alex Certify ʼಸಿಲಿಂಡರ್ʼ ಅವಧಿಯನ್ನು ಪತ್ತೆ ಹಚ್ಚುವುದು ಹೇಗೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಿಲಿಂಡರ್ʼ ಅವಧಿಯನ್ನು ಪತ್ತೆ ಹಚ್ಚುವುದು ಹೇಗೆ…?

ನೀವು ಬಳಸುತ್ತಿರುವ ಅಡುಗೆ ಅನಿಲ ಬಳಕೆಗೆ ಯೋಗ್ಯವಾಗಿದೆಯಾ? ಇಲ್ವಾ? ಈ ವಿಷ್ಯ ನಿಮಗೆ ಗೊತ್ತಾ.

ಇದನ್ನು ಸುಲಭವಾಗಿ ಕಂಡು ಹಿಡಿಯಬಹುದು. ಹೇಗಂತ ನಾವು ಹೇಳ್ತೇವೆ.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅಡುಗೆ ಅನಿಲವನ್ನು ಬಳಸ್ತಾರೆ. ಆದ್ರೆ ಮುನ್ನೆಚ್ಚರಿಕೆ ಬಗ್ಗೆ ಯಾರೂ ಸರಿಯಾಗಿ ತಿಳಿದಿರುವುದಿಲ್ಲ. ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆಗೂ ಸಮಯದ ಮಿತಿಯಿದೆ. ಒಂದು ನಿರ್ಧಿಷ್ಟ ಅವಧಿ ನಂತ್ರ ಅದು ಬಳಕೆಗೆ ಬರುವುದಿಲ್ಲ. ಆದ್ರೆ ಸಿಲಿಂಡರ್ ಅವಧಿ ಮುಗಿದಿದೆಯಾ? ಇಲ್ವಾ? ಎಂಬುದನ್ನು ತಿಳಿಯದೇ ನಾವು ಸಿಲಿಂಡರ್ ಬಳಕೆ ಮಾಡ್ತೇವೆ. ಇದ್ರಿಂದ ಅನಾಹುತಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಯಾವುದೇ ಹೊಸ ಸಿಲಿಂಡರನ್ನು 10-15 ವರ್ಷಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಹಳೆ ಸಿಲಿಂಡರ್ ಆದಲ್ಲಿ 5 ವರ್ಷಕ್ಕೊಮ್ಮೆ ಪರೀಕ್ಷೆ ಮಾಡಬೇಕಾಗುತ್ತದೆ. ಸಿಲಿಂಡರ್ ಸ್ಥಾವರದಲ್ಲಿ ಇದ್ರ ಪರೀಕ್ಷೆ ನಡೆಯುತ್ತದೆ. ಇದಕ್ಕಿಂತ ಮುನ್ನ ನಮ್ಮ ಮನೆಗೆ ಬಂದ ಸಿಲಿಂಡರ್ ಅವಧಿ ಮುಗಿದಿದೆಯಾ ಎಂಬುದನ್ನು ಮೊದಲು ಪರೀಕ್ಷೆ ಮಾಡಬೇಕು.

ಸಿಲಿಂಡರ್ ಮೇಲ್ಭಾಗದಲ್ಲಿ ಕೋಡ್ ಒಂದನ್ನು ನೀಡಿರಲಾಗಿರುತ್ತದೆ. ಇದು ಎ, ಬಿ, ಸಿ, ಡಿ ಯಿಂದ ಆರಂಭವಾಗುತ್ತದೆ. ಅದ್ರ ಮುಂದೆ 6, 5, 7 ಹೀಗೆ ಸಂಖ್ಯೆಯಿರುತ್ತದೆ. ಎ ಅಂದ್ರೆ ಮಾರ್ಚ್, ಬಿ ಅಂದ್ರೆ ಜೂನ್, ಸಿ ಅಂದ್ರೆ ಸೆಪ್ಟೆಂಬರ್, ಡಿ ಎಂದ್ರೆ ಡಿಸೆಂಬರ್ ಸೆಮಿಸ್ಟರ್ ಎಂದರ್ಥ.

ಉದಾಹರಣೆಗೆ ಡಿ-16 ಎಂದಿದ್ದರೆ ಡಿಸೆಂಬರ್ 2016ರಲ್ಲಿ ಇದ್ರ ಪರೀಕ್ಷೆ ನಡೆಸಬೇಕೆಂದು ಅರ್ಥ. ಹಾಗಾಗಿ ನಿಮ್ಮ ಮನೆಯ ಸಿಲಿಂಡರ್ ಪರೀಕ್ಷೆ ನಡೆದು ಎಷ್ಟು ದಿನವಾಯ್ತು. ಯಾವಾಗ ಮುಂದಿನ ಪರೀಕ್ಷೆ ಎಂಬುದನ್ನು ನೋಡಿ ತಿಳಿದುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...