alex Certify ‘ಬ್ರಿಸ್ಕ್’ ವಾಕ್ ಮಾಡುವವರಿಗೆ ಇಲ್ಲಿದೆ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬ್ರಿಸ್ಕ್’ ವಾಕ್ ಮಾಡುವವರಿಗೆ ಇಲ್ಲಿದೆ ಸಿಹಿ ಸುದ್ದಿ

ವಾಕಿಂಗ್ ಅನ್ನೋದು ಒಂದು ಅತ್ಯುತ್ತಮ ವ್ಯಾಯಾಮ. ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಹಾಗೆಯೇ ದಿನವೂ ತಪ್ಪದೇ ವಾಕಿಂಗ್ ಮಾಡುವವರಿಗೆ ಇಲ್ಲಿದೆ ಸಿಹಿ ಸುದ್ದಿ.

ಹೌದು….ದಿನವೂ ಕನಿಷ್ಠ 40 ನಿಮಿಷ ವಾಕಿಂಗ್ ಮಾಡುವುದರಿಂದ ಮುಟ್ಟು ನಿಂತ ಮಹಿಳೆಯರಲ್ಲಿ ಹೃದಯಾಘಾತದ ಸಾಧ್ಯತೆ ಸುಮಾರು ಶೇ. 25 ರಷ್ಟು ಕ್ಷೀಣವಾಗುತ್ತೆ ಎನ್ನುತ್ತದೆ ಹೊಸ ಸಂಶೋಧನೆ.

ವಾರಕ್ಕೆರಡು ಸಲ ವಾಕಿಂಗ್ ಮಾಡುವವರಲ್ಲಿ ಹೃದಯಾಘಾತದ ರಿಸ್ಕ್ ಶೇ.20-25 ರಷ್ಟಿರುತ್ತೆ. ಆದರೆ 40 ನಿಮಿಷಗಳ ಕಾಲ ಬರೀ ವಾಕಿಗ್ ಮಾಡುವುದಕ್ಕಿಂತ ಬ್ರಿಸ್ಕ್ ವಾಕ್ ಅಥವಾ ವೇಗವಾಗಿ ನಡೆದರೆ ಈ ಪ್ರಮಾಣ ಶೇ.26 ರಿಂದ ಶೇ.38 ರಷ್ಟು ಕಡಿಮೆಯಾಗಲಿದೆ ಎಂದು ತಿಳಿದುಬಂದಿದೆ.

ಅಮೆರಿಕದ ಕಾರ್ಡಿಯೋಲಜಿ ಕಾಲೇಜಿನಲ್ಲಿ ಸುಮಾರು 89,000 ಮಹಿಳೆಯರನ್ನು ಸುಮಾರು 10 ವರ್ಷಗಳ ಕಾಲ ಅವರು ಮಾಡುವ ವಾಕಿಂಗ್ ನ ವೇಗ, ಕಾಲಾವಧಿ ಮುಂತಾದವುಗಳನ್ನು ಗಮನದಲ್ಲಿಸಿಕೊಂಡು ಅಧ್ಯಯನ ನಡೆಸಲಾಗಿದೆ.

ಬ್ರಿಸ್ಕ್ ವಾಕಿಂಗ್ ಅನ್ನೋದು ಬೇರೆ ಬೇರೆ ರೀತಿಯ ವ್ಯಾಯಾಮಕ್ಕೆ ಸಮ. ಮಧ್ಯವಯಸ್ಸು ದಾಟಿದ ಮೇಲೆ ಹೃದಯಾಘಾತದ ಸಂಭವನೀಯತೆ ಹೆಚ್ಚು ಆದ್ದರಿಂದ ಸುಮ್ಮನೇ ವಾಕಿಂಗ್ ಮಾಡುವ ಬದಲು ಬಿರುಸಾಗಿ ವಾಕಿಂಗ್ ಮಾಡೋದು ಎಲ್ಲರಿಗೂ ಉತ್ತಮ ಎನ್ನುವುದು ಸಂಶೋಧಕರ ಅಭಿಪ್ರಾಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...