ನವದೆಹಲಿ: ಜೂನ್ 21ರ ನಾಳಿನ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ (International Day of Yoga 2026) ಇಡೀ ದೇಶವೇ ಅಕ್ಷರಶಃ ಯೋಗಮಯವಾಗಿದೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಯೋಗಾಭ್ಯಾಸದೊಂದಿಗೆ ಜಂಟಿಯಾಗಿ ಕೈಜೋಡಿಸಲು ದೇಶಾದ್ಯಂತ ಇರುವ ಬರೋಬ್ಬರಿ 6 ಲಕ್ಷಕ್ಕೂ ಹೆಚ್ಚು ಸಂಸ್ಥೆಗಳು ಯೋಗ ಸಂಗಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಜಾಗತಿಕ ಮಟ್ಟದ ಬಿಗ್ ರೆಕಾರ್ಡ್ ಬರೆದಿವೆ ಎಂದು ಆಯುಷ್ ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿದೆ.
ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಇಂತಹ ಅಭೂತಪೂರ್ವ ಜನಭಾಗೀದಾರಿಕೆ ಮತ್ತು ಉತ್ಸಾಹವನ್ನು ಕಂಡು ಇಡೀ ವಿಶ್ವವೇ ಬೆರಗಾಗಿದೆ . ನಾಳೆ ಜೂನ್ 21ರಂದು ಈ 6 ಲಕ್ಷಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ತಮ್ಮ ಸ್ಥಳಗಳಲ್ಲೇ ನಿಂತು, ಕಾಮನ್ ಯೋಗ ಪ್ರೋಟೋಕಾಲ್ (CYP) ಆಧಾರದ ಮೇಲೆ ಏಕಕಾಲದಲ್ಲಿ ಸಿಂಕ್ರೊನೈಸ್ಡ್ ಯೋಗ ಸೆಷನ್‌ಗಳನ್ನು ನಡೆಸಲಿವೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಗ ಸಂಗಮ ಉಪಕ್ರಮದ ಮುಖ್ಯ ಉದ್ದೇಶವೇ ಯೋಗ ದಿನಾಚರಣೆಯನ್ನು ಕೇವಲ ಯಾವುದೋ ಒಂದು ಮುಖ್ಯ ವೇದಿಕೆಗೆ ಸೀಮಿತಗೊಳಿಸದೆ, ದೇಶದ ಮೂಲೆ ಮೂಲೆಗೂ ಕೊಂಡೊಯ್ಯುವುದಾಗಿದೆ. ಈ ಆಲೋಚನೆಗೆ ಯೋಗ ಸಂಗಮ ಪೋರ್ಟಲ್ ಅಕ್ಷರಶಃ ಡಿಜಿಟಲ್ ಬೆನ್ನೆಲುಬಾಗಿ ನಿಂತಿದೆ.
ಈ ಮೆಗಾ ಅಭಿಯಾನವು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 778 ಜಿಲ್ಲೆಗಳನ್ನು ಸಂಪೂರ್ಣವಾಗಿ ಕವರ್ ಮಾಡಿದೆ ಶಾಲೆಗಳು, ಕಾಲೇಜುಗಳು, ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಮತ್ತು ಎನ್‌ಜಿಒಗಳು ಈ ಮಹಾ ಆಂದೋಲನದಲ್ಲಿ ಭಾಗಿಯಾಗುತ್ತಿವೆ.
ರಿಜಿಸ್ಟ್ರೇಷನ್ ಮಾಡಿಕೊಂಡ ಆ 6 ಲಕ್ಷ ಸಂಸ್ಥೆಗಳ ಪಕ್ಕಾ ಲೆಕ್ಕಾಚಾರ ಇಲ್ಲಿದೆ:
ಸರ್ಕಾರಿ ಸಂಸ್ಥೆಗಳು: 3.22 ಲಕ್ಷಕ್ಕೂ ಹೆಚ್ಚು
ಶೈಕ್ಷಣಿಕ ಸಂಸ್ಥೆಗಳು (ಶಾಲೆ/ಕಾಲೇಜು): ಸುಮಾರು 2 ಲಕ್ಷ
ಖಾಸಗಿ ಕಂಪನಿಗಳು/ಸಂಸ್ಥೆಗಳು: 16,000 ಕ್ಕೂ ಹೆಚ್ಚು
ಸ್ವಯಂಸೇವಾ ಸಂಸ್ಥೆಗಳು (NGOs): 5,000 ಕ್ಕೂ ಹೆಚ್ಚು
ಇತರ ವಿಭಾಗದ ಸಂಸ್ಥೆಗಳು: ಸುಮಾರು 44,000
ಈ ಬಾರಿಯ ಯೋಗ ದಿನದ ನೋಂದಣಿಯಲ್ಲಿ ರಾಜ್ಯಗಳ ನಡುವೆ ಭರ್ಜರಿ ಪೈಪೋಟಿ ನಡೆದಿದೆ ಬರೋಬ್ಬರಿ 2.76 ಲಕ್ಷಕ್ಕೂ ಹೆಚ್ಚು ಸಂಸ್ಥೆಗಳ ನೋಂದಣಿಯೊಂದಿಗೆ ಪಶ್ಚಿಮ ಬಂಗಾಳ (West Bengal) ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ,ಸುಮಾರು 1.50 lakh ನೋಂದಣಿ ಮಾಡಿಸುವ ಮೂಲಕ ರಾಜಸ್ಥಾನ (Rajasthan) ಎರಡನೇ ಸ್ಥಾನದಲ್ಲಿದೆ.
ಇವುಗಳ ಬೆನ್ನಲ್ಲೇ ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, Uttar Pradesh, ತಮಿಳುನಾಡು, ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯಗಳಿಂದಲೂ ಕೋಟಿ ಕೋಟಿ ಜನರು ಯೋಗ ದಿನಕ್ಕೆ ಭರ್ಜರಿಯಾಗಿ ಸಜ್ಜಾಗಿದ್ದಾರೆ.
ಈ ವರ್ಷದ ಸ್ಪೆಷಲ್ ಥೀಮ್: ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ
2026ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು “Yoga for Healthy Ageing” (ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ) ಎಂಬ ವಿಶೇಷ ಘೋಷವಾಕ್ಯದ ಅಡಿಯಲ್ಲಿ ಆಚರಿಸಲಾಗುತ್ತಿದೆ. ವಯಸ್ಸಾದ ಮೇಲೂ ಮನುಷ್ಯ ನಿತ್ಯವೂ ಆಕ್ಟಿವ್ ಆಗಿ, ನೆಮ್ಮದಿಯಿಂದ ಮತ್ತು ಯಾವುದೇ ಕಾಯಿಲೆಗಳಿಲ್ಲದೆ ಸುಂದರ ಜೀವನ ನಡೆಸಲು ಯೋಗ ಹೇಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ ಎಂಬುದನ್ನು ಇಡೀ ಜಗತ್ತಿಗೆ ಸಾರುವುದು ಈ ವರ್ಷದ ಮುಖ್ಯ ಉದ್ದೇಶವಾಗಿದೆ.

