alex Certify ಹಲಸಿನ ಹಣ್ಣಿನ ಬೀಜ ತಿಂದರೆ ಎಷ್ಟೆಲ್ಲಾ ಆರೋಗ್ಯ ಲಾಭವಿದೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲಸಿನ ಹಣ್ಣಿನ ಬೀಜ ತಿಂದರೆ ಎಷ್ಟೆಲ್ಲಾ ಆರೋಗ್ಯ ಲಾಭವಿದೆ ಗೊತ್ತಾ…..?

ಹಲಸಿನಹಣ್ಣು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅದರ ರುಚಿಯೇ ಹಾಗೆ ಅದು ಅಲ್ಲದೇ ಹಲಸಿನಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಬಿ, ಪೋಟ್ಯಾಷಿಯಂ ಇರುತ್ತದೆ. ಅದೇ ಹಲಸಿನ ಹಣ್ಣಿನ ಬೀಜದಲ್ಲೂ ಸಾಕಷ್ಟು ಆರೋಗ್ಯಕರ ಅಂಶವಿದೆ.

ಹಲಸಿನ ಹಣ್ಣಿನ ಬೀಜವನ್ನು ಸೇವಿಸುವುದರಿಂದ ನೀವು ತಿಂದ ಆಹಾರವನ್ನು ಅದು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಜತೆಗೆ ಕಣ್ಣು, ಚರ್ಮದ, ಕೂದಲಿನ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.

ಹಲಸಿನಹಣ್ಣಿನ ಬೀಜದಲ್ಲಿ ಝಿಂಕ್, ಕಬ್ಬಿಣದಂಶ, ಕ್ಯಾಲ್ಸಿಯಂ, ಕಾಪರ್, ಪೋಟ್ಯಾಷಿಯಂ, ಮೆಗ್ನೆಷಿಯಂ ಕೂಡ ಇದೆ. ಹಾಗೇ ಇದು ಜೀರ್ಣಕ್ರೀಯೆಯನ್ನು ಕೂಡ ಸರಾಗವಾಗಿಸುತ್ತದೆ. ಹಲಸಿನಹಣ್ಣಿನ ಬೀಜದ ಸೇವನೆಯಿಂದ ಸಿಗುವ ಪ್ರಯೋಜನಗಳೇನು ಎಂಬದನ್ನು ತಿಳಿಯೋಣ.

*ನಿಮ್ಮ ಮುಖದಲ್ಲಿ ನೆರಿಗೆಗಳು ಕಾಣಿಸಿಕೊಂಡಿದ್ದರೆ ಹಲಸಿನ ಹಣ್ಣಿನ ಬೀಜವನ್ನು ಸ್ವಲ್ಪ ಹಾಲು ಹಾಗೂ 1 ಟೇಬಲ್ ಸ್ಪೂನ್ ಜೇನಿನಲ್ಲಿ ನೆನೆಸಿಡಿ. ನಂತರ ಇದನ್ನು ನಯವಾಗಿ ರುಬ್ಬಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಪೂರ್ತಿ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ ಇದರಿಂದ ಮುಖದಲ್ಲಿನ ನೆರಿಗೆಗಳು ಮಾಯವಾಗುತ್ತದೆ.

* ಮಾನಸಿಕ ಒತ್ತಡವಿರುವವರು ಹಲಸಿನ ಹಣ್ಣಿನ ಬೀಜವನ್ನು ಸೇವಿಸಿದರೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿನ ಹೇರಳವಾದ ಪ್ರೋಟಿನ್ ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ.

*ಹಲಸಿನ ಹಣ್ಣಿನ ಬೀಜವನ್ನು ನಿಯಮಿತವಾಗಿ ಸೇವಿಸುವುದರಿಂದ ಅನಿಮಿಯಾವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಕಬ್ಬಿಣದಂಶ ಹೇರಳವಾಗಿರುತ್ತದೆ. ಇದು ನಿಮ್ಮ ಮೆದುಳು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಹೆಚ್ಚು ಸಹಾಯಕಾರಿ.

*ಹಲಸಿನಹಣ್ಣಿನ ಬೀಜದಲ್ಲಿರುವ ವಿಟಮಿನ್ ಎ ನಿಮ್ಮ ಕಣ್ಣಿನ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಇರುಳುಗಣ್ಣಿನ ಸಮಸ್ಯೆಯನ್ನು ನಿವಾರಿಸುತ್ತದೆ. ಆರೋಗ್ಯಕರವಾದ ಕೂದಲನ್ನು ಹೊಂದಲು ಇದು ಸಹಾಯ ಮಾಡುತ್ತದೆ.

*ಹಲಸಿನ ಹಣ್ಣಿನ ಬೀಜವನ್ನು ಪುರುಷರು ಹುರಿದು ತಿನ್ನುವುದರಿಂದ ಲೈಂಗಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಪುರುಷರ ವೃಷಣದಲ್ಲಿ ರಕ್ತ ಪರಿಚಲನೆಯನ್ನು ಸರಾಗವಾಗಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...