HomeEntertainmentಟಾಕ್ಸಿಕ್ ಸೋಲಿಗೆ ಕಾರಣ ಈ ಎಡವಟ್ಟು, ಫ್ಲಾಪ್ ಮೇಲೆ ಫ್ಲಾಪ್ ಮಾಡಿದ್ರೂ ಟಾಕ್ಸಿಕ್‌ಗೆ ದುಡ್ಡು ಎಲ್ಲಿಂದ...

ಟಾಕ್ಸಿಕ್ ಸೋಲಿಗೆ ಕಾರಣ ಈ ಎಡವಟ್ಟು, ಫ್ಲಾಪ್ ಮೇಲೆ ಫ್ಲಾಪ್ ಮಾಡಿದ್ರೂ ಟಾಕ್ಸಿಕ್‌ಗೆ ದುಡ್ಡು ಎಲ್ಲಿಂದ ಬಂತು?; ಸಮೀರ್ ಎಂಡಿ ಹೊಸ ವಿಡಿಯೊ ಸಿಕ್ಕಾಪಟ್ಟೆ ವೈರಲ್!

ಕನ್ನಡದ ಜನಪ್ರಿಯ ಯುಟ್ಯೂಬರ್ ಸಮೀರ್ ಎಂಡಿ ತನ್ನ ದೂತ ಚಾನೆಲ್‌ನಲ್ಲಿ ಹೊಸದೊಂದು ವಿಡಿಯೊವನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಟಾಕ್ಸಿಕ್ ಚಿತ್ರದ ಕುರಿತು ತಮ್ಮ ಪಾಲಿನ ಅಭಿಪ್ರಾಯಗಳನ್ನು ಬಿಚ್ಚಿಟ್ಟಿದ್ದಾರೆ.

‘What went wrong with Toxic?’ ಎಂಬ ಶೀರ್ಷಿಕೆಯಡಿಯಲ್ಲಿ ಸಮೀರ್ ವಿಡಿಯೊವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಟಾಕ್ಸಿಕ್ ಅಂದುಕೊಂಡ ರೀತಿ ಯಶಸ್ಸು ಸಾಧಿಸದೇ ಇರಲು ಕಾರಣವೇನು ಎಂಬುದನ್ನು ಅಂದಾಜಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೀತು ಮೋಹನ್‌ದಾಸ್ ನಿರ್ದೇಶಕಿಯಾದದ್ದು ಎಡವಟ್ಟು!

ಮೊದಲಿಗೆ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹೆಸರನ್ನು ತೆಗೆದುಕೊಂಡ ಸಮೀರ್ ಅವರು ಫಿಲ್ಮ್ ಫೆಸ್ಟಿವಲ್ ಉದ್ದೇಶಿತ ಸಿನಿಮಾಗಳನ್ನು ಮಾಡುವ ನಿರ್ದೇಶಕಿ, ಅವರಿಗೆ ಮಾಸ್ ಪ್ರೇಕ್ಷಕರಿಗೆ ಚಿತ್ರ ಮಾಡಿ ಅಭ್ಯಾಸವಿರಲಿಲ್ಲ, ಅವರ ಹಿಂದಿನ ಚಿತ್ರಗಳನ್ನು ತೆಗೆದುಕೊಂಡರೆ ಎಲ್ಲವೂ ಅಂಥ ಚಿತ್ರಗಳೇ. ಹೀಗಾಗಿ ಕಮರ್ಷಿಯಲ್ ಚಿತ್ರಗಳನ್ನು ಮಾಡಿ ಅಭ್ಯಾಸವೇ ಇಲ್ಲದ ಇವರನ್ನು ನಿರ್ದೇಶಕಿಯಾಗಿ ಆಯ್ಕೆ ಮಾಡಿಕೊಂಡದ್ದು ದೊಡ್ಡ ತಪ್ಪು ಎಂದಿದ್ದಾರೆ.

