ಯಾದಗಿರಿ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಕೋಟೆ ವೀರಭದ್ರಸ್ವಾಮಿ ದೇವಸ್ಥಾನದ ಬಳಿ ಕಳೆದ 9 ದಿನಗಳಿಂದ ಉತ್ಖನನ ಕಾರ್ಯ ನಡೆಯುತ್ತಿದೆ. ಉತ್ಖನನದ ವೇಳೆ ಪುರಾತನ ಹಾಗೂ ಅಮೂಲ್ಯ ವಸ್ತುಗಳು ಕೆಂಪು ಹವಳ, ಪಚ್ಚೆ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗುತ್ತಿವೆ. ಈ ನಡುವೆ ದೇವರದಾಸಿಮಯ್ಯ ಪುಣ್ಯಕ್ಷೇತ್ರ ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮದಲ್ಲಿಯೂ ಉತ್ಖನನ ನಡೆಸಲು ಸಿಧತೆ ನಡೆದಿದೆ.
ಮುದನೂರು ಗ್ರಾಮ ರಾಜ-ಮಹಾರಾಜರ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿತ್ತು. ಈಗ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಭೂಗರ್ಭದಲ್ಲಿ ಅಪಾರ ಪ್ರಮಾಣದ ಸಂಪತ್ತು ಅಡಗಿದೆ ಎಂಬ ನಂಬಿಕೆಯಿದೆ. ಇಲ್ಲಿನ ಭೂಮಿಯಲ್ಲ್ ಕೆಲ ಐತಿಹಾಸಿಕ ಕುರುಹುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿರುವ ಬೆನ್ನಲ್ಲೇ ಮುದನೂರು ಗ್ರಾಮದಲ್ಲಿಯೂ ಅಪಾರ ಪ್ರಮಾಣದ ಸಂಪತ್ತು ಸಿಗುವ ನಿರೀಕ್ಷೆ ಮೂಡಿದ್ದು, ಇಲ್ಲಿಯೂ ಉತ್ಖನನ ಮಾಡುವಂತೆ ಒತ್ತಾಯ ಕೇಳಿಬಂದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದನೂರು (ಬಿ) ಗ್ರಾಮದಲ್ಲಿ ಅಪಾರ ಪ್ರಮಾಣದ ವಜ್ರ, ಚಿನ್ನಾಭರಣ, ಸಂಪತ್ತು ಅಡಗಿದೆ ಎಂಬ ಮಾತು ಗ್ರಾಮಸ್ಥರಲ್ಲಿ ಕೇಳಿಬಂದಿದೆ. ದೇವರದಾಸಿಮಯ್ಯರ ಪುಣ್ಯಕ್ಷೇಯ್ರವಾಗಿರುವ ಈ ಗ್ರಾಮ ಅಂದು ಚಾಲುಕ್ಯರ ವಾಣಿಜ್ಯ ಕೇಂದ್ರವಾಗಿತ್ತು. ಇಲ್ಲಿ ವ್ಯಾಪಾರ ವಹಿವಾಟು, ವಜ್ರ, ಚಿನ್ನಾಭರಣಗಳ ಬಳಕೆ, ವ್ಯಾಪಾರಗಳು ನಡೆಯುತ್ತಿದ್ದವು. ಕಾಲಾನಂತರದಲ್ಲಿ ಐತಿಹಾಸಿಕ ಕುರುಹುಗಳು ಮುಚ್ಚಲ್ಪಟ್ಟವು. ದೇವರದಾಸಿಮಯ್ಯ ನಾಡಿನಲ್ಲಿ 101 ಶಿವಲಿಂಗದ ದೇಗುಲಗಳಿವೆ. ಆದರೆ ಅವುಗಳು ಹಾಳಾಗಿವೆ. ಶಿವಲಿಂಗ ಇರುವ ದೇವಾಲಯದ ಮೇಲೆಯೇ ಜನರು ಮನೆಗಳ್ನನು ನಿರ್ಮಿಸಿ ವಾಸಿಸುತ್ತಿದ್ದಾರೆ.
ಸುಮಾರು 160 ಮನೆಗಳು ದೇವಸ್ಥಾನದ ಮೇಲಿದೆ. ಮನೆಗಳನ್ನು ಸ್ಥಳಾಂತರಿಸಿ ಉತ್ಖನನ ಮಾಡಿದರೆ ಭೂಗರ್ಭದಲ್ಲಿ ಅಡಗಿರುವ ಸಂಪತ್ತು ಬೆಳಕಿಗೆ ಬರಲಿದೆ. ಈಗಾಗಲೇ ಯಾದಗಿರಿ ಜಿಲ್ಲಾಡಲಿತ 160 ಮನೆಗಳ ಸ್ಥಳಾಂತರಕ್ಕೆ ಗುರುತಿಸಿದೆ. ಇಲ್ಲಿಯು ಕೂಡ ಜಿಲ್ಲಾಡಳಿತ ಉತ್ಖನನ ಮಾಡುವ ಸಾಧ್ಯತೆ ದಟ್ಟವಾಗಿದೆ.

