alex Certify ಕುರ್ಚಿಯಲ್ಲಿ ಕುಳಿತೇ ಹೀಗೆ ‘ಕೊಬ್ಬು’ ಕರಗಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುರ್ಚಿಯಲ್ಲಿ ಕುಳಿತೇ ಹೀಗೆ ‘ಕೊಬ್ಬು’ ಕರಗಿಸಿಕೊಳ್ಳಿ

ನಾವಂದುಕೊಂಡಂತೆ ಕುರ್ಚಿಯಲ್ಲಿ ಕುಳಿತರೆ ಕೊಬ್ಬು ಹೆಚ್ಚಾಗುತ್ತದೆ. ಆದರೆ ಅದೇ ಕುರ್ಚಿಯಲ್ಲಿ ಕುಳಿತುಕೊಂಡು ಕೊಬ್ಬು ಕರಗಿಸಬಹುದು ಎಂದರೆ ನಂಬುತ್ತಿರಾ, ಹೌದು ಕುಳಿತುಕೊಂಡೇ ಕೆಲವು ಸರಳ ವ್ಯಾಯಾಮ ಮಾಡಿದಲ್ಲಿ ಕೊಬ್ಬನ್ನು ಕರಗಿಸಬಹುದಾಗಿದೆ.

ಕೊಬ್ಬು ಕರಗಿಸಲು ಬೆವರಿಳಿಸಲು ನೀವು ಜಿಮ್ ಗೆ ಅಥವಾ ಮೈದಾನಕ್ಕೆ ಹೋಗಿ ಬೆವರಿಳಿಸಬೇಕು. ಆದರೆ ಇಲ್ಲಿ ಕುರ್ಚಿ ನಿಮಗೆ ನೆರವಾಗುತ್ತದೆ. ಸೀಟೆಡ್ ಜಾಕ್ಸ್ ವಿಧಾನದಲ್ಲಿ ಎರಡು ಕಾಲುಗಳನ್ನು ಒಟ್ಟಿಗೆ ಇಟ್ಟುಕೊಂಡು ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಹೆಬ್ಬೆರಳುಗಳು ನೇರವಾಗಿರಬೇಕು. ನಂತರ ಮೊಣಕೈ ಬಾಗಿಸಿ ಕೈಗಳನ್ನು ಚಾಚಿರಿ. ಕಾಲು ಹಿಮ್ಮಡಿ ಮಾತ್ರ ನೆಲವನ್ನು ಮುಟ್ಟುವ ರೀತಿಯಲ್ಲಿ ಅಗಲ ಮಾಡಿರಿ. ಕೈಗಳನ್ನು ಜೋಡಿಸಿಕೊಂಡು ತಲೆಯ ಮೇಲೆ ತನ್ನಿರಿ. ಪುನಃ ಮೊದಲಿನ ಸ್ಥಿತಿಗೆ ಬನ್ನಿರಿ. ಹೀಗೆ ಪುನರಾವರ್ತನೆ ಮಾಡಿರಿ.

ಸ್ಕೇಟರ್ ಸ್ವಿಟ್ಜ್ ವಿಧಾನದಲ್ಲಿ ಕುರ್ಚಿಯ ಮುಂಭಾಗದಲ್ಲಿ ಕುಳಿತುಕೊಂಡು ಬಲ ಮತ್ತು ಎಡಭಾಗದ ಮೊಣಕಾಲನ್ನು ಬಗ್ಗಿಸಿ ವಿರುದ್ಧ ದಿಕ್ಕಿಗೆ ಮಾಡಿ. ಕೈಗಳನ್ನು ಮುಂದುಗಡೆ ಚಾಚಿ ಎಡಗೈನಿಂದ ಬಲಗಾಲಿನ ಪಾದದ ಕೆಳಭಾಗವನ್ನು ಮುಟ್ಟಲು ಪ್ರಯತ್ನಿಸಿರಿ, ಬಳಿಕ ಸಾಮಾನ್ಯ ಸ್ಥಿತಿಗೆ ಬಂದು ಬಲಗೈನಿಂದ ಎಡಗಾಲಿನ ಪಾದದ ಕೆಳಭಾಗವನ್ನು ಮುಟ್ಟಿರಿ, ಹೀಗೆ ಮಾಡುವುದರಿಂದ ದೇಹ ನಿರಾಳವಾಗುತ್ತದೆ.

ಮತ್ತೊಂದು ವಿಧಾನವೆಂದರೆ ಚೇರ್ ರನ್ನಿಂಗ್ ವಿಧಾನ. ಇದರಲ್ಲಿ ನೇರವಾಗಿ ಕುಳಿತುಕೊಂಡು ಕಾಲುಗಳನ್ನು ಚಾಚಬೇಕು. ಬೆರಳುಗಳನ್ನು ನೇರವಾಗಿಟ್ಟುಕೊಂಡು ಭುಜವನ್ನು ಬದಿಗೆ ಸರಿಸಿಕೊಳ್ಳಿ. ಹೊಟ್ಟೆಯ ಸ್ನಾಯು ಬಿಗಿ ಮಾಡಿಕೊಂಡು ಭುಜವನ್ನು ಅಗಲವಾಗಿ ಚಾಚುತ್ತಾ ಕುರ್ಚಿಯ ಹಿಂಭಾಗಕ್ಕೆ ಮುಟ್ಟುವಂತೆ ನೋಡಿಕೊಳ್ಳಿ. ಬಲಗಾಲನ್ನು ಎದೆಯತ್ತ ಬಗ್ಗಿಸಿಕೊಂಡು ಎಡಭುಜವು ಮೊಣಕಾಲಿನವರೆಗೆ ಬಾಗುವಂತೆ ಮಾಡಿರಿ. ಇದೇ ರೀತಿ ವ್ಯಾಯಾಮವನ್ನು ಎಡಗಾಲಿಗೂ ಮಾಡುವ ಮೂಲಕ ದೇಹದಲ್ಲಿರುವ ಕೊಬ್ಬನ್ನು ಇಳಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...