alex Certify ಅಲ್ಪ ಸಮಯದಲ್ಲೇ ಮುರಿದು ಬಿದ್ದಿತ್ತು ಈ ನಟ – ನಟಿಯರ ಮದುವೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲ್ಪ ಸಮಯದಲ್ಲೇ ಮುರಿದು ಬಿದ್ದಿತ್ತು ಈ ನಟ – ನಟಿಯರ ಮದುವೆ…!

Rekha was married to this famous person but gave his life by hanging from  her scarf | News Track Live, NewsTrack English 1

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅನ್ನೋ ಮಾತಿದೆ. ಆದ್ರೆ ಎಲ್ಲಾ ಮದುವೆಗಳೂ ಸ್ವರ್ಗಸದೃಶವಾಗಿರೋದಿಲ್ಲ. ಅತ್ಯಲ್ಪ ಸಮಯದಲ್ಲೇ ಮದುವೆ ಮುರಿದು ಬಿದ್ದಿರೋ ಎಷ್ಟೋ ಉದಾಹರಣೆಗಳಿವೆ. ಸೆಲೆಬ್ರಿಟಿಗಳಲ್ಲಂತೂ ಇದು ಸರ್ವೇ ಸಾಮಾನ್ಯ.

ರೇಖಾ : ನಟಿ ರೇಖಾಗೆ ಈಗ 66 ವರ್ಷ. ಚೆನ್ನೈನಲ್ಲಿ ಹುಟ್ಟಿ ಮುಂಬೈಗೆ ಬಂದು ಚಿತ್ರರಂಗದಲ್ಲಿ ನೆಲೆಯೂರಿದ ಖ್ಯಾತ ಅಭಿನೇತ್ರಿ ಈಕೆ. ಉದ್ಯಮಿ ಮುಕೇಶ್ ಅಗರ್ವಾಲ್ ರನ್ನು ರೇಖಾ ಮದುವೆಯಾಗಿದ್ದರು. ಆದ್ರೆ ಇವರ ದಾಂಪತ್ಯ ಕೇವಲ ಒಂದು ವರ್ಷಕ್ಕೇ ಅಂತ್ಯವಾಗಿತ್ತು.

ದಿವ್ಯಾ ಭಾರತಿ : ಬಾಲಿವುಡ್ ನ ಸಹಜ ಸುಂದರಿಯರಲ್ಲೊಬ್ಬಳಾಗಿದ್ದ ದಿವ್ಯಾ ಭಾರತಿ ಶಾಜಿದ್ ನಾಡಿಯಾವಾಲಾರನ್ನು ವರಿಸಿದ್ದರು. ಆದ್ರೆ ಕೇವಲ 11 ತಿಂಗಳುಗಳಲ್ಲೇ ಇವರ ದಾಂಪತ್ಯ ಮುರಿದು ಬಿದ್ದಿತ್ತು.

ಮನೀಶಾ ಕೊಯಿರಾಲ : ನೇಪಾಳದ ಚೆಲುವೆ ಮನೀಶಾ ಕೊಯಿರಾಲ, ಸಾಮ್ರಾಟ್ ದಹಾಲ್ ಜೊತೆ ಸಪ್ತಪದಿ ತುಳಿದಿದ್ದರು. ಆದ್ರೆ 2 ವರ್ಷ ಕಳೆಯುವಷ್ಟರಲ್ಲಿ ದಂಪತಿ ದೂರವಾಗಿದ್ದರು.

ಕರಣ್ ಸಿಂಗ್ ಗ್ರೋವರ್ : ನಟ ಕರಣ್ ಸಿಂಗ್ ಗ್ರೋವರ್ ಒಂದಲ್ಲ, ಎರಡಲ್ಲ ಮೂರು ಮದುವೆ ಮಾಡಿಕೊಂಡಿದ್ದಾರೆ. ಮೊದಲು ಕರಣ್, ಶ್ರದ್ಧಾ ನಿಗಮ್ ರನ್ನು ಮದುವೆಯಾಗಿದ್ದರು. ಆದ್ರೆ ಇವರ ದಾಂಪತ್ಯ 10 ತಿಂಗಳುಗಳಲ್ಲೇ ಅಂತ್ಯವಾಗಿತ್ತು.

ಪುಲ್ಕಿತ್ ಸಾಮ್ರಾಟ್ : ಇವರದ್ದು ಪ್ರೇಮ ವಿವಾಹ. ಪುಲ್ಕಿತ್ ಸಾಮ್ರಾಟ್ ಹಾಗೂ ಶ್ವೇತಾ ರೋಹಿರಾ ಪರಸ್ಪರ ಮೆಚ್ಚಿ ಮದುವೆಯಾಗಿದ್ರೂ, 12 ತಿಂಗಳುಗಳಲ್ಲೇ ದೂರವಾಗಿದ್ದಾರೆ.

ಮಲ್ಲಿಕಾ ಶೆರಾವತ್ : ಐಟಂ ಗರ್ಲ್ ಮಲ್ಲಿಕಾಗೆ ಮದುವೆ ಆಗಿದೆ ಅನ್ನೋದೇ ಎಷ್ಟೋ ಜನರಿಗೆ ತಿಳಿದಿಲ್ಲ. ಮಲ್ಲಿಕಾ, ಕರಣ್ ಸಿಂಗ್ ಗಿಲ್ ಜೊತೆಗೆ ಹಸೆಮಣೆ ಏರಿದ್ದರು. ಇವರ ದಾಂಪತ್ಯ ಕೂಡ ವರ್ಷ ಕಳೆಯುವಷ್ಟರಲ್ಲಿ ಅಂತ್ಯವಾಗಿತ್ತು.

ರಾಹುಲ್ ಮಹಾಜನ್ : ರಿಯಾಲಿಟಿ ಶೋ ಮೂಲಕ ಹೆಸರು ಮಾಡಿದ್ದ ರಾಹುಲ್ ಮಹಾಜನ್ ಕೂಡ ಸಾಲು ಸಾಲು ಮದುವೆಯಾಗಿದ್ದಾರೆ. ರಾಹುಲ್ ಮೊದಲು ಶ್ವೇತಾ ಸಿಂಗ್ ರನ್ನು ಮದುವೆಯಾಗಿದ್ದರು. ಆದ್ರೆ 15 ತಿಂಗಳುಗಳಲ್ಲೇ ರಾಹುಲ್ ಮತ್ತು ಶ್ವೇತಾ ದೂರವಾಗಿದ್ದರು.

ಕಿಶೋರ್ ಕುಮಾರ್ : ಗಾಯಕ ಕಿಶೋರ್ ಕುಮಾರ್ ಹಾಗೂ ಯೋಗಿತಾ ಬಾಲಿ ಅವರ ಮದುವೆ ಕೂಡ ಅತ್ಯಲ್ಪ ಕಾಲದಲ್ಲೇ ಅಂತ್ಯವಾಗಿತ್ತು. ಮದುವೆಯಾಗಿ ಎರಡು ವರ್ಷಗಳಲ್ಲೇ ಇವರ ದಾಂಪತ್ಯ ಮುರಿದು ಬಿದ್ದಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...