alex Certify ಬಳುಕುವ ಬಳ್ಳಿಯಂತಿರುವ ಪರಿಣಿತಿ ಚೋಪ್ರಾ ಬ್ಯೂಟಿ ಸೀಕ್ರೆಟ್ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳುಕುವ ಬಳ್ಳಿಯಂತಿರುವ ಪರಿಣಿತಿ ಚೋಪ್ರಾ ಬ್ಯೂಟಿ ಸೀಕ್ರೆಟ್ ಬಹಿರಂಗ

ಮೊದಲಿಗೆ ಗುಂಡ ಗುಂಡಗೆ ಬಬ್ಲಿಯಾಗಿದ್ದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಬಳಿಕ ಬಳುಕುವ ಬಳ್ಳಿಯಂತಾಗಿದ್ದರು. ತನ್ನ ಅದ್ಭುತ ನಟನೆಯಿಂದ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದ ಈ ಚೆಲುವೆ, ತೂಕ ಕಡಿಮೆ ಮಾಡಿಕೊಂಡಿದ್ದರು.

ತಾನು ದಪ್ಪಗಿದ್ದೆ ಅನ್ನೋದನ್ನು ಬಿಚ್ಚು ಮನಸ್ಸಿನಿಂದ ಒಪ್ಪಿಕೊಳ್ಳೋ ಪರಿಣಿತಿ, ತಮ್ಮ ವೇಯ್ಟ್ ಲಾಸ್ ಸೀಕ್ರೆಟ್ ಅನ್ನು ಕೂಡ ಹೊರಹಾಕಿದ್ದಾರೆ. ತೂಕ ಇಳಿಸಲು ಕೇವಲ ಆಹಾರದಲ್ಲಿ ಕಟ್ಟುನಿಟ್ಟು ಮಾತ್ರವಲ್ಲ, ಮನಸ್ಸು ಕೂಡ ಗಟ್ಟಿಯಾಗಿರ್ಬೇಕಂತೆ.

ಹೆಲ್ತಿ ಆಹಾರ ತಿಂದ್ರೂ ತಾನು ದಪ್ಪಗಾಗ್ತೇನೆ ಅನ್ನೋದು ಗೊತ್ತಾಗ್ತಿದ್ದಂತೆ, ತನಗೆ ಯಾವ ಆಹಾರ ಸೂಕ್ತ ಅನ್ನೋ ಬಗ್ಗೆ ಪರಿಣಿತಿ ಆಸ್ಟ್ರೇಲಿಯನ್ ಹೆಲ್ತ್ ಸೆಂಟರ್ ನಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ತುಂಬಾ ನೀರು ಕುಡಿಯುತ್ತಾರಂತೆ. ಮೊಟ್ಟೆಯ ಬಿಳಿ ಭಾಗ, ಸಕ್ಕರೆ ರಹಿತ ಹಾಲು, ಹಣ್ಣಿನ ಜ್ಯೂಸ್, ಸಲಾಡ್, ಬ್ರೌನ್ ರೈಸ್, ತರಕಾರಿಯನ್ನೇ ಹೆಚ್ಚಾಗಿ ತಿನ್ನುತ್ತಾರೆ. ಇನ್ನು ಪ್ರತಿದಿನ ತಪ್ಪದೇ ವರ್ಕೌಟ್ ಮಾಡ್ತಾರೆ.

ನೃತ್ಯ, ಯೋಗಾಸನ, ಈಜು ಸರ್ವೇಸಾಮಾನ್ಯ. ಈ ಬದಲಾವಣೆಗೆ ಪ್ರೇರಣೆಯಾಗಿದ್ದು ಕನ್ನಡಿ ಎನ್ನುತ್ತಾರೆ ಪರಿಣಿತಿ. ತೂಕ ಕಡಿಮೆ ಮಾಡಿಕೊಂಡಿರೋದ್ರಿಂದ ಅವರಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...