alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯಾದ ಮೊದಲ ಮಹಿಳಾ ಬಸ್ ಡ್ರೈವರ್ ಯಾರು ಗೊತ್ತಾ?

vasanthakumariಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿ ಆರಿಸಿಕೊಂಡಿದ್ದ ತಮಿಳುನಾಡಿನ ವಸಂತಕುಮಾರಿ 1993 ರಿಂದ ಬಸ್ ಚಾಲನೆ ಆರಂಭಿಸಿದ್ದು, ಆ ಮೂಲಕ ಏಷ್ಯಾದ ಮೊದಲ ಮಹಿಳಾ ಬಸ್ ಡ್ರೈವರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಸಂತಕುಮಾರಿ ಇನ್ನೂ ಮಗುವಾಗಿದ್ದಾಗಲೇ ಅವರ ತಾಯಿ ಸಾವನ್ನಪ್ಪಿದ್ದರು. ಬಳಿಕ ತಂದೆ ಮತ್ತೊಂದು ವಿವಾಹವಾಗಿದ್ದು, ವಸಂತಕುಮಾರಿ ಸಂಬಂಧಿಯೊಬ್ಬರ ಮನೆಯಲ್ಲಿ ಬೆಳೆದಿದ್ದರು. ಬಾಲ್ಯದಿಂದಲೇ ಚಾಲನೆ ಕುರಿತು ಆಸಕ್ತಿ ಹೊಂದಿದ್ದ ಅವರಿಗೆ 19 ವರ್ಷವಿದ್ದಾಗಲೇ ಮದುವೆ ಮಾಡಿಕೊಡಲಾಗಿತ್ತು.

ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿದ್ದ ಪತಿಯ ಆದಾಯ, ಜೀವನ ನಿರ್ವಹಣೆಗೆ ಸಾಕಾಗದ ಕಾರಣ, ವಸಂತಕುಮಾರಿ ತಮ್ಮ ನೆಚ್ಚಿನ ಚಾಲನಾ ವೃತ್ತಿ ಮಾಡಲು ಮುಂದಾದರು. ಆರಂಭದಲ್ಲಿ ಇದಕ್ಕೆ ಹಲವು ಅಡೆತಡೆಗಳು ಎದುರಾಗಿದ್ದು, ಕಡೆಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ವಸಂತಕುಮಾರಿಯವರ ಆಸಕ್ತಿಯನ್ನು ಗುರುತಿಸಿ ಅಧಿಕಾರಿಗಳಿಗೆ ಚಾಲಕ ಹುದ್ದೆಗೆ ವಸಂತ ಕುಮಾರಿಯವರನ್ನು ಪರಿಗಣಿಸುವಂತೆ ಆದೇಶಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...