alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮ ವಿವಾಹಕ್ಕೆ ಅಡ್ಡಿಯುಂಟು ಮಾಡುತ್ತೆ ಈ ಗ್ರಹ

ಪ್ರೀತಿ ಸದ್ದಿಲ್ಲದೆ ಆಗಿಬಿಡುತ್ತದೆ. ಆದ್ರೆ ಪ್ರೇಮ ವಿವಾಹವಾಗೋದು ಸುಲಭವಲ್ಲ. ವಿವಾಹ ಸಫಲವಾಗೋದು ಮತ್ತಷ್ಟು ಕಷ್ಟ. ಪ್ರೇಮ ವಿವಾಹಕ್ಕೂ, ರಾಶಿಗೂ ಸಂಬಂಧವಿದೆ. ಯಾವ ರಾಶಿಯವರ ಪ್ರೇಮ ವಿವಾಹ ಯಶಸ್ವಿಯಾಗುತ್ತದೆ ಎಂಬುದನ್ನು ಜ್ಯೋತಿಷ್ಯ ಹೇಳುತ್ತದೆ.

ಮೇಷ: ಈ ರಾಶಿಯವರ ಪ್ರೇಮ ವಿವಾಹಕ್ಕೆ ಸೂರ್ಯ ಕಾರಣವಾಗ್ತಾನೆ. ಶನಿ ಪ್ರೇಮ ವಿವಾಹಕ್ಕೆ ಅಡ್ಡಿಯುಂಟು ಮಾಡ್ತಾನೆ. ಪ್ರೀತಿ ಯಶಸ್ವಿಯಾಗಲು ನಿಯಮಿತವಾಗಿ ಸೂರ್ಯನ ಆರಾಧನೆ ಮಾಡಬೇಕು.

ವೃಷಭ : ಮಂಗಳ ಪ್ರೇಮ ವಿವಾಹಕ್ಕೆ ಕಾರಣನಾದ್ರೆ ಗುರು ಪ್ರೇಮ ವಿವಾಹಕ್ಕೆ ಅಡ್ಡಿಯುಂಟು ಮಾಡ್ತಾನೆ. ಮಂಗಳವಾರ ಉಪವಾಸ ಮಾಡಿದ್ರೆ ಪ್ರೀತಿ ಯಶಸ್ವಿಯಾಗುತ್ತದೆ.

ಮಿಥುನ: ಪ್ರೇಮ ಯಶಸ್ಸಿಗೆ ಶುಕ್ರ ಕಾರಣನಾದ್ರೆ ಮಂಗಳ ಅಡ್ಡಿ ಮಾಡ್ತಾನೆ. ಚಂದ್ರ ಹಾಗೂ ಬಿಳಿ ಬಣ್ಣದ ಪ್ರಯೋಗ ಮಾಡುವುದ್ರಿಂದ ಪ್ರೇಮ ವಿವಾಹದಲ್ಲಿ ಯಶಸ್ಸು ಸಿಗುತ್ತದೆ.

ಕರ್ಕ : ಈ ರಾಶಿಯವರ ಪ್ರೇಮ ವಿವಾಹ ಯಶಸ್ಸಿಗೆ ಶನಿ ಪ್ರಮುಖ ಪಾತ್ರವಹಿಸುತ್ತಾನೆ. ಪ್ರತಿ ದಿನ ಶನಿ ಮಂತ್ರವನ್ನು ಜಪಿಸಬೇಕು.

ಸಿಂಹ : ಬುಧ ಪ್ರೇಮ ವಿವಾಹಕ್ಕೆ ಅಡ್ಡಿಯುಂಟು ಮಾಡಿದ್ರೆ ಶನಿ ಪ್ರೇಮಿಗಳನ್ನು ಒಂದಾಗಿಸ್ತಾನೆ. ತಿಳಿ ನೀಲಿ ಬಣ್ಣವನ್ನು ಹೆಚ್ಚಾಗಿ ಬಳಸಬೇಕು.

ಕನ್ಯಾ: ಮಂಗಳ ಪ್ರೀತಿಗೆ ಅಡ್ಡಿ ಮಾಡಿದ್ರೆ ಶನಿ ಪ್ರೇಮ ವಿವಾಹಕ್ಕೆ ಕಾರಣನಾಗ್ತಾನೆ. ಮಂಗಳವಾರ ಶನಿ ಮಂತ್ರ ಜಪಿಸಿ ಹಾಗೂ ಉಪ್ಪನ್ನು ತಿನ್ನಬೇಡಿ.

ತುಲಾ : ಮಂಗಳ ಪ್ರೀತಿ ಯಶಸ್ಸಿಗೆ ಕಾರಣನಾಗ್ತಾನೆ. ಗುರು ಪ್ರೀತಿ ಮುರಿಯಲು ಕಾರಣನಾಗ್ತಾನೆ. ಪ್ರೀತಿ ಸಿಗಲು ಹನುಮಾನ್ ಚಾಲೀಸ್ ಓದಬೇಕು.

ವೃಶ್ಚಿಕ : ಶುಕ್ರ ಪ್ರೇಮ ವಿವಾಹಕ್ಕೆ ಕಾರಣನಾಗ್ತಾನೆ. ಬುಧ ಪ್ರೀತಿ ಮುರಿಯುತ್ತಾನೆ. ಶುಕ್ರ ಮಂತ್ರದ ಜಪ ಮಾಡಿದ್ರೆ ಯಶಸ್ಸು ಸಿಗಲಿದೆ.

ಧನು : ಶನಿ ಪ್ರೀತಿ ಮುರಿದ್ರೆ ಮಂಗಳ ಯಶಸ್ಸಿಗೆ ಕಾರಣನಾಗ್ತಾನೆ. ಗುಲಾಬಿ ಬಣ್ಣವನ್ನು ಬಳಸಿ.

ಮಕರ : ಚಂದ್ರನೇ ಪ್ರೀತಿ ಯಶಸ್ಸು ಹಾಗೂ ನಷ್ಟಕ್ಕೆ ಕಾರಣವಾಗ್ತಾನೆ. ಬೆಳ್ಳಿಯನ್ನು ಧಾರಣೆ ಮಾಡಿ. ಬಿಳಿ ಬಣ್ಣದ ಪ್ರಯೋಗ ಮಾಡಿ.

ಕುಂಭ : ಸೂರ್ಯ ಪ್ರೀತಿ ಯಶಸ್ಸಿಗೆ ಕಾರಣವಾದ್ರೆ ಮಂಗಳ ಪ್ರೀತಿ ಮುರಿದು ಬೀಳಲು ಕಾರಣವಾಗ್ತಾನೆ. ಸೂರ್ಯನಿಗೆ ಜಲ ಅರ್ಪಿಸಬೇಕು. ಭಾನುವಾರ ಉಪವಾಸ ಮಾಡಿ.

ಮೀನ : ಚಂದ್ರ ಪ್ರೇಮ ವಿವಾಹಕ್ಕೆ ಕಾರಣವಾಗ್ತಾನೆ. ಬುಧ ಪ್ರೀತಿ ಮುರಿಯಲು ಯತ್ನಿಸ್ತಾನೆ. ಶಿವನಿಗಾಗಿ ಉಪವಾಸ ಮಾಡಿ. ಹುಣ್ಣಿಮೆಯಂದು ವೃತ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...