alex Certify ಈ ಬ್ಯುಸಿನೆಸ್ ಶುರು ಮಾಡಿ ಕೈತುಂಬ ಗಳಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬ್ಯುಸಿನೆಸ್ ಶುರು ಮಾಡಿ ಕೈತುಂಬ ಗಳಿಸಿ

ಊಟಕ್ಕೆ ಉಪ್ಪಿನಕಾಯಿ ಬೇಕು. ಪ್ರತಿಯೊಬ್ಬರೂ ಊಟದ ಜೊತೆ ಉಪ್ಪಿನಕಾಯಿ ಇಷ್ಟಪಡ್ತಾರೆ. ಉಪ್ಪಿನಕಾಯಿ ತಿನ್ನೋಕೆ ಯಾವುದೇ ಋತು ಆಗ್ಬೇಕಿಲ್ಲ. ಹೊಸ ಬ್ಯುಸಿನೆಸ್ ಆಲೋಚನೆಯಲ್ಲಿದ್ದರೆ ನೀವು ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಬಹುದು.

ಇದನ್ನು ನೀವು ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಶುರು ಮಾಡಬಹುದು. ಉಪ್ಪಿನಕಾಯಿ ಬ್ಯುಸಿನೆಸ್ ಗೆ 10 ಸಾವಿರ ರೂಪಾಯಿ ಹೂಡಿಕೆ ಮಾಡಿದ್ರೆ ನೀವು 20-30 ಸಾವಿರ ರೂಪಾಯಿ ಗಳಿಸಬಹುದು. ಉಪ್ಪಿನಕಾಯಿ ರುಚಿ, ಪ್ಯಾಕಿಂಗ್, ಮಾರಾಟದ ಸ್ಥಳ ಹಾಗೂ ಬೇಡಿಕೆ ನಿಮ್ಮ ಆದಾಯವನ್ನು ಹೆಚ್ಚಿಸಬಹುದು. ಆನ್ಲೈನ್ ನಲ್ಲಿಯೂ ನೀವು ಉಪ್ಪಿನಕಾಯಿ ಮಾರಾಟ ಮಾಡಬಹುದು.

ಉಪ್ಪಿನಕಾಯಿ ತಯಾರಿಸುವ ವ್ಯವಹಾರಕ್ಕೆ ಪರವಾನಗಿ ಅಗತ್ಯವಿದೆ. ವ್ಯವಹಾರವನ್ನು ಪ್ರಾರಂಭಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕು. ಇದಕ್ಕಾಗಿ ಆನ್‌ಲೈನ್ ಫಾರ್ಮ್ ಭರ್ತಿ ಮಾಡಬಹುದು. 900 ಚದರ ಅಡಿ ವಿಸ್ತೀರ್ಣದ ಜಾಗವಿರಬೇಕು. ಒಣಗಿಸಲು ಹಾಗೂ ಪ್ಯಾಕಿಂಗ್ ಗೆ ಜಾಗಬೇಕು. ಉಪ್ಪಿನಕಾಯಿ ಉದ್ಯಮದಲ್ಲಿ ಸ್ವಚ್ಛತೆ ಮುಖ್ಯ. ಉಪ್ಪಿನಕಾಯಿ ಹಾಳಾಗದಂತೆ ನೋಡಿಕೊಳ್ಳಲು ಸ್ವಚ್ಛತೆ ಮಹತ್ವ ಪಡೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...