HomeLatest Newsನಿಮ್ಮ ‘ಆಧಾರ್ ಕಾರ್ಡ್’ ಸಂಖ್ಯೆ ಇನ್ಮುಂದೆ ಫುಲ್ ಸೇಫ್ : ಈಗಲೇ ಈ ಆ್ಯಪ್ ಡೌನ್...

ನಿಮ್ಮ ‘ಆಧಾರ್ ಕಾರ್ಡ್’ ಸಂಖ್ಯೆ ಇನ್ಮುಂದೆ ಫುಲ್ ಸೇಫ್ : ಈಗಲೇ ಈ ಆ್ಯಪ್ ಡೌನ್ ಲೋಡ್ ಮಾಡಿ.!

ನವದೆಹಲಿ : ಆಧಾರ್ ಕಾರ್ಡ್ ದುರುಪಯೋಗ ಮತ್ತು ಸೈಬರ್ ವಂಚನೆಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಆಧಾರ್ ಬಳಕೆದಾರರಿಗೆ ಹೊಸ ಭದ್ರತಾ ಫೀಚರ್ ಅನ್ನು ಪರಿಚಯಿಸಿದೆ. ಇನ್ಮುಂದೆ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಮಾಹಿತಿ ರಕ್ಷಿಸಿಕೊಳ್ಳಲು ‘ಮಾಸ್ಕ್ಡ್ ಆಧಾರ್’ (Masked Aadhaar) ಬಳಸುವಂತೆ ಸೂಚನೆ ನೀಡಲಾಗಿದೆ.

ಏನಿದು ಮಾಸ್ಕ್ಡ್ ಆಧಾರ್ ?
ಸಾಮಾನ್ಯ ಆಧಾರ್ ಕಾರ್ಡ್ನಲ್ಲಿ ನಿಮ್ಮ 12 ಅಂಕಿಗಳ ಸಂಖ್ಯೆ ಪೂರ್ಣವಾಗಿ ಕಾಣಿಸುತ್ತದೆ. ಆದರೆ, ಮಾಸ್ಕ್ಡ್ ಆಧಾರ್ನಲ್ಲಿ ನಿಮ್ಮ ಮೊದಲ 8 ಅಂಕಿಗಳು ಮರೆಯಾಗಿರುತ್ತವೆ (ಉದಾಹರಣೆಗೆ: XXXX-XXXX-1234). ಕೇವಲ ಕೊನೆಯ 4 ಅಂಕಿಗಳು ಮಾತ್ರ ಗೋಚರಿಸುತ್ತವೆ. ಇದರಿಂದ ನಿಮ್ಮ ಆಧಾರ್ ಸಂಖ್ಯೆಯನ್ನು ಯಾರೂ ಕದಿಯಲು ಅಥವಾ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಹೊಸ ಆಧಾರ್ ಆ್ಯಪ್ ವಿಶೇಷತೆಗಳು
ಕೇಂದ್ರ ಸರ್ಕಾರವು ಆಧಾರ್ ಬಳಕೆದಾರರಿಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ್ದು, ಇದರಲ್ಲಿ ಹಲವಾರು ಸುಧಾರಿತ ಫೀಚರ್ಗಳಿವೆ:
• ಪೇಪರ್ಲೆಸ್ ವಿಧಾನ: ಭೌತಿಕ ಕಾರ್ಡ್ ಬದಲಿಗೆ ಡಿಜಿಟಲ್ ಆಧಾರ್ ಅನ್ನು ಎಲ್ಲಿ ಬೇಕಾದರೂ ಬಳಸಬಹುದು.
• ಬಯೋಮೆಟ್ರಿಕ್ ಲಾಕ್: ನಿಮ್ಮ ಫಿಂಗರ್ಪ್ರಿಂಟ್ ಡೇಟಾವನ್ನು ನೀವೇ ಲಾಕ್ ಮಾಡಬಹುದು, ಇದರಿಂದ ನಿಮ್ಮ ಅನುಮತಿಯಿಲ್ಲದೆ ಯಾರೂ ಹಣ ಲಪಟಾಯಿಸಲು ಸಾಧ್ಯವಿಲ್ಲ.
• ಸುಲಭ ಅಪ್ಡೇಟ್: ಮನೆಯಲ್ಲೇ ಕುಳಿತು ವಿಳಾಸ ಮತ್ತು ಮೊಬೈಲ್ ಸಂಖ್ಯೆ ಬದಲಾಯಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಸ್ಕ್ಡ್ ಆಧಾರ್ ಡೌನ್ಲೋಡ್ ಮಾಡುವುದು ಹೇಗೆ?

  1. ಪ್ಲೇ ಸ್ಟೋರ್ನಿಂದ ಅಧಿಕೃತ mAdhaar ಆ್ಯಪ್ ಡೌನ್ಲೋಡ್ ಮಾಡಿ.
  2. ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಒಟಿಪಿ (OTP) ಮೂಲಕ ಲಾಗಿನ್ ಆಗಿ.
  3. ‘Download Aadhaar’ ಸೆಕ್ಷನ್ಗೆ ಹೋಗಿ.
  4. ಅಲ್ಲಿ ನಿಮಗೆ ‘Masked Aadhaar’ ಬೇಕೇ ಎಂದು ಕೇಳಲಾಗುತ್ತದೆ, ಆ ಆಯ್ಕೆಯನ್ನು ಆಯ್ದುಕೊಳ್ಳಿ.
  5. ಈಗ ಡೌನ್ಲೋಡ್ ಆದ ಪಿಡಿಎಫ್ನಲ್ಲಿ ನಿಮ್ಮ ಆಧಾರ್ ಸಂಖ್ಯೆ ಸುರಕ್ಷಿತವಾಗಿ ಅಡಗಿರುತ್ತದೆ.
    ಗಮನಿಸಿ: ಏರ್ಪೋರ್ಟ್, ಹೋಟೆಲ್ ಚೆಕ್-ಇನ್ ಅಥವಾ ರೈಲ್ವೆ ಪ್ರಯಾಣದ ವೇಳೆ ಗುರುತಿನ ಚೀಟಿಯಾಗಿ ಮಾಸ್ಕ್ಡ್ ಆಧಾರ್ ಬಳಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಪೂರ್ಣ ಆಧಾರ್ ಸಂಖ್ಯೆಯೇ ಬೇಕಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular