alex Certify ಮಹಿಳೆಯರೆ ನಿಮ್ಮ ಈ ಸಮಸ್ಯೆಗೆ ಹೇಳಿ ‘ಗುಡ್ ಬೈ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರೆ ನಿಮ್ಮ ಈ ಸಮಸ್ಯೆಗೆ ಹೇಳಿ ‘ಗುಡ್ ಬೈ’

ಮುಟ್ಟಿನ ನೋವು ಕೆಲವು ಮಹಿಳೆಯರನ್ನು ಅತ್ಯಂತ ಭೀತಿಗೊಳಪಡಿಸುತ್ತದೆ. ಕೆಲವರು ಈ ಸಮಯದಲ್ಲಿ ಸಾಮಾನ್ಯ ದಿನಗಳಲ್ಲಿರುವಂತೆಯೇ ದಿನದೂಡುತ್ತಾರೆ ಆದರೆ ಇನ್ನು ಕೆಲವರಲ್ಲಿ ತೀವ್ರವಾದ ಕಿಬ್ಬೊಟ್ಟೆ ನೋವು, ಸೆಳೆತ, ಕೆಳ ಬೆನ್ನು ನೋವು, ಆಯಾಸ ಮತ್ತು ವಾಕರಿಕೆ ಹೀಗೆ ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ.

ಈ ಸಮಯದಲ್ಲಿ ಅಂತಹ ನೋವಿನಿಂದ ಮುಕ್ತಿ ಪಡೆಯಲು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮ ಶಾಲೆ ಹಾಗು ಉದ್ಯೋಗಕ್ಕೆ ರಜೆ ತೆಗೆದುಕೊಂಡಿರುವುದೂ ಇದೆ.

ಈ ಸಮಸ್ಯೆಗೆ ಮನೆಯಲ್ಲಿಯೇ ನಾವು ಸೇವಿಸುವ ಆಹಾರದಿಂದ ತೊಂದರೆಯನ್ನು ಶಮನಮಾಡಿಕೊಳ್ಳಬಹುದು.

ಒಮೆಗಾ 3 : ಇದು ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಾಗುವ ಅಸ್ವಸ್ಥತೆಯನ್ನು ಸರಾಗಗೊಳಿಸಿ ದೇಹವನ್ನು ಉತ್ತೇಜಿಸಲು ಸಹಕರಿಸುತ್ತದೆ. ಆದ್ದರಿಂದ ಋತುಚಕ್ರದ ಸಮಯದಲ್ಲಿ ಮೀನು , ಮೊಟ್ಟೆ, ಸೊಯಾಬೀನ್ಸ್, ವಾಲ್ ನಟ್ಸ್, ಅಗಸೆಬೀಜಗಳು ಇವುಗಳನ್ನು ದೈನಂದಿನ ಆಹಾರ ಕ್ರಮಗಳಲ್ಲಿ ಉಪಯೋಗಿಸಬೇಕು.

ಶುಂಠಿ : ಶುಂಠಿಯ ಚಹಾವನ್ನು ದಿನದಲ್ಲಿ ಒಮ್ಮೆ ಸಿಪ್ ಮಾಡಿ ನೋಡಿ, ಮುಟ್ಟಿನ ನೋವನ್ನು ಕಡಿಮೆಗೊಳಿಸಲು ಇದು ಸಹಾಯ ಮಾಡುತ್ತದೆ.

ಜೀರಿಗೆ : ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಬೆರಸಿ, ಚೆನ್ನಾಗಿ ಕುದಿಸಿ, ನಂತರ ಶೋದಿಸಿ ಆ ನೀರನ್ನು ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...