ಬಹುಶಃ ಗರ್ವದ ಸಮಸ್ಯೆಗಳು ಎದುರಾಗಿರಬಹುದು

ಯಶ್ ಕೇವಲ ನಟನಾಗಿ ಮಾತ್ರವಲ್ಲದೇ ಟಾಕ್ಸಿಕ್ ಚಿತ್ರಕ್ಕೆ ಕಥೆಯನ್ನೂ ಸಹ ಬರೆದಿದ್ದಾರೆ ಎಂದ ಸಮೀರ್ ಗೀತು ಮೋಹನ್‌ದಾಸ್ ಅವರ ಸಂದರ್ಶನವೊಂದರ ಕ್ಲಿಪ್ ಒಂದನ್ನು ಹಂಚಿಕೊಂಡು ಇದರಿಂದ ಈಗೋ ಕ್ಲಾ‍ಶಸ್ ಆಗಿರಬಹುದು ಎಂದಿದ್ದಾರೆ. ಗೀತು ಮೋಹನ್‌ದಾಸ್ ಓರ್ವ ಇಂಡಿಪೆಂಡೆಂಟ್ ಸಿನಿಮಾಗಳನ್ನು ನಿರ್ದೇಶಿಸಿದ ನಿರ್ದೇಶಕಿ, ಅವರು ನಾನು ಬರೆದುಕೊಳ್ಳುವುದು ಒಂದು, ಶೂಟ್ ಮಾಡುವುದು ಮತ್ತೊಂದು, ಎಡಿಟ್ ಮಾಡುವುದು ಮಗದೊಂದು ಎಂದು ಹೇಳಿದ್ದರು, ಅಲ್ಲದೇ ಈ ಬಾರಿ ನನ್ನ ಮುಂದಿನ ಸಿನಿಮಾಗೆ ನನ್ನನ್ನು ಬಿಟ್ಟು ಬೇರೆ ಬರಹಗಾರರೂ ಸಹ ಇರುವುದರಿಂದ ನನ್ನ ಶೈಲಿ ಅವರಿಗೆ ಕೋಪ ತರಿಸಿದೆ ಎಂದಿದ್ದರು, ಆ ಸಮಯಕ್ಕೆ ಟಾಕ್ಸಿಕ್ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದವು, ಗೀತು ಮೋಹನ್‌ದಾಸ್ ಇದರ ಬಗ್ಗೆಯೇ ಈ ಮಾತುಗಳನ್ನು ಹೇಳಿದ್ದರು ಎನಿಸುತ್ತದೆ, ಇಲ್ಲಿ ಈಗೋ ಕ್ಲಾಶಸ್ ಆಗಿದೆ, ಯಶ್ ಬರೆದಿದ್ದೊಂದು, ನಿರ್ದೇಶಕಿ ತೆರೆ ಮೇಲೆ ತಂದಿದ್ದೊಂದು, ಹೀಗಾಗಿ ಚಿತ್ರ ಹಾಳಾಗಿದೆ ಎಂದಿದ್ದಾರೆ.

ಸಾಲು ಸಾಲು ಫ್ಲಾಪ್ ಕೊಟ್ಟ ಕೆವಿಎನ್‌ ಟಾಕ್ಸಿಕ್ ಮೇಲೆ ನೂರಾರು ಕೋಟಿ ಹಾಕಿದ್ದೇಗೆ?

ಬಳಿಕ ಟಾಕ್ಸಿಕ್ ಚಿತ್ರದ ನಿರ್ಮಾಪಕರಾದ ವೆಂಕಟ್ ಕೆ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಬಗ್ಗೆ ಮಾತನಾಡಿದ ಸಮೀರ್ ಈ ಬ್ಯಾನರ್ ನಿರ್ಮಿಸಿರುವ ಆರು ಸಿನಿಮಾಗಳಲ್ಲಿ ಐದು ಚಿತ್ರಗಳು ಫ್ಲಾಪ್ ಆಗಿವೆ. ಯಾವುದೋ ಚಿತ್ರವೊಂದರ ಲಾಭದಿಂದ ಟಾಕ್ಸಿಕ್ ಮೇಲೆ 700 ಕೋಟಿ ಬಂಡವಾಳ ಹೂಡಿದ್ದಾರೆ ಎಂದುಕೊಂಡಿದ್ದೆ, ಆದರೆ ಅವರು ನಿರ್ಮಿಸಿರುವ ಚಿತ್ರಗಳು ಲಾಭಗಳನ್ನೇ ಗಳಿಸಿಲ್ಲ, ಅಲ್ಲದೇ ಅವರು 20 ಸಿನಿಮಾಗಳನ್ನು ವಿತರಿಸಿದ್ದು, ಇದರಿಂದ ಏನಾದರೂ ಲಾಭ ಪಡೆದು ಬಂಡವಾಳ ಹೂಡಿರಬಹುದು ಎಂದು ನೋಡಿದರೆ ಅಲ್ಲೂ ಲಾಭವಿಲ್ಲ, ಹೀಗಿರುವಾಗ ಟಾಕ್ಸಿಕ್ ಮೇಲೆ ಅಷ್ಟು ದೊಡ್ಡ ಬಂಡವಾಳ ಹೂಡಿದ್ದು ಹೇಗೆ? ಎಂದು ಸಮೀರ್ ಪ್ರಶ್ನೆ ಹಾಕಿದ್ದಾರೆ.

