alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಮವಾರ ಮಹಾಶಿವರಾತ್ರಿ : ಯಾರಿಗೆ ಒಲಿಯಲಿದ್ದಾನೆ ಪರಮಾತ್ಮ

default (1)

2012 ರಲ್ಲಿ ಸೋಮವಾರ ಮಹಾ ಶಿವರಾತ್ರಿ ಬಂದಿತ್ತು. ಈಗ ನಾಲ್ಕು ವರ್ಷಗಳ ನಂತ್ರ ಮಾರ್ಚ್ 7 ಸೋಮವಾರದಂದು ಶಿವನ ಆರಾಧನೆ ಮಾಡುವ ಮಹಾಶಿವರಾತ್ರಿ ಬಂದಿದೆ. ಇನ್ನು 12 ವರ್ಷಗಳ ನಂತ್ರ ಅಂದ್ರೆ 2028 ರಲ್ಲಿ ಸೋಮವಾರ ಮಹಾಶಿವರಾತ್ರಿ ಬರಲಿದೆ.

ಸೋಮವಾರ ಶಿವರಾತ್ರಿ ಬಂದ್ರೆ ಶುಭವೆಂದು ಪರಿಗಣಿಸಲಾಗುತ್ತದೆ. ಯಾರ ಜಾತಕದಲ್ಲಿ ಗುರು, ಶುಕ್ರ ಹಾಗೂ ರಾಹು ಕೆಟ್ಟ ಸ್ಥಾನದಲ್ಲಿದ್ದಾರೋ ಅಂತವರು ಸೋಮವಾರ ಶಿವನ ಆರಾಧನೆ ಮಾಡಿದ್ರೆ ಉತ್ತಮ ಫಲ ಸಿಗಲಿದೆ.

ಅಧ್ಯಯನದಲ್ಲಿ ಆಸಕ್ತಿ ಇಲ್ಲದ ಮಕ್ಕಳು, ಮದುವೆಯಾಗದವರು ಸೋಮವಾರ ಬರುವ ಮಹಾ ಶಿವರಾತ್ರಿಯಂದು ಮಹಾಪೂಜೆ ಮಾಡಿದರೆ ಯಶಸ್ಸು ಪ್ರಾಪ್ತಿಯಾಗಲಿದೆ. ಇದಲ್ಲದೆ ಭಕ್ತರ ಕಷ್ಟಗಳೆಲ್ಲ ನಿವಾರಣೆಯಾಗಲಿವೆ. ಮಹಾಶಿವರಾತ್ರಿಯಂದು ಏನೇನು ಮಾಡಬೇಕು ಗೊತ್ತಾ?

ಶಿವರಾತ್ರಿಯ ರಾತ್ರಿ ಬಿಳಿ ಮರಳಿನಿಂದ ಶಿವಲಿಂಗವನ್ನು ಮಾಡಿ ಅದಕ್ಕೆ ಹೂ, ಹಣ್ಣು, ಗಂಧ, ಬಿಲ್ವಪತ್ರೆ, ದೀಪ, ಕರ್ಪೂರ, ನೈವೇದ್ಯಗಳನ್ನಿಟ್ಟು ಐದು ಬಾರಿ ಪೂಜೆ ಮಾಡಬೇಕು.

ಹಾಲು, ಮೊಸರು, ತುಪ್ಪ, ಜೇನು ಮತ್ತು ಸಕ್ಕರೆಯನ್ನು ಸೇರಿಸಿ ಪಂಚಾಮೃತ ಮಾಡಿ ಅದನ್ನು ಶಿವನಿಗೆ ಅಭಿಷೇಕ ಮಾಡಬೇಕು. ನಂತ್ರ ನೀರಿನಿಂದ ಅಭಿಷೇಕ ಮಾಡಬೇಕು.

‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...