಲ್ಲಿ ಹೆಣ್ಣು ಮೊಟ್ಟೆ ಇಟ್ಟ ನಂತರ ಮುಂದಿನ ಕರ್ತವ್ಯವನ್ನು ಗಂಡು ಜೀವಿಯೇ ನಿರ್ವಹಿಸುತ್ತದೆ.

 ಅಮೆರಿಕಾದ ಪೂರ್ವ ಕರಾವಳಿಯ ಅಟ್ಲಾಂಟಿಕ್ ಸಾಗರದಲ್ಲಿ ಕಂಡುಬರುವ ಕ್ಯಾಟ್ ಫಿಶ್ ನ ಸಂತಾನೋತ್ಪತ್ತಿ ಆಶ್ಚರ್ಯಕರವಾಗಿದೆ. ಗರ್ಭ ಧರಿಸಿದ ಹೆಣ್ಣು ಕ್ಯಾಟ್ ಫಿಶ್, ಮೊಟ್ಟೆ ಇಟ್ಟ ತಕ್ಷಣ ಆ ಮೊಟ್ಟೆಗಳನ್ನು ಗಂಡು ಕ್ಯಾಟ್ ಫಿಶ್ ತನ್ನ ಬಾಯಲ್ಲಿ ಇಟ್ಟುಕೊಳ್ಳುತ್ತೆ. ಮೊಟ್ಟೆ ಇಟ್ಟ ನಂತರ ಹೆಣ್ಣು ಕ್ಯಾಟ್ ಫಿಶ್ ನ ಜವಾಬ್ದಾರಿ ಮುಗಿದಂತೆಯೇ. ಏಕೆಂದರೆ ಮುಂದಿನ ಕೆಲಸವನ್ನೆಲ್ಲ ಗಂಡು ಫಿಶ್ ನೋಡಿಕೊಳ್ಳುತ್ತದೆ.
ಹೆಣ್ಣು ಮೀನು ಸುಮಾರು 50 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳು ಗೋಲಿ ಗಾತ್ರದ್ದಾಗಿರುತ್ತವೆ. ಗಂಡು ಮೀನು ಸುಮಾರು ಒಂದು ತಿಂಗಳ ಕಾಲ ಎಲ್ಲ ಮೊಟ್ಟೆಗಳನ್ನೂ ತನ್ನ ಬಾಯಿಯಲ್ಲಿಟ್ಟು ಕಾಪಾಡುತ್ತೆ. ಬಾಯಲ್ಲಿ ಮೊಟ್ಟೆಗಳಿರುವ ಕಾರಣ ಆ ಒಂದು ತಿಂಗಳ ಅವಧಿಯಲ್ಲಿ ಅದು ಆಹಾರವನ್ನೇ ತೆಗೆದುಕೊಳ್ಳುವುದಿಲ್ಲ. ಮೊಟ್ಟೆಯೊಡೆದು ಮರಿಗಳು ಹೊರಬಂದ ನಂತರ ಮತ್ತೆ ಆ ಮರಿಗಳನ್ನು ಗಂಡು ಮೀನೇ ನೋಡಿಕೊಳ್ಳುತ್ತೆ. ಶತ್ರುಗಳು ತನ್ನ ಮರಿಗಳ ಮೇಲೆ ದಾಳಿ ಮಾಡದಂತೆ ಕಾಪಾಡುವ ಜವಾಬ್ದಾರಿ ಕೂಡ ಅದರದೇ ಆಗಿರುತ್ತದೆ. ನೋಡಿ ಹೇಗಿದೆ ಸೃಷ್ಟಿಯ ವೈಚಿತ್ರ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...