ಕೆವಿಎನ್ ನಿರ್ಮಾತೃ ರಿಯಲ್ ಎಸ್ಟೇಟ್ ಮಾಲೀಕ

ಕೆವಿಎನ್ ಬ್ಯಾನರ್‌ನ ಮಾಲೀಕ ವೆಂಕಟ್ ಕೆ ನಾರಾಯಣ ಅವರು ರಿಯಲ್ ಎಸ್ಟೇಟ್ ಸಂಸ್ಥೆ ಕೆವಿಎನ್ ಪ್ರಾಪರ್ಟೀಸ್‌ನ ಮಾಲೀಕರೂ ಸಹ ಆಗಿದ್ದಾರೆ ಎಂದ ಸಮೀರ್ ಎಂಡಿ ರಿಯಲ್ ಎಸ್ಟೇಟ್‌ನಲ್ಲಿ 30% ಕಪ್ಪುಹಣವಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ ಎಂದು ಉಲ್ಲೇಖಿಸಿ ಜತೆಗೆ ಇತ್ತೀಚೆಗೆ ತೆರೆ ಕಂಡಿದ್ದ ಮಲಯಾಳಂನ ಮಾಲಿವುಡ್ ಟೈಮ್ಸ್ ಚಿತ್ರವನ್ನೂ ಸಹ ಉಲ್ಲೇಖಿಸಿದರು. ರಿಯಲ್ ಎಸ್ಟೇಟ್‌ನಲ್ಲಿ ಬಂದ ಲಾಭದ ಹಣವನ್ನು ಟ್ಯಾಕ್ಸ್ ತಪ್ಪಿಸಲು ಸಿನಿಮಾಗಳ ಮೇಲೆ ಹಾಕಿ ಕಡಿಮೆ ಖರ್ಚು ಮಾಡಿ ಹೆಚ್ಚು ಹಣ ತೋರಿಸಿ ಈ ಮೂಲಕ ತಮ್ಮ ರಿಯಲ್ ಎಸ್ಟೇಟ್ ಲಾಭದ ಹಣವನ್ನು ಕರಗಿಸಿ ಕಡಿಮೆ ಟ್ಯಾಕ್ಸ್ ಕಟ್ಟುವುದು ಹಲವರ ಯೋಜನೆಯಾಗಿದ್ದು, ಇದನ್ನೇ ಮಾಲಿವುಡ್ ಟೈಮ್ಸ್‌ನಲ್ಲಿ ತೋರಿಸಲಾಗಿದೆ ಎಂದು ಸಮೀರ್ ತಿಳಿಸಿದರು.

ಎಮೋಷನಲ್ಲಿ ಕನೆಕ್ಟ್ ಆಗುವಲ್ಲಿ ಎಡವಿದ ಟಾಕ್ಸಿಕ್

ಇನ್ನು ಟಾಕ್ಸಿಕ್ ಒಂದು ಸೈಕಾಲಜಿಕಲ್ ಚಿತ್ರವಾಗಿದ್ದು, ಇದರಲ್ಲಿ ಜನರಿಗೆ ಎಮೋಷನಲ್ಲಿ ಕನೆಕ್ಟ್ ಆಗುವುದು ಬಹು ಮುಖ್ಯ. ಆದರೆ ಚಿತ್ರದಲ್ಲಿ ಅದು ಕೆಲಸ ಮಾಡದೇ ಇರುವುದು ಚಿತ್ರ ಅನೇಕರಿಗೆ ಇಷ್ಟವಾಗಿಲ್ಲ ಎಂದು ಸಮೀರ್ ಹೇಳಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular