HomeIndiaBREAKING: ಅಸ್ಸಾಂನಲ್ಲಿ ಬೆಳ್ಳಂ ಬೆಳಗ್ಗೆ ರೈಲು ಅಪಘಾತ ; 7 ಬೋಗಿಗಳು ಹಳಿತಪ್ಪಿ ಹಲವು ಪ್ರಯಾಣಿಕರಿಗೆ...

BREAKING: ಅಸ್ಸಾಂನಲ್ಲಿ ಬೆಳ್ಳಂ ಬೆಳಗ್ಗೆ ರೈಲು ಅಪಘಾತ ; 7 ಬೋಗಿಗಳು ಹಳಿತಪ್ಪಿ ಹಲವು ಪ್ರಯಾಣಿಕರಿಗೆ ಗಾಯ!

ಬೆಳ್ಳಂ ಬೆಳಗ್ಗೆ ಅಸ್ಸಾಂನ ಗುವಾಹಟಿ ಸಮೀಪ ರೈಲು ಅಪಘಾತ ಸಂಭವಿಸಿದೆ. ಕೋಲ್ಕತ್ತಾ–ಸೈರಾಂಗ್ ಎಕ್ಸ್‌ಪ್ರೆಸ್ ರೈಲಿನ ಏಳು ಬೋಗಿಗಳು ಏಕಾಏಕಿ ಹಳಿ ತಪ್ಪಿದ್ದು, ರೈಲಿನಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅದೃಷ್ಟವಶಾತ್ ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಮಿಜೋರಾಂನಿಂದ ಕೋಲ್ಕತ್ತಾ ಕಡೆಗೆ ತೆರಳುತ್ತಿದ್ದ ರೈಲು ಗುವಾಹಟಿ ಹೊರವಲಯದ ದಿಗಾರು ಬಳಿ ಸಾಗುತ್ತಿದ್ದಾಗ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ರೈಲಿನ ಎಂಜಿನ್ ಕೂಡ ಬೋಗಿಗಳೊಂದಿಗೆ ಹಳಿ ತಪ್ಪಿದೆ.

ಬೆಳಗ್ಗೆ 6.45ಕ್ಕೆ ರೈಲು ಅಪಘಾತ

ಈಶಾನ್ಯ ಗಡಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಕಪಿಂಜಲ್ ಕಿಶೋರ್ ಶರ್ಮಾ ಮಾತನಾಡಿ, ಬೆಳಗ್ಗೆ 6.45ಕ್ಕೆ ಅಪಘಾತ ಸಂಭವಿಸಿರುವುದನ್ನು ಖಚಿತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಆದರೆ, ಗಾಯಗೊಂಡವರ ನಿಖರ ಸಂಖ್ಯೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಅಪಘಾತಕ್ಕೆ ಕಾರಣವೇನು?

ರೈಲು ಹಳಿ ತಪ್ಪಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಅಪಘಾತದಿಂದ ರೈಲಿಗೆ ಉಂಟಾಗಿರುವ ಹಾನಿಯ ಪ್ರಮಾಣದ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಕುರಿತು ರೈಲ್ವೆ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.

*ದೆಹಲಿಯಲ್ಲಿ ವಾಯುಮಾಲಿನ್ಯ ಕೊಂಚ ಇಳಿಕೆ; AQI 299ಕ್ಕೆ ಕುಸಿತ, 28 ಪ್ರದೇಶಗಳಲ್ಲಿ ಇನ್ನೂ ಗಂಭೀರ ಸ್ಥಿತಿ!

ರಾಷ್ಟ್ರ ರಾಜಧಾನಿ ದೆಹಲಿಯ ಜನರಿಗೆ ವಾಯುಮಾಲಿನ್ಯದಿಂದ ಕೊಂಚ ನೆಮ್ಮದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ‘ಅತ್ಯಂತ ಕಳಪೆ’ (Very Poor) ಮಟ್ಟದಲ್ಲಿದ್ದ ಗಾಳಿಯ ಗುಣಮಟ್ಟ ಬುಧವಾರ ಸ್ವಲ್ಪ ಸುಧಾರಣೆ ಕಂಡಿದೆ. ಬೆಳಗ್ಗೆ 7 ಗಂಟೆಗೆ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 299ಕ್ಕೆ ಇಳಿಕೆಯಾಗಿದ್ದು, ‘ಕಳಪೆ’ (Poor) ವಿಭಾಗಕ್ಕೆ ಮರಳಿದೆ.

ಆದರೆ ಈ ಅಲ್ಪ ಸುಧಾರಣೆಯಿಂದ ಸಂಪೂರ್ಣ ನೆಮ್ಮದಿ ಸಿಕ್ಕಿಲ್ಲ. ನಗರದ ಹಲವು ಪ್ರದೇಶಗಳಲ್ಲಿ ವಾಯುಮಾಲಿನ್ಯ ಇನ್ನೂ ಅಪಾಯಕಾರಿ ಮಟ್ಟದಲ್ಲಿದೆ. ದೆಹಲಿಯ 58 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳ ಪೈಕಿ 28 ಕೇಂದ್ರಗಳಲ್ಲಿ ‘ಅತ್ಯಂತ ಕಳಪೆ’ ಗಾಳಿಯ ಗುಣಮಟ್ಟ ದಾಖಲಾಗಿದೆ. ಉಳಿದ 30 ಕೇಂದ್ರಗಳಲ್ಲಿ ‘ಕಳಪೆ’ ಮಟ್ಟದ ಮಾಲಿನ್ಯ ವರದಿಯಾಗಿದೆ.

ದೆಹಲಿಯ ಅತ್ಯಂತ ಹೆಚ್ಚು ಮಾಲಿನ್ಯ ಪೀಡಿತ ಪ್ರದೇಶಗಳ ಪೈಕಿ ಚಾಂದಿನಿ ಚೌಕ್‌ನಲ್ಲಿ 379 AQI ದಾಖಲಾಗಿದೆ. ಐಐಟಿ ದೆಹಲಿ ಮತ್ತು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ (DTU) ತಲಾ 375 AQI ದಾಖಲಿಸಿವೆ.ದೆಹಲಿ ವಿಶ್ವವಿದ್ಯಾಲಯದ ನಾರ್ತ್ ಕ್ಯಾಂಪಸ್‌ನಲ್ಲಿ 374, ಐಟಿಒದಲ್ಲಿ 367 ಹಾಗೂ ಬುರಾರಿ ಕ್ರಾಸಿಂಗ್‌ನಲ್ಲಿ 362 AQI ದಾಖಲಾಗಿದೆ.

ಇನ್ನು ಪೂಸಾ ಪ್ರದೇಶದಲ್ಲಿ 359 ಮತ್ತು ಪಂಜಾಬಿ ಬಾಗ್‌ನಲ್ಲಿ 341 AQI ದಾಖಲಾಗಿದೆ. ಇಂಡಿಯಾ ಗೇಟ್ ಸುತ್ತಮುತ್ತ 242 AQI ಇದ್ದರೆ, ಆನಂದ್ ವಿಹಾರ್‌ನಲ್ಲಿ 303 AQI ದಾಖಲಾಗಿದ್ದು, ಇಲ್ಲಿ ಗಾಳಿಯ ಗುಣಮಟ್ಟ ಇನ್ನೂ ‘ಅತ್ಯಂತ ಕಳಪೆ’ ವಿಭಾಗದಲ್ಲಿದೆ.

ಒಟ್ಟಾರೆ AQI 299ಕ್ಕೆ ಇಳಿಕೆಯಾಗಿರುವುದು ಕೊಂಚ ಸಮಾಧಾನ ತಂದಿದ್ದರೂ, ಹಲವು ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗಿಯೇ ಉಳಿದಿದೆ. ಹೀಗಾಗಿ ದೆಹಲಿ ನಿವಾಸಿಗಳು ವಾಯುಮಾಲಿನ್ಯದ ಸಮಸ್ಯೆಯಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular