alex Certify ವಿದೇಶದಲ್ಲಿ ಬಂಗಲೆ ಹೊಂದಿರೋ ಬಾಲಿವುಡ್ ಸ್ಟಾರ್ಸ್ ಯಾರೆಲ್ಲಾ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಲ್ಲಿ ಬಂಗಲೆ ಹೊಂದಿರೋ ಬಾಲಿವುಡ್ ಸ್ಟಾರ್ಸ್ ಯಾರೆಲ್ಲಾ ಗೊತ್ತಾ…?

ಎಲ್ಲರಿಗೂ ಒಂದು ಸ್ವಂತ ಮನೆಯ ಕನಸು ಇದ್ದೇ ಇರುತ್ತೆ. ಆದ್ರೆ ಬಾಲಿವುಡ್ ಕಲಾವಿದರ ಆ ಆಸೆ ವಿದೇಶಗಳಿಗೂ ವ್ಯಾಪಿಸಿದೆ. ಅನೇಕ ಬಾಲಿವುಡ್ ಸೆಲೆಬ್ರಿಟೀಸ್ ವಿದೇಶದಲ್ಲೂ ಕನಸಿನ ಮನೆಯನ್ನ ಹೊಂದಿದ್ದಾರೆ.

ಕಿಂಗ್ ಖಾನ್ ಶಾರುಕ್ ಈ ವಿಚಾರದಲ್ಲಿ ತುಂಬಾನೇ ಅದೃಷ್ಟವಂತರು. ದುಬೈನ ಪಾಮ್ ಜುಮೈಹ್ ನಲ್ಲಿ ಶಾರುಕ್ ಖಾನ್ ಐಷಾರಾಮಿ ಬಂಗಲೆಯನ್ನ ಹೊಂದಿದ್ದಾರೆ. 17 ಕೋಟಿ 84 ಲಕ್ಷ ರುಪಾಯಿ ಬೆಲೆ ಬಾಳುವ ವಿಲ್ಲಾ ಕೂಡ ಶಾರುಕ್ ಹೆಸರಿನಲ್ಲಿದೆ. ಲಂಡನ್ ನಲ್ಲಿ ಐಷಾರಾಮಿ ಅಪಾರ್ಟ್ ಮೆಂಟ್ ಕೂಡ ಶಾರುಕ್ ಹೊಂದಿದ್ದಾರೆ.

ಬಾಲಿವುಡ್ ಷೆಹನ್ ಷಾ ಬಿಗ್ ಬಿ ಅಮಿತಾಬ್ ಬಚ್ಚನ್ ಮುಂಬೈನಲ್ಲಿ ಎಂಟು ಲಕ್ಷುರಿ ಮನೆಗಳನ್ನ ಹೊಂದಿದ್ದಾರೆ. ಇದರ ಹೊರತಾಗಿ ಪ್ಯಾರಿಸ್ ನಲ್ಲಿ ಕೂಡ ಅಮಿತಾಬ್ ಬಚ್ಚನ್ ಮೂರು ಕೋಟಿ ರೂಪಾಯಿ ಮೌಲ್ಯದ ಲಕ್ಷುರಿ ಫ್ಯ್ಲಾಟ್ ಒಂದರ ಮಾಲೀಕರಾಗಿದ್ದಾರೆ.

ಇನ್ನು ಬಿಗ್ ಬಿ ಪುತ್ರ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರ ಮಾಲೀಕತ್ವದಲ್ಲಿ ದುಬೈನಲ್ಲಿ ಅದ್ಧೂರಿಯಾದ ಅರಮನೆಯನ್ನ ಹೋಲುವಂತಾ ಬಂಗಲೆ ಇದೆ. ರೆಸಾರ್ಟ್ ಮಾದರಿಯಲ್ಲಿರುವ ಆ ಬಂಗಲೆ 15ರಿಂದ 35 ಮಿಲಿಯನ್ ಧೀರಮ್ ಮೌಲ್ಯ ಹೊಂದಿದೆ.

ಬಾಲಿವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ದುಬೈ ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರ ಮಾಲೀಕರಾಗಿದ್ದಾರೆ. ಇನ್ನು ಸೈಫ್ ಅಲಿ ಖಾನ್ ಮತ್ತು ಕರೀನಾ ದಂಪತಿ ಸ್ವಿಡ್ಜರ್ ಲೆಂಡ್ ನಲ್ಲಿ ಹಾಲಿಡೇ ಹೋಮ್ ನ ಒಡೆಯರಾಗಿದ್ದಾರೆ. ಇನ್ನೂ ಅನೇಕ ನಟರು ವಿದೇಶದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಆಸ್ತಿಯನ್ನ ಹೊಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...