ಕೋಲಾರ: ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಕೊತ್ವಾಲ್ ರಾಮಚಂದ್ರನ ರೀತಿ ವರ್ತಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಯತ್ನಾಳ್, ಡಿ.ಕೆ.ಶಿವಕುಮಾರ್ ಸದನದಲ್ಲಿ ದಮ್ಮು, ತಾಕತ್ತು ಎಂದೆಲ್ಲಾ ಮಾತನಾಡಿದ್ದಾರೆ. ಇಂಥವರು ಮುಖ್ಯಮಂತ್ರಿಯಾದರೆ ಈ ನಾಡಿನ ಗತಿಯೇನು? ಎಂದು ಪ್ರಶ್ನಿಸಿದರು.
ಸಿಎಂ ಆಗಬೇಕು ಎಂದು ಡಿ.ಕೆ.ಶಿವಕುಮಾರ್ ನಮ್ಮವರನ್ನೂ ಭೇಟಿಯಾಗಿ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯವರ ಬೆಂಬಲ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಒಪ್ಪಲ್ಲ ಎಂದರು.
ನಾನೀಗ ಬಿಜೆಪಿಯಲ್ಲಿ ಇಲ್ಲದಿರಬಹುದು. ಆದರೆ ಉಪ್ಪು ತಿಂದಿದ್ದನ್ನು ಮರೆಯಲ್ಲ. ಬಿಜೆಪಿ ನನ್ನನ್ನು ಬೆಳೆಸಿದ ಪಕ್ಷ. ನಾನು ಯಡಿಯೂರಪ್ಪ ರೀತಿ ಅಲ್ಲ. ಸಾಯುವವರೆಗೆ ಬಿಜೆಪಿಗೆ ಹೋಗಲ್ಲ ಎಂದೆಲ್ಲ ಡೈಲಾಗ್ ಹೊಡೆಯಲ್ಲ ಎಂದರು.

