alex Certify ‘ನವರಾತ್ರಿ’ ಸ್ಪೆಷಲ್: ಆಲೂಗಡ್ಡೆಯ ಹಲ್ವಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನವರಾತ್ರಿ’ ಸ್ಪೆಷಲ್: ಆಲೂಗಡ್ಡೆಯ ಹಲ್ವಾ

ಮಾಡುವ ವಿಧಾನ :  ಆಲೂಗಡ್ಡೆಯನ್ನ ಕುಕ್ಕರ್‌ನಲ್ಲಿ ಹಾಕಿ ಒಂದು ಕೂಗು ಕೂಗಿಸಿಕೊಳ್ಳಿ. ನಂತರ ಬೆಂದ ಆಲೂಗಡ್ಡೆಗಳನ್ನ ಸರಿಯಾಗಿ ನುರಿದು ಪಕ್ಕಕ್ಕಿಟ್ಟುಕೊಳ್ಳಿ.
ಈಗ ಬಾಣಲೆಗೆ ತುಪ್ಪವನ್ನು ಹಾಕಿಕೊಂಡು ಅದಕ್ಕೆ ಗೋಡಂಬಿ ದ್ರಾಕ್ಷಿಗಳೊಂದಿಗೆ ಈಗಾಗಲೇ ಮ್ಯಾಶ್‌ ಮಾಡಿ ಇಟ್ಟುಕೊಂಡಿದ್ದ ಆಲೂಗಡ್ಡೆಯನ್ನ ಹಾಕಿ, ಸಣ್ಣ ಉರಿಯಲ್ಲಿ ಫ್ರೈ ಮಾಡಲು ಆರಂಭಿಸಿ. ತುಪ್ಪದೊಂದಿಗೆ ಆಲೂಗಡ್ಡೆ ಫ್ರೈ ಆಗುತ್ತಿದ್ದಾಗ ಪರಿಮಳ ಹೊರಸೂಸುತ್ತದೆ ಆಗ ಏಲಕ್ಕಿಯನ್ನೂ ಹಾಕಿ.

ಪ್ರಸಿದ್ಧ ನೃತ್ಯ ಸಂಯೋಜಕರ ಬೆಡ್ ರೂಮ್ ವಿಡಿಯೋ ವೈರಲ್….!

ಬಾಣಲೆಯಲ್ಲಿದ್ದ ಆಲೂಗಡ್ಡೆ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಹೆಚ್ಚುವರಿ ತುಪ್ಪ ಅದರಿಂದ ಬೇರ್ಪಡುತ್ತದೆ. ಆಗ ಒಂದು ಬಾರಿ ಉರಿಯನ್ನ ಆರಿಸಿ ಜರಡಿಯ ಸಹಾಯದಿಂದ ಸಿದ್ಧಗೊಂಡ ಆಲೂಗಡ್ಡೆಯನ್ನ ಸೋಸಿ, ಹೆಚ್ಚುವರಿ ತುಪ್ಪವನ್ನ ತೆಗೆಯಬೇಕು.

ತುಪ್ಪ ಬೇರ್ಪಟ್ಟ ಆಲೂ ಮಿಶ್ರಣವನ್ನ ಮತ್ತೆ ಬಾಣಲೆಗೆ ಹಾಕಿ ಸಕ್ಕರೆಯನ್ನ ಸೇರಿಸಿ ಮತ್ತೆ ಹುರಿಯಿರಿ. ಇಡೀ ಸಕ್ಕರೆಯನ್ನ ಹಾಕುವುದಕ್ಕಿಂದ ಸಕ್ಕರೆ ಪುಡಿ ಮಾಡಿ ಹಾಕಿದರೆ ಬೇಗ ಕರಗುತ್ತದೆ. ಫ್ರೈ ಆದ ಆಲೂಗಡ್ಡೆಯೊಂದಿಗೆ ಸಕ್ಕರೆಯೂ ಕರಗಿ ಹದ ಬಂದಮೇಲೆ ಉರಿಯನ್ನ ಆರಿಸಿ. ಈಗ ರುಚಿ ರುಚಿ ಆಲೂಗಡ್ಡೆ ಹಲ್ವಾ ಸವಿಯಲು ಸಿದ್ಧ.

ಪ್ರಸಿದ್ಧ ನೃತ್ಯ ಸಂಯೋಜಕರ ಬೆಡ್ ರೂಮ್ ವಿಡಿಯೋ ವೈರಲ್….!

ದಿಢೀರ್‌ ಮಾಡಬಹುದಾದ ಈ ಆಲೂಗಡ್ಡೆ ಹಲ್ವಾವನ್ನ ಅನಿರೀಕ್ಷಿತ ಅತಿಥಿಗಳು ಮನೆಗೆ ಬಂದಾಗ ಮಾಡಬಹುದು. ಪಶ್ಚಿಮ ಬಂಗಾಳದಲ್ಲಿ ಈ ಹಲ್ವಾವನ್ನ ನವರಾತ್ರಿ ಹಬ್ಬದಂದು ಮಾಡಿ ದುರ್ಗೆಗೆ ನೈವೇದ್ಯ ಮಾಡುತ್ತಾರೆ. ದುರ್ಗೆ ನೈವೇದ್ಯಕ್ಕೆ ಆಲೂಗಡ್ಡೆಯ ಖಾದ್ಯ ಶ್ರೇಷ್ಠ ಎಂಬ ನಂಬಿಕೆ ಪಶ್ಚಿಮ ಬಂಗಾಳದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...