alex Certify ವಾಹನ ಸವಾರರಿಗೆ ಗುಡ್​ ನ್ಯೂಸ್​: 15 ದಿನದ ಬಳಿಕ ಇಳಿಕೆಯಾಯ್ತು ಪೆಟ್ರೋಲ್ – ಡೀಸೆಲ್​ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೆ ಗುಡ್​ ನ್ಯೂಸ್​: 15 ದಿನದ ಬಳಿಕ ಇಳಿಕೆಯಾಯ್ತು ಪೆಟ್ರೋಲ್ – ಡೀಸೆಲ್​ ದರ

ಕಳೆದ 15 ದಿನಗಳಿಂದ ಸ್ಥಿರ ದರವನ್ನ ಕಾಯ್ದುಕೊಂಡಿದ್ದ ಪೆಟ್ರೋಲ್​ ಹಾಗೂ ಡೀಸೆಲ್​ ದರ ಇಂದು ಮತ್ತಷ್ಟು ಇಳಿಕೆಯಾಗಿದ್ದು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಇಂದು ದೆಹಲಿಯಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ ದರ 90.40 ರೂಪಾಯಿ ಆಗಿದೆ. ನಿನ್ನೆಗೆ ಹೋಲಿಸಿದ್ರೆ ಪೆಟ್ರೋಲ್​ ದರದಲ್ಲಿ 16 ಪೈಸೆ ಇಳಿಕೆಯಾಗಿದೆ. ಅದೇ ರೀತಿ ಡಿಸೇಲ್​ ದರ ಪ್ರತಿ ಲೀಟರ್​ಗೆ 80.73 ರೂಪಾಯಿ ಆಗಿದೆ. ಈ ಮೂಲಕ 14 ಪೈಸೆ ಇಳಿಕೆಯಾಗಿದೆ.

ಕೊಲ್ಕತ್ತಾದಲ್ಲಿ ಪ್ರತಿ ಲೀಟರ್​ ದರ 90.77 ರೂಪಾಯಿಯಿಂದ 90.62 ರೂಪಾಯಿಗೆ ಇಳಿಕೆ ಕಂಡಿದೆ. ಅದೇ ರೀತಿ ಡೀಸೆಲ್​ ದರ 83.75 ರೂಪಾಯಿಯಿಂದ 83.61 ರೂಪಾಯಿಗೆ ಇಳಿಕೆಯಾಗಿದೆ.

ಅದೇ ರೀತಿ ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 92.58 ರೂಪಾಯಿಯಿಂದ 92.43 ರೂಪಾಯಿ ಆಗಿದೆ. ಡೀಸೆಲ್​ ದರ 85.88 ರೂಪಾಯಿಯಿಂದ 85.75 ರೂಪಾಯಿಗೆ ಇಳಿಕೆ ಕಂಡಿದೆ.‌

ಮುಂಬೈನಲ್ಲಿ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ 96.98 ರೂಪಾಯಿಯಿಂದ 96.83 ರೂಪಾಯಿ ಆಗಿದೆ. ಡೀಸೆಲ್​ ದರ 87.96 ರೂಪಾಯಿಯಿಂದ 87.81 ರೂಪಾಯಿಗೆ ಇಳಿಕೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...