alex Certify ಬೆರಗಾಗಿಸುತ್ತೆ ಅರ್ಧಕ್ಕೆ ಕಾಲೇಜು ಬಿಟ್ಟ ಯುವಕನ ಯಶಸ್ಸಿನ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಅರ್ಧಕ್ಕೆ ಕಾಲೇಜು ಬಿಟ್ಟ ಯುವಕನ ಯಶಸ್ಸಿನ ಕಥೆ

ಕೋಟ್ಯಾಧಿಪತಿ ಆಗುವ ಕನಸು ನನಸಾಗೋದು ಸಾಮಾನ್ಯವಾಗಿ 35 ವರ್ಷಗಳ ನಂತರ. ಯಾಕಂದ್ರೆ ಶಿಕ್ಷಣ ಮುಗಿಸಿ, ಲೈಫಲ್ಲಿ ಸೆಟಲ್ ಆಗಿ ಹಣ ಸಂಪಾದನೆ ಜೊತೆಗೆ ಉಳಿತಾಯ ಮಾಡುವಷ್ಟರಲ್ಲಿ ಮೂವತ್ತೈದು ವರ್ಷ ಆಗಿಯೇ ಬಿಟ್ಟಿರುತ್ತದೆ.

ಆದ್ರೆ ಜಾನ್ ಕೊಲ್ಲಿಸನ್ ಮಾತ್ರ 27ರ ಹರೆಯದಲ್ಲೇ ಕೋಟ್ಯಾಧಿಪತಿಯಾಗಿದ್ದರು. ವಿಶ್ವದ ಅತಿ ಕಿರಿಯ ಸ್ವ-ನಿರ್ಮಿಯ ಬಿಲಿಯನೇರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಆದ್ರೆ ಜಾನ್ ಪದವೀಧರನಲ್ಲ. ಅರ್ಧಕ್ಕೇ ಕಾಲೇಜು ಬಿಟ್ಟ ಜಾನ್, ಸಹೋದರ ಪ್ಯಾಟ್ರಿಕ್ ಜೊತೆಗೂಡಿ 2011ರಲ್ಲಿ ಸ್ಟೈಪ್ ಅನ್ನೋ ಸಾಫ್ಟ್ ವೇರ್ ಕಂಪನಿ ಆರಂಭಿಸಿದ್ರು.

ಆಗ ಜಾನ್ ಗೆ ಕೇವಲ 21 ವರ್ಷ ವಯಸ್ಸು. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಈ ಕಂಪನಿ ಸಾಫ್ಟ್ ವೇರ್ ಸಿಸ್ಟಮ್ ಗಳನ್ನು ಮಾರಾಟ ಮಾಡುತ್ತದೆ. ಪುಟ್ಟ ಗ್ರಾಮದಲ್ಲಿ ಜನಿಸಿದ್ದ ಜಾನ್ ಹಾಗೂ ಪ್ಯಾಟ್ರಿಕ್ ಗೆ ಚಿಕ್ಕ ವಯಸ್ಸಿನಿಂದ್ಲೂ ಕಂಪ್ಯೂಟರ್ ಬಗ್ಗೆ ಇನ್ನಿಲ್ಲದ ಆಸಕ್ತಿ ಇತ್ತು. ಅದೇ ಅವರನ್ನು ಯಶಸ್ವಿ ಉದ್ಯಮಿಗಳನ್ನಾಗಿ, ಬಿಲಿಯನೇರ್ ಗಳನ್ನಾಗಿ ರೂಪಿಸಿದೆ. ಸ್ಟ್ರೈಪ್ ಕಂಪನಿ ಅತ್ಯಲ್ಪ ಅವಧಿಯಲ್ಲೇ ಯಶಸ್ಸು ಗಳಿಸಿದೆ.

ಎಂಐಟಿಯಲ್ಲಿ ಓದುತ್ತಿದ್ದ ಜಾನ್ ಧೈರ್ಯ ಮಾಡಿ ಕಾಲೇಜು ಶಿಕ್ಷಣವನ್ನ ಅರ್ಧಕ್ಕೇ ಮೊಟಕುಗೊಳಿಸಿದ್ರು. ಮುಂದೇನು ಮಾಡಬೇಕು ಅನ್ನೋ ಗುರಿ ಸ್ಪಷ್ಟವಾಗಿದ್ದಿದ್ದರಿಂದ ಮತ್ತೆ ಹಿಂದಿರುಗಿ ನೋಡಲಿಲ್ಲ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...