alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮಗೂ ಗರ್ಲ್ ಫ್ರೆಂಡ್ ಇಲ್ವಾ…?

men-women_144860827729_650_112715123816

ಗರ್ಲ್ ಫ್ರೆಂಡ್ ಇಲ್ಲ ಅಂತಾ ಬೇಜಾರಾಗ್ತಿದೆಯಾ? ನಮ್ಮ ಸ್ನೇಹಿತರೆಲ್ಲ ಪ್ರೀತಿಯಲ್ಲಿ ಬಿದ್ದಿದ್ದಾರೆ. ಆದ್ರೆ ನನಗೆ ಮಾತ್ರ ಗೆಳತಿ ಇಲ್ಲ ಅಂತಾ ಅನೇಕ ಹುಡುಗರು ಜಲಸ್ ಆಗ್ತಾರೆ. ನೀವೂ ಬೇಜಾರು ಮಾಡಿಕೊಳ್ಳುವವರಲ್ಲಿ ಒಬ್ಬರಾಗಿದ್ದರೆ ಇದನ್ನು ಓದಿ. ಗರ್ಲ್ ಫ್ರೆಂಡ್ ಇಲ್ಲದೆ ಹೋದ್ರೂ ಸಾಕಷ್ಟು ಅನುಕೂಲಗಳಿವೆ. ನಿಮ್ಮನ್ನು ನೋಡಿ ನಿಮ್ಮ ಗರ್ಲ್ ಫ್ರೆಂಡ್ ಹೊಂದಿರುವ ಗೆಳೆಯ ಜಲಸ್ ಆಗ್ತಿರ್ತಾನೆ ಎಂಬ ಸತ್ಯ ನಿಮಗೆ ಗೊತ್ತಾ?

ಯಸ್. ಯಾರ ಜೊತೆ ಯಾವಾಗ ಬೇಕಾದ್ರೂ ನೀವು ಸುತ್ತಾಡಿಕೊಂಡು ಬರಬಹುದು. ಯಾರ ಜೊತೆ ಹೋಗಬೇಕು, ಯಾರ ಜೊತೆ ಮಾತನಾಡಬೇಕು ಎನ್ನುವ ಬಗ್ಗೆ ನಿಮಗೆ ಆದೇಶ ನೀಡುವವರು ಯಾರೂ ಇರೋದಿಲ್ಲ.

ಮನಸ್ಸು ಬಂದಾಗ ನೀವು ಯಾವ ಗೆಳೆಯರ ಜತೆ ಬೇಕಾದ್ರೂ ರಾತ್ರಿ ಹೊರಗೆ ಹೋಗಬಹುದು. ಪಬ್, ಬಾರ್ ಅಂತಾ ತಿರುಗಾಡಬಹುದು. ಯಾರಿಗೂ ಸಮಯ ನೀಡಬೇಕಾಗಿಲ್ಲ.

ನಿಮಗೆ ಹೇಗೆ ಬೇಕೋ ಹಾಗೆ ನೀವಿರಬಹುದು. ಚಪ್ಪಲಿ ಅಲ್ಯಾಕಿದೆ. ಬಾತ್ ರೂಂ ಯಾಕೆ ಕ್ಲೀನ್ ಇಲ್ಲ. ಬಟ್ಟೆಗಳೆಲ್ಲ ಏಕೆ ಕೊಳಕಾಗಿದೆ ಎಂದು ಪ್ರಶ್ನೆ ಮಾಡುವವರಿರೋದಿಲ್ಲ.

ನಿಮ್ಮ ಗಳಿಕೆ ನಿಮ್ಮದು. ಇದು ಗೆಳತಿ ಇಲ್ಲದೆ ಇರೋದ್ರ ನಾಲ್ಕನೇ ಲಾಭ. ಸೇವಿಂಗ್ ಮಾಡು ಅಂತಾ ಉಪದೇಶ ಹೇಳೋರು ಇರೋದಿಲ್ಲ. ನಿಮಗಿಷ್ಟವಾದಷ್ಟು ಖರ್ಚು ಮಾಡಬಹುದು. ನಿಮಗೆ ಅನುಕೂಲವಾದಷ್ಟು ಹಣವನ್ನು ನೀವು ಸೇವಿಂಗ್ ಮಾಡಬಹುದು.

ನಿಮ್ಮ ವೃತ್ತಿ ಜೀವನದ ಜೊತೆಗೆ ಬೇರೆ ಒಳ್ಳೆ ಹವ್ಯಾಸಗಳಿಗೆ ನೀವು ಸಮಯ ನೀಡಬಹುದು. ಗರ್ಲ್ ಫ್ರೆಂಡ್ ಇದ್ದಲ್ಲಿ ಆಕೆಗೆ ಪ್ರತ್ಯೇಕ ಸಮಯ ನೀಡಬೇಕು. ವೃತ್ತಿ, ಹವ್ಯಾಸದ ಜೊತೆ ಆಕೆಗೆ ಸಮಯ ನೀಡೋದು ಕಷ್ಟವಾಗಿ ಒದ್ದಾಟಕ್ಕೆ ಬೀಳುವವರೂ